ಮಡಿಕೇರಿ, ಏ. ೧೭: ಆದಾಯ ತೆರಿಗೆ ಆಯುಕ್ತರಾಗಿರುವ ಹಾಗೂ ಇತ್ತೀಚೆಗೆ ಹೊಸದಾಗಿ ಸೃಷ್ಟಿಸಲಾಗಿರುವ ಫಾರಿನ್ ಅಸೆಟ್ ಇನ್ವೆಷ್ಟಿಗೇಷನ್ ಯುನಿಟ್ (ಈಂIU) ಉಪನಿರ್ದೇಶಕರಾಗಿ ಆಯ್ಕೆಯಾದ ಕೊಡಗಿನ ಡಾ. ಕೊಟ್ಟಂಗಡ ಪೆಮ್ಮಯ್ಯ ಅವರನ್ನು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸನ್ಮಾನಿಸಿದರು. ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಯುವ ಅಧಿಕಾರಿ ಪೆಮ್ಮಯ್ಯ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಪೆಮ್ಮಯ್ಮ ಅವರ ತಾಯಿ ಕೊಟ್ಟಂಗಡ ವಿಜು ದೇವಯ್ಯ ಅವರು ಹಾಜರಿದ್ದರು. ಗುಜರಾತ್‌ನ ಸೂರತ್‌ನಲ್ಲಿ ಐ.ಆರ್.ಎಸ್. ಶ್ರೇಣಿಯ ಅಧಿಕಾರಿಯಾಗಿ ನಿಯುಕ್ತಿಗೊಂಡು ಆದಾಯ ತೆರಿಗೆ ಆಯುಕ್ತರಾಗಿದ್ದ ಪೆಮ್ಮಯ ಅವರು ಇತ್ತೀಚೆಗೆ ಮತ್ತೊಂದು ಜವಾಬ್ದಾರಿಗೆ ಆಯ್ಕೆಯಾಗಿದ್ದಾರೆ.