ಕಾವೇರಿ ಪುರಾಣವನ್ನು ಈ ರೀತಿ ಹಾಡುವರು
ಬಾಳೊ, ಬಾಳೊ ನಂಗಡ - ಬಾಳು ಬಾಳು ನಮ್ಮಯ
ದೇವ ಬಾಳೊ ಮಾದೇವ - ದೇವನೆ ಬಾಳು ಮಹಾದೇವ
ಪಟ್ಟ ಬಾಳೊ ಸೂರಿಯ - ಪಟ್ಟದಲ್ಲಿರುವ ಸೂರ್ಯನೇ ಬಾಳು
ಕೂಡ ಬಾಳೊ ಚಣ್ಣೂರ - ಜೊತೆಗೆ ಚಂದ್ರನೇ ಬಾಳು
ಭೂಮಿ ಬಾಳೊ ಜಬ್ಬೂಮಿ - ಭೂಮಿ ಬಾಳಲಿ ಜನ್ಮ ಭೂಮಿ
ಕನ್ನಿ ಬಾಳೊ ಕಾವೇರಿ - ಕನ್ಯೆ ಬಾಳು ಕಾವೇರಿ
ಗಂಗೆ ಬಾಳೊ ತೀರ್ತ - ಗಂಗೆಯೇ ಬಾಳು ತೀರ್ಥದೇವಿ
ತೀರ್ತ ಕುಳಿಚಕ್ಕ - ತೀರ್ಥಸ್ನಾನ ಮಾಡಿದಾಗ
ಈ ಚೆರ್ ಮನ್ಸಂಡ - ಈ ನರ ಮನುಷ್ಯನ
ಕೆಜ್ಜ ಪಾಪ ಪೋಕುಲ - ಮಾಡಿದ ಪಾಪ ಹೋದೀತು
ಮೇಲೆ ಪಾಪ ಪೊದ್ದಲ - ಮತ್ತೆ ಪಾಪ ಅಂಟದು
ಪೊದ್ದ್ನ ಶನಿಯೆಲ್ಲ - ಹಿಡಿದ ಶನಿ ಗ್ರಹಚಾರವೆಲ್ಲ
ದೂರ ನೀಂಗಿ ನಿಕ್ಕುಲ - ದೂರ ನೀಗಿ ನಿಂತೀತು
ಕಾವರ್ಯಮ್ಮೆ ದೇವಿರ - ಕಾವೇರಿ ಮಾತೆ ದೇವಿಯ
ಸತ್ತಿಯ ಸ್ಥಳತ್ಲ್ - ಸತ್ಯದ ಸ್ಥಳದಲ್ಲಿ
ಸತ್ತಿಯ ನಡಪಕ್ಕ - ಸತ್ಯವೇ ಆಳುತ್ತಿರುವಾಗ
ಅನ್ನತ ನೆಲೆಯಾಪ - ಸತ್ಯವೇ ಇಲ್ಲಿ ನೆಲೆಗೊಂಡಿದೆ
ಕೇಳೊ ಕೇಳೋ ಸಂಙÁದಿ - ಕೇಳೋ ಕೇಳು ಗೆಳೆಯನೇ
ಸಂಙÁದಿ ಮನವೇಂಗಿ - ಸAಗಾತಿಯ ಮನವರಿತು
ಕೊಟ್ಟೊಂದ್ ಮರಿಕನ - ವಾದ್ಯವನ್ನು ನುಡಿಸೋಣ
ಪಾಟೊಂದ್ ತಿರ್ಕನ - ಹಾಡೊಂದನ್ನು ಹಾಡೋಣ
ಕೊಟ್ಟೊಂದ್ ಮರಿಪಕ್ಕ್ - ವಾದ್ಯವನ್ನು ನುಡಿಸಲು
ಬಟ್ಟಿ ಕೂಟೆ ಬೋಂಡಲ - ಬಟ್ಟೆ ಬುಟ್ಟಿ ತಾನೇಕೆ?
ಕತ್ತಿ ಮತ್ತ್ ತಾಂಬೋAಡ - ಕತ್ತಿ, ಕೊಡಲಿ ತಾನೇಕೆ ?
ಮುಲ್ಲೆ ಪೊವೆಳೆ ಪೊಂಗ - ಮಲ್ಲಿಗೆಯAಥ ಎಳೆ ಹೆಂಗಳೆಯರು
ಕೂಬಾಕಿ ಮರಿಚೋಲೆ - ಅನ್ನವನ್ನು ಬಸಿದಂತೆ
ಎಲ್Aಬಿಲ್ಲತ ನಾವ್ನ - ಎಲುಬಿಲ್ಲದ ನಾಲಿಗೆಯ
ನ್Ãಟಿತು ಮಡಕಿತು - ಚಾಚುತ್ತಾ ಮಡÀಚುತ್ತ
ಪಾಟೊಂದ್ ಮರಿಕನ - ಹಾಡಿನ ಗತಿಯನ್ನು ಬದಲಿಸುತ್ತಾ
ಕೊಟೊಂದ್ ಮರಿಕಣೆ - ವಾದ್ಯದ ಲಯವನ್ನು ಬದಲಿಸುತ್ತಾ
ಪಾಡುವ ತರ ಬೋರೆ - ಹಾಡುವಂಥ ವಿಧ ಬೇರೆ
ಎನ್ನ ಮೊಳಿ ಪಾಡನ ? - ಯಾವುದರ ಕುರಿತು ಹಾಡೋಣ ?
ಏದ್ ದಿಕ್ಕ್ ಪೋಕನ ? - ಯಾವ ದಿಕ್ಕಿನಲ್ಲಿ ಸಾಗೋಣ ? ಆರ್ನ ತುದಿಕನ ? - ಯಾರನ್ನು ಸ್ತುತಿಸೋಣ ?
ಅಲ್ಲತಾರೊ ಅಲ್ಲಲ - ಬೇರೆ ಯಾರೂ ತಾವೇಕೆ
ಕಾವರ್ಯಮ್ಮೆ ಮಾತಾಯಿ - ಕಾವೇರಿಯಮ್ಮ ಮಹಾತಾಯಿ
ಪುಟ್ಟ್ನ ಕಥೆ ಕೇಳ್ - ಹುಟ್ಟಿದ ಈ ಕಥೆ ಕೇಳು
ಅಕ್ಕು ಕೇಳ್ ಸಂಙÁದಿ - ಹೌದು ಕೇಳೋ ಗೆಳೆಯನೇ ತೇಂದುಳಿ ತೊರಮಾಂಗೆ - ಜೇನಿನAತ ಕಾಡು ಮಾವು ತಿಂದಿನೊ ಕೊದಿ ಪೋಗ - ತಿಂದರಾಸೆ ತೀರದು
ದೇವ ತಂದ ಪೂಮಾಲೆ - ದೇವರು ಕೊಟ್ಟ ಹೂ ಮಾಲೆ
ಚೂಡಿನೊ ಕೊದಿ ಪೋಗ - ಮುಡಿದರಾಸೆ ತೀರದು
ಪೊಂಗ ತುದೆಲೆ ಭೋಗ - ಪತ್ನಿ ಕೊಟ್ಟ ವೀಳ್ಯವ
ತಿಂದಿನೊ ಕೊದಿ ಪೋಗ - ಜಗಿದರಾಸೆ ತೀರದು
ಅವ್ವ ತಂದ ತಂಗೂಳ್ - ಅವ್ವ ಕೊಟ್ಟ ತಂಗೂಳು
ಉAಡಿನೊ ಕೊದಿ ಪೋಗ - ಉಂಡರಾಸೆ ತೀರದು
ಅಪ್ಪ ತಂದ ಕುಪ್ಪಿಯ - ಅಪ್ಪ ಕೊಟ್ಟ “ಕುಪ್ಪಿಯ”(ಕುಪ್ಪಸ)
ಇಟ್ಟಿನೊ ಕೊದಿ ಪೋಗ - ತೊಟ್ಟರಾಸೆ ತೀರದು
ಕಾವರ್ಯಮ್ಮೆ ದೇವಿನ - ಕಾವೇರಿಯಮ್ಮ ದೇವಿಯನು
ಪಾಡಿನೊ ಕೊದಿ ಪೋಗ - ಹಾಡಿದಷ್ಟೂ ಆಸೆ ತೀರದು
ಕೇಳೊ ಕೇಳೊ ಸಂಙÁದಿ - ಕೇಳೋ ಕೇಳು ಗೆಳೆಯನೇ
ಪಂಡ್-ಪAಡ್ ಕಾಲತ್ - ಅಂದು ಪೂರ್ವ ಕಾಲದಿ
ಕೃತಯುಗ ನಲ್ಲಾಲ್ - ಆ ದಿವ್ಯ ಕೃತಾಯುಗದಿ
ಕಶ್ಯಪ ಮಾಮುನಿಕ್ - ಮಹಾಮುನಿ ಕಶ್ಯಪಗೆ
ದಂಡಾಳಿAಜ ದೇವಿಯ - ಇಬ್ಬರಿದ್ದರು ಪತ್ನಿಯರು
ನೀಲ ಕೊಡಿ ದಿತಿಯು - ಗುಣವಂತೆಯು ದಿತಿಯು
ದೇವಕನ್ನಿ ಅದಿತಿ - ದೇವಕನ್ಯೆ ಅದಿತಿಯು
ಅಕ್ಕ ತಂಗೆ ದಂಡಾಳು - ಅಕ್ಕ ತಂಗಿಯರಿಬ್ಬರೂ
ತಣ್ಣನೆ ಪೊಲವಕ್ಕ - ಆನಂದದಿ ಬಾಳುತ್ತಿರುವಾಗ
ಕಾಲ ಮೂವಾಂಡಾಪಕ್ಕ - ಮೂರು ವರ್ಷ ಕಳೆವಾಗ
ಕನ್ನಿ ಪೊಲೆ ಕಂಡತ್ - ಋತು ಮತಿಯರಾದರು
ಆ ಪೊಲೆ ಕುಳಿಚಿತ್ - ಋತು ಸ್ನಾನ ಮುಗಿಸಿರಲು
ಮಕ್ಕ ಪೊಲೆ ಕಂಡತ್ - ಮತ್ತೆ ಮುಟ್ಟು ನಿಂತಿತು
ಆ ಪೊಲೆಯೊ ನಿಂದಿತ್ - ಮುಟ್ಟು ನಿಂತಿತಾಮೇಲೆ
ಅಕ್ಕ ತಂಗೆ ದಂಡಾಕು - ಅಕ್ಕ ತಂಗಿಯರಿಬ್ಬರು
ತಾAಗ್ನ ಕುಳಿಯಮೆ - ಗರ್ಭವತಿಯರಾದರು
ಆರೂ ನಾಲೂ ಕೂಡಣೆ - ಆರು ನಾಲ್ಕು ಸೇರಲು
ತಿಂಗ ಪತ್ತ್ ತ್Ãಂದತ್ - ಹತ್ತು ತಿಂಗಳಾಯಿತು
ಅನ್ನನಿಪ್ಪ ಕಾಲತ್ - ಕಾಲ ಹೀಗೆ ಕಳೆದಿರಲು
ನಲ್ಲೋರಾಚೆ ನಾಳಾಯಿ - ಶುಭ ದಿನವೊಂದರಲ್ಲೂ
ದೇವ ಕನ್ನಿ ಅದಿತಿ - ದೇವಕನ್ಯೆ ಅದಿತಿಯು
ದೇಬುವಳ ಪೆತ್ತತ್ - ದೇವತೆಯರಿಗೆ ಜನ್ಮವಿತ್ತಳು
ಅಕ್ಕಂಗೊತ್ತ ತಂಗಮ್ಮ - ಅಕ್ಕನAತೆ ತಂಗಿಯೂ
ನೀಲ ಕೊಡಿ ದಿತಿಯೊ - ಗುಣವಂತೆ ಆ ದಿತಿಯೂ
ರಾಕ್ರಾಸ್ಯಳ ಪೆತ್ತತ್ - ರಾಕ್ಷಸರಿಗೆ ಜನ್ಮ ವಿತ್ತಳು
ರಾಕ್ರಾಸ್ಯಳು ದೇಬುವ - ರಾಕ್ಷಸರು ದೇವತೆಯರು
ಆಳ್ ಕಾಳೆ ತೇಂದಿತ್ - ಬೆಳೆದು ದೊಡ್ಡವರಾಗುತ್ತಾ
ತಣ್ಣನೆ ಪೊಲವಕ್ಕ - ಸುಖದಿ ಬಾಳುತ್ತಿರಲಾಗ...
“ಚಾವದೂ ಪರಪದೂ - “ಹುಟ್ಟು ಸಾವು’’ ಎಂಬುದು
ಎAಗಕ್ ತರವಲ್ಲ - ನಮಗಿದು ತರವಲ್ಲ
ಈಂಗೆನ್ನ ಕೊಯಲೆನ್ನ ? - ಇದಕೇನು ಉಪಾಯವಿದೆ ?”
ಎಂದೆಣ್ಣಿ ಪರಂದಿತ್ - ಎAದು ಮಾತನಾಡುತ್ತಾ
ಬೇರಂಗೊAಡಳತತ್ - ಚಿAತೆಗೊAಡು ಕೂತರು
ಬೇರಂಗೊAಡಳತದ್ - ಚಿAತೆಗೊAಡು ಕೂತು
ನಾರಾಯಣ ದೇವೈಯ್ಯ - ಇದನ್ನರಿತ ನಾರಾಯಣ ದೇವ
ತಾನರಿಂಜಿಕೊAಡಿತ್ - ವಿಷಯವರಿತುಕೊAಡನು
ದೇಬುವಳ ಕಾಕಿತ್ - ದೇವತೆಯರನ್ನು ಕರೆಸಿಕೊಂಡು
ರಾಕ್ರಾಸ್ಯಳ ಕೂಟಿತ್ - ರಾಕ್ಷಸರನ್ನೂ ಸೇರಿಸಿ
ಈ ಬಾಕ್ ಪರಂದತ್ - ಈ ಮಾತನ್ನು ಹೇಳಿದನು
“ಜಬ್ಬೂಮಿರ ಮೀದಲ್’’ - ಈ ಭೂಮಿಯ ಮೇಲೆ
ಭೂಮಿಕೆಲ್ಲೊಯಂದದ್ - ಎಲ್ಲಕ್ಕಿAತಲೂ ಎತ್ತರದಲ್ಲಿ
ಮಹಮೇರು ಪರುವತ - ಮಹಾಮೇರು ಪರ್ವತವಿದೆ
ಆ ಕುಂದ್ ಪೊರಿಚಿತ್ - ಆ ಪರ್ವತವನ್ನು ಕಿತ್ತು ತಂದು
ಏಳ್ ಕಡಕಾಬರ - ಏಳು ಕಡಲಿನಾಚೆಗೆ
ಏಳ್ ಕಡಕೀಬರ - ಏಳು ಕಡಲಿನೀಚೆಗೆ
ನೆತ್ತಾಕಡ ಪಾಕಡ - ನೆತ್ತಿಗಡಲು ಹಾಲ್ಗಡಲು
ಪಾಕಡತ್ ತಾತಿತ್ - ಹಾಲ್ಗಡಲಲ್ಲಿ ನಿಲ್ಲಿಸಿರಿ
ಪಾಕಡ ಕಡಂದಿನೊ - ಹಾಲ್ಗಡಲನ್ನು ಮಥಿಸಿದರೆ
ಅಮೃತ ಪೊರಡುವ - ಅಮೃತ ಹೊರಗೆ ಬಂದೀತು
ಅಮೃತ ಕುಡಿಚಕ್ಕ - ಅಮೃತವನ್ನು ಕುಡಿದವರು
ಚಾವಂಡ ಪರಕಂಡ - ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕದೆ
ತಣ್ಣನೆ ಪೊಲುವಲು” - ಸುಖದಿಂದ ಇರಬಹುದು”
ಎಂದೆಣ್ಣಿ ಪರಂದಿತ್ - ಎAದು ತಾನು ಹೇಳುತ್ತಾ
ಮುತ್ತಪ್ಪಣೆ ಮಾಡಣೆ - ಅಪ್ಪಣೆಯನ್ನು ಕೊಡಿಸಲು
ರಾಕ್ರಾಸಿಯ ದೇಬುವ - ರಾಕ್ಷಸರು ದೇವತೆಗಳು
ಚಂದೋಳ ಪೆರ್ಚಾಯಿ - ಆನಂದದಿAದ ಒಂದಾಗಿ
ಪಾಕಡ ಕಡಂದತ್ - ಹಾಲ್ಗಡಲನ್ನು ಮಥಿಸಿದರು
ಅಕ್ಕಣೆಕ್ ಮಮ್ಮಾಯ! - ಆಗ ಅದೇನು ಮಾಯೆ!
ಧನ್ವಂತರಿ ಪುಟ್ಟಿತ್ - ಧನ್ವಂತರಿಯು ಹುಟ್ಟುತ್ತಾ
ಪಾಕಡತಿಂಜೆದ್ದಿತ್ - ಹಾಲ್ಗಡಲಿನಿAದ ಎದ್ದು
ಅಮೃತೋಡೆ ಬಂದಿತ್ - ಅಮೃತದೊAದಿಗೆ ಹೊರಬಂದು
ಪೊAಗಲಶ ಪಾತ್ರನ - ಹೊಂಗಲಶ ಪಾತ್ರೆಯನ್ನು
ಅಲ್ಲಿ ಕೋಂದ್ ಬೆಕ್ಕಣೆ - ಅಲ್ಲಿಗೆ ತಂದು ಇಡಲಾಗ
ರಾಕ್ರಾಸಿಯ-ದೇಬುವ - ರಾಕ್ಷಸರು-ದೇವತೆಯರು
“ನಾಕ್ ನಾಕ್”ಂದೆಣ್ಣಿತ್ - ನನಗೆ ನನಗೆಂದೆನ್ನುತ್ತ
ಕೂರ್ ಪಡೆ ಪೊತ್ತಿತ್ - ಎಳೆದಾಡುತ್ತಾ ಹೊಡೆದಾಡಿ
ರಾಕ್ರಾಸಿಯ ಗೆದ್ದಿತ್ - ರಾಕ್ಷಸರೇ ಗೆದ್ದರು
ಪೊಂಗಲಶ ಕೊಂಡಿತ್ - ಹೊAಗಲಶ ಪಾತ್ರೆಯೊಂದಿಗೆ
ಅಲ್ಲಿAಜ ಪೊರಡಣೆ - ಅಲ್ಲಿಂದ ಹೊರಡಲು
ನಾರಾಯಣ ದೇವೈಯ್ಯ - ನಾರಾಯಣ ದೇವನು
ತಾನೆನ್ನ ಪಣಿ ಕೆಜ್ಜ - ತಾನೇನು ಮಾಡಿದನು
ಅಲ್ಲತೊಂದು ಅಲ್ಲಲ - ಅಲ್ಲದೇನೂ ತಾನಲ್ಲ
ಆಣ್ ರೂಪ ಬುಟ್ಟಿತ್ - ಗಂಡು ರೂಪವನ್ನು ತೊರೆದು
ಮೋಹಿನಿರ ರೂಪಾಯಿ - ಮೋಹಿನಿಯ ರೂಪದಿ
ಪೊಣ್ಣಾಯಿತ್ ನಿಂದತ್ - ಹೆಣ್ಣಾಗಿ ನಿಂತನು
ಅಕ್ಕಣೆಕ್ ಸಂಙÁದಿ - ಆಗ ತಾನು ಸಂಗಾತಿ
ಲಕ್ಷಿö್ಮದೇವಿ ಮಾತಾಯಿ - ಲಕ್ಷಿö್ಮÃ ದೇವಿ ಮಹಾತಾಯಿ
ಪಾರ್ವತ್ಯಮ್ಮೆ ದೇವಿರ - ಪಾರ್ವತಿ ದೇವಿಯಂಶದ
ಮಮ್ಮಾಯವತಾರ - ಮಾಯದೊAದು ಅವತಾರ
ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನು
ಕೂಟ್ಕ್ ತೊಣೆಯಾಯಿ - ಒಟ್ಟಿಗೆ ಜೊತೆ ಮಾಡಿ
ಅಲ್ಲಿಕೆ ಅಯಚತ್ - ಅಲ್ಲಿಗೆ ಕಳುಹಿಸಿದನು
ದೇವಿಯಳು ದಂಡಾಳು - ದೇವಿಯರಿಬ್ಬರೂ
ಜೋಡೊತ್ತಿತ್ ಪೋಕಣೆ - ಜೊತೆಯಾಗಿ ಹೋಗುತ್ತಿರಲು
ರಾಕ್ರಾಸಿಯ ಕಂಡಿತ್ - ರಾಕ್ಷಸರು ಇವರನ್ನು ನೋಡಿ
ಚಾಯಿಕ್ ಮರ್ಳಾಯಿ - ಚಂದಕ್ಕೆ ಮರುಳಾಗಿ
