ಗೋಣಿಕೊಪ್ಪ ವರದಿ, ಎ. ೧೭: ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಟೂರ್ನಿ ಬಲ್ಯಂಡ ಕ್ರಿಕೆಟ್ ಕಪ್‌ಗೆ ಚಾಲನೆ ನೀಡಲಾಯಿತು.

ಬಲ್ಯಂಡ ಕುಟುಂಬ ಅಧ್ಯಕ್ಷ ಬಲ್ಯಂಡ ಎಸ್ ಪ್ರತಾಪ್ ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಕುಟುಂಬದ ಪ್ರಮುಖರು, ಆಟಗಾರರು ಭಾಗವಹಿಸಿ ದ್ದರು. ಶಾಲಾ ಮುಖ್ಯ ದ್ವಾರದಿಂದ ಅಮ್ಮಕೊಡವತಿಯರು ತಳಿಯತಕ್ಕಿ ಬೊಳ್ಚದೊಂದಿಗೆ ವೇದಿಕೆಗೆ ಆಗಮಿಸಿದರು. ಕೊಡವ ಸಾಂಪ್ರಾದಾಯಿಕ ವಾಲಗದೊಂದಿಗೆ ಹೆಜ್ಜೆ ಹಾಕಿದರು. ಸಭಾ ಕಾರ್ಯಕ್ರಮವನ್ನು ಕುಟುಂಬದ ಹಿರಿಯರಾದ ಬಲ್ಯಂಡ ಶ್ರೀನಿವಾಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಹಿರಿಯರಾದ ಗುಂಬೀರ ಗಣೇಶ್, ಬಾನಂಡ ಅಪ್ಪಣಮಯ್ಯ, ಆಂಡಮಾಡ ಗೋವಿಂದಮಯ್ಯ,ಬಾನAಡ ಜನಾರ್ಧನ, ವಾಸುವರ್ಮ, ಕಾಳಪಂಡ ಟಿಪ್ಪು ಬಿದ್ದಪ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ

(ಮೊದಲ ಪುಟದಿಂದ) ಪ್ರದೀಪ್ ಪೂವಯ್ಯ ಇದ್ದರು. ೧೮ ತಂಡಗಳು ಭಾಗವಹಿಸಿವೆ. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಬಲ್ಯಂಡ ದಿನು ಸ್ವಾಗತಿಸಿದರು. ಬಲ್ಯಂಡ ಪರಿಮಳ ಪ್ರತಾಪ್, ಬಾನಂಡ ಆಶಾ ಸುಧನ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ: ಮೊದಲ ದಿನದ ಪಂದ್ಯಗಳಲ್ಲಿ ಕೊಂಡಿಜಮ್ಮAಡ ಸೆಮಿ ಫೈನಲ್‌ಗೆ ಪ್ರವೇಶ ಪಡೆಯಿತು. ಅತಿಥೇಯ ಬಲ್ಯಂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಉಳಿದಂತೆ ನೆರೆಯಂಡಮ್ಮAಡ, ಬಾನಂಡ, ಆಂಡಮಾಡ, ಅಮ್ಮತ್ತೀರ, ಚೊಟ್ಟೋಳಿಯಮ್ಮಂಡ ಮತ್ತು ಮಂಜುವAಡ ತಂಡಗಳು ಗೆಲುವಿನ ನಗೆ ಬೀರಿವೆ.

ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಕೊಂಡಿಜಮ್ಮAಡ ತಂಡವು ಬಾನಂಡ ತಂಡವನ್ನು ೨೨ ರನ್‌ಗಳಿಂದ ಸೋಲಿಸಿ ಸೆಮಿಗೆ ಪ್ರವೇಶ ಪಡೆಯಿತು. ಕೊಂಡಿಜಮ್ಮAಡ ೨ ವಿಕೆಟ್ ನಷ್ಟಕ್ಕೆ ೫೭ ರನ್ ದಾಖಲಿಸಿತು. ಬಾನಂಡ ೩ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿ ಸೋಲಿಗೆ ಶರಣಾಯಿತು.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಅತಿಥೇಯ ಬಲ್ಯಂಡ ತಂಡವು ಮನ್ನಕಮನೆ ತಂಡದ ವಿರುದ್ಧ ೪೭ ರನ್‌ಗಳಿಂದ ಗೆಲುವು ಪಡೆಯಿತು. ಬಲ್ಯಂಡ ೪ ವಿಕೆಟ್ ಕಳೆದುಕೊಂಡು ೯೦ ರನ್ ಪೇರಿಸಿತು. ಮನ್ನಕಮನೆ ೩ ವಿಕೆಟ್ ಕಳೆದುಕೊಂಡು ೪೩ ರನ್‌ಗಳಿಸಿತು. ಬಲ್ಯಂಡ ಶರತ್ ೪೫ ರನ್, ೩ ವಿಕೆಟ್, ಮನ್ನಕಮನೆ ಅಕಿಲೇಶ್ ೧೭ ರನ್, ೨ ವಿಕೆಟ್ ಪಡೆದರು.

ನೆರೆಯಂಡಮ್ಮAಡ ತಂಡವು ಚೀರಮ್ಮನ ತಂಡವನ್ನು ೬ ರನ್‌ಗಳಿಂದ ಸೋಲಿಸಿತು. ನೆರೆಯಂಡಮ್ಮAಡ ನಿಗದಿತ ೫ ಒವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೫೩ ರನ್ ದಾಖಲಿಸಿತು. ಚೀರಮ್ಮನ ೪ ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿ ಸೋಲಿಗೆ ಶರಣಾಯಿತು. ನೆರೆಯಂಡಮ್ಮAಡ ದರ್ಶನ್ ೩ ವಿಕೆಟ್ ಪಡೆದರು.

ಬಾನಂಡ ತಂಡವು ಪಾಡಿಯಮ್ಮಂಡ ವಿರುದ್ದ ೪ ರನ್‌ಗಳ ಗೆಲುವು ಪಡೆಯಿತು. ಪಾಡಿಯಮ್ಮಂಡ ೨ ವಿಕೆಟ್ ನಷ್ಟಕ್ಕೆ ೮೦ ರನ್ ಕಲೆ ಹಾಕಿತು. ಬಾನಂಡ ೨ ವಿಕೆಟ್ ಕಳೆದುಕೊಂಡು ೮೪ ರನ್ ದಾಖಲಸಿತು. ಪಾಡಿಯಮ್ಮಂಡ ಆಶಿಕ್ ೬೨ ರನ್, ೨ ವಿಕೆಟ್, ಬಾನಂಡ ಗಗನ್ ೪೦ ರನ್, ೧ ವಿಕೆಟ್ ಪಡೆದು ಮಿಂಚಿದರು.

ಆAಡಮಾಡ ತಂಡಕ್ಕೆ ಚಿಲ್ಲಜಮ್ಮಂಡ ವಿರುದ್ದ ೯ ವಿಕೆಟ್ ಗೆಲುವು ದೊರೆಯಿತು. ಚಿಲ್ಲಜಮ್ಮಂಡ ೫ ವಿಕೆಟ್ ನಷ್ಟಕ್ಕೆ ೫೦ ರನ್ ಕಲೆ ಹಾಕಿತು. ಆಂಡಮಾಡ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಚಿಲ್ಲಜಮ್ಮಂಡ ದರ್ಶನ್ ೩೮ ರನ್, ಆಂಡಮಾಡ ಜಗ್ಗು ೨೮ ರನ್, ಪವನ್ ೪ ವಿಕೆಟ್ ಪಡೆದರು.

ಅಮ್ಮತ್ತೀರ ತಂಡವು ಗುಂಭೀರ ತಂಡವನ್ನು ೭೧ ರನ್‌ಗಳಿಂದ ಮಣಿಸಿತು. ಅಮ್ಮತ್ತೀರ ೨ ವಿಕೆಟ್ ನಷ್ಟಕ್ಕೆ ೧೨೫ ರನ್ ಪೇರಿಸಿತು. ಗುಂಭೀರ ೩ ವಿಕೆಟ್ ಕಳೆದುಕೊಂಡು ೬೪ ರನ್‌ಗಳಷ್ಟೆ ಗಳಿಸಿತು. ಗುಂಭೀರ ಯತೀಶ್ ೪೦ ರನ್, ಅಮ್ಮತ್ತೀರ ಗಣೇಶ್ ೬೭ ರನ್ ಗಳಿಸಿದರು.

ಚೊಟ್ಟೋಳಿಯಮ್ಮಂಡ ತಂಡವು ನೆರೆಯಂಡಮ್ಮAಡ ತಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ನೆರೆಯಂಡಮ್ಮAಡ ೪ ವಿಕೆಟ್ ನಷ್ಟಕ್ಕೆ ೩೯ ರನ್ ದಾಖಲಿಸಿತು. ಚೊಟ್ಟೋಳಿಯಮ್ಮಂಡ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿತು.

ಮಂಜುವAಡ ತಂಡವು ಅಚ್ಚಿಯಂಡವನ್ನು ೪ ರನ್‌ಗಳಿಂದ ಸೋಲಿಸಿತು. ಮಂಜುವAಡ ೧ ವಿಕೆಟ್‌ಗೆ ೫೦ ರನ್ ದಾಖಲಿಸಿತು. ಅಚ್ಚಿಯಂಡ ೩ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಿತು.