ಕುಶಾಲನಗರ, ಏ. ೧೭ : ಸೋಮವಾರಪೇಟೆ ತಾಲೂಕು ಹಾನಗಲ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಜಿಲ್ಲಾ ಯುವ ಘಟಕ ಅಧ್ಯಕ್ಷ ಮತ್ತು ಸಂಗಡಿಗರಿAದ ನಡೆದ ಹಲ್ಲೆಯನ್ನು ಸೋಮವಾರಪೇಟೆ ತಾಲೂಕು ಬಿಜೆಪಿ ಪ್ರಮುಖರು ಖಂಡಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಜಿಲ್ಲಾ ಸಹ ವಕ್ತಾರ ಬಿ.ಜೆ ದೀಪಕ್, ಕೂಡಲೇ ಆರೋಪಿಗಳನ್ನು ಬಂಧಿಸುವAತೆ ಒತ್ತಾಯಿಸಿದ್ದಾರೆ. ಹಾನಗಲ್ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತನ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮಿಥುನ್ ಮತ್ತು ಇತರರನ್ನು ತಕ್ಷಣ ಬಂಧಿಸುವAತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮುನುಕುಮಾರ್ ರೈ, ತಾಲೂಕು ವಕ್ತಾರ ಕೆ.ಜಿ ಮನು, ತಾಲೂಕು ವಕ್ತಾರ ಎಸ್.ಎನ್. ರಘು, ಪ್ರಧಾನ ಕಾರ್ಯದರ್ಶಿಗಳಾದ ಎಂ.ಡಿ. ಕೃಷ್ಣಪ್ಪ, ಮೋಕ್ಷಿತ್ ಹಾಗೂ ಕಾರ್ಯದರ್ಶಿ ಗೌತಮ್ ಇದ್ದರು.