ಮಡಿಕೇರಿ, ಏ. ೧೭ : ಇಲ್ಲಿಗೆ ಸಮೀಪದ ಮರಗೋಡುವಿನಲ್ಲಿ ಕಾನಡ್ಕ ಕುಟುಂಬದ ವತಿಯಿಂದ ಯುಗಾದಿ ಹಬ್ಬವನ್ನು ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವದರ ಮೂಲಕ ಸಂಭ್ರಮದಿAದ ಆಚರಿಸಲಾಯಿತು. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುವದರ ಮೂಲಕ ಸಮೂದಾಂiÀiದ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣರಾದರು.
ಕಾನಡ್ಕ ಕುಟುಂಬದ ಐನ್ಮನೆಯಲ್ಲಿ ನಡೆದ ೮ನೇ ವರ್ಷದ ಕಾರ್ಯಕ್ರಮವನ್ನು ಮರಗೋಡು ಗ್ರಾಮ ಪಂಚಾಯ್ತಿ ಸದಸ್ಯ ಇಟ್ಟಣಿಕೆ ನಾಗೇಶ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಅಯ್ಯಂಡ್ರ ಅಪ್ಪಯ್ಯ ಅರೆಭಾಷೆ ಗೌಡ ಜನಾಂಗದ ಆಚಾರ ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವದು ಇಂದಿನ ಯುವ ಜನಾಂಗದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಕುಟುಂಬದ ಹಿರಿಯರಾದ ಕಾನಡ್ಕ ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಹಬ್ಬಾಚರಣೆ ನಡೆಯಿತು.
ಹಬ್ಬದಲ್ಲಿ ಸುಮಾರು ಇಪ್ಪತ್ತು ವಿವಿಧ ಬಗೆಯ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ನೂರಾರು ಮಂದಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆ ಕವಿತಾ ಚಂದ್ರಪ್ರಕಾಶ್, ಕಾನಡ್ಕ ದೇವಯ್ಯ, ವೈಷ್ಣವಿ ಫುಟ್ಬಾಲ್ ಸಂಘದ ಅಧ್ಯಕ್ಷ ಪಾಣತ್ತಲೆ ಜಗದೀಶ್, ಮುಕ್