“ನಾಕ್ ನಾಕ್”ಂದೆಣ್ಣಿತ್ - “ನನಗೆ ನನಗೆ” ಎನ್ನುತ್ತಾ
ಅಮೃತೋಡೆ ಪಾತ್ರನ - ಅಮೃತದ ಪಾತ್ರೆಯನ್ನು
ಮೋಹಿನಿಕ್ಕೊಡ್ತತ್. - ಮೋಹಿನಿಗೆ ಕೊಟ್ಟರು
ಅದ್ ಕಂಡ ಮೋಹಿನಿ - ಅದನ್ನು ಕಂಡ ಮೋಹಿನಿ
ಪೊಂಗಲಶ ಪಾತ್ರನ - ಹೊಂಗಲಶ ಪಾತ್ರೆಯನ್ನು
ದೇಬುವಕ್ಕೊಡ್ತತ್. - ದೇವತೆಯರಿಗೆ ಕೊಟ್ಟಳು
ದೇಬುವಕ್ಕೊಡ್ತಿತ್ - ದೇವತೆಯರಿಗೆ ಕೊಟ್ಟು
ಅಲ್ಲಿಂಜಿ ಪೊರಟಿತ್ - ಅಲ್ಲಿಂದ ಹೊರಡುತ್ತಾ
ಸಹ್ಯಮಲಕ ಊರ್ಲ್ - ಸಹ್ಯಮಲಕ ಊರಲ್ಲಿ
ಕಲ್ಲಾಯಿ ಮರಿಂಜತ್. - ಕಲ್ಲಾಗಿ ನೆಲೆ ನಿಂತಳು
ಕೇಳೊ ಕೇಳೊ ಬೆಂದುವೆ - ಕೇಳೋ ಕೇಳು ನೆಂಟನೇ
ಆ ಕಲ್ಲ್ ನಡುಕಾಲೆ - ಆ ಕಲ್ಲಿನ ನಡುವಿನಿಂದ
ನುಗ್ಗಲು ಪೊರಡಲು; - ನುಗ್ಗಿ ಹೊರ ಬರಬಹುದು
ನುಗ್ಗಿತ್ ಪೊರಟನೊ - ಹೀಗೆ ನುಗ್ಗಿ ಹೊರಟರೆ
ಕೆಜ್ಜ ಪಾಪ ಪೋಪಲ; - ಮಾಡಿದ ಪಾಪ ಕಳೆದೀತು
ಮೇಲೆ ಪಾಪ ಪೊದ್ದುಲೆ; - ಮಾಡಿದ ಪಾಪ ಬರಲಾರದು
ಅನ್ನತ ನೆಲೆಯಾಪ - ಅಂಥ ಕ್ಷೇತ್ರ ತಾನದು
ಇಞÆ್ಞ ಕೇಳೊ ಸಂಙÁದಿ - ಇನ್ನೂ ಕೇಳು ಸಂಗಾತಿ
ಲೋಪಾಮುದ್ರೆ ದೇವಿನ - ಲೋಪಾಮುದ್ರೆ ದೇವಿಯನ್ನು
ಲಕ್ಷಿö್ಮದೇವಿ ಕೊಂಡಿತ್ - ಲಕ್ಷಿö್ಮÃ ದೇವಿಯು ಪಡೆಯುತ್ತಾ
ನಾಲ್ ಮಂಡೆ ಬ್ರಹ್ಮಂಗ್ - ನಾಲ್ಕು ಶಿರದ ಬ್ರಹ್ಮನಿಗೆ
ದತ್ತ್ ಮೋವಂದೆಣ್ಣಿತ್ - ದತ್ತು ಮಗಳೆಂದೆನ್ನುತ್ತಾ
ಕೈನ್Ãಟಿ ಕೊಡ್ತತ್. - ಕೈ ನೀಡುತ್ತಾ ಕೊಟ್ಟಳು
ಅದ್ ಕಂಡ ಬ್ರಹ್ಮನ್ - ಇದನ್ನರಿತ ಬ್ರಹ್ಮ ದೇವನು
ಚಂದೋಳ ಪೆರ್ಜಾಯಿ-ಸಂತೋಷಗೊಳ್ಳುತ್ತಾ
ಲೋಪಾಮುದ್ರೆ ದೇವಿನ-ಲೋಪಾಮುದ್ರೆ ದೇವಿಯನ್ನು
ಕೊಂಡಾಟತ್ ಚಾಕ್ಚಿ-ಪ್ರೀತಿಯಿಂದ ಸಾಕಿದನು.
(ಮುಂದುವರಿಯುವುದು)
ಕನ್ನಡಾನುವಾದ : - ನಾಗೇಶ್ ಕಾಲೂರು.