ವೀರಾಜಪೇಟೆ, ಏ. ೧೭: ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ಆಟದ ಮೈದಾನದಲ್ಲಿ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದಿAದ ಎರಡನೇ ವರ್ಷದ ಜಿಲ್ಲಾಟಮಟ್ಟದ ಟೈಗರ್-೫ ರೋಮನ್ ಕ್ಯಾಥೋಲಿಕ್ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ದೊರೆತಿದೆ.
ಕ್ರೀಡಾ ಧ್ವಜವನ್ನು ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ರೆ.ಫಾ. ಮಧಲೈಮುತ್ತು ನೆರವೇರಿಸಿದರು. ಬಳಿಕ ಕಾಲ್ಚೆಂಡು ಆಟವನ್ನು ಆಡುವ ಮೂಲಕ ವಿಧ್ಯುಕ್ತವಾಗಿ ಟೈಗರ್ ಕಪ್ ಅನ್ನು ಉದ್ಘಾಟನೆ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಮಧಲೈಮುತ್ತು ಅವರು ಕೊರೊನಾ ಸಂಕಷ್ಟದ ಸಮಯದಲ್ಲೂ ಕೊರೊನಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು
(ಮೊದಲ ಪುಟದಿಂದ) ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಚಾರ. ಆಟದಲ್ಲಿ ಸೋಲು ಮತ್ತು ಗೆಲುವು ಮುಖ್ಯವಲ್ಲ. ಆಟದಲ್ಲಿ ನಾವೂ ಹೇಗೆ ನಡೆದುಕೊಂಡೆವು ಎನ್ನುವುದು ಮುಖ್ಯ. ಅಂತಿಮವಾಗಿ ಕ್ರೀಡೆಯಿಂದ ಉಂಟಾಗುವ ಐಕ್ಯತೆ ಬದುಕಿಗೆ ಮುಖ್ಯ ಎಂದರು.
ಸಹಾಯಕ ಧರ್ಮಗುರು ಲಿಯಾರ್ನಾಡ್, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೋನಿ ರವಿಕುಮಾರ್, ಪಟ್ಟಣ ಪಂಚಾಯತ್ ಸದಸ್ಯ ಬೆನ್ನಿ ಅಗಸ್ಟಿನ್, ಉದ್ಯಮಿ ಪಿ.ಟಿ. ಜೋಸೆಫ್, ಸಂತ ಅನ್ನಮ್ಮ ಸಹಕಾರ ಸಂಘದ ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು ಹದಿನೆಂಟು ತಂಡಗಳು ಭಾಗವಹಿಸಿದ್ದು, ಅಂತಿಮ ಹಣಾಹಣಿ ತಾ. ೧೮ ರಂದು (ಇಂದು) ನಡೆಯಲಿದೆ ಎಂದು ಕ್ರೀಡಾಕೂಟ ಆಯೋಜಕರು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸಂತ ಅನ್ನಮ್ಮ ಸ್ನೇಹಿತರ ಸಂಘದ ಕಾರ್ಯದರ್ಶಿ ಜೂಡಿವಾಸ್ ನಿರೂಪಿಸಿದರು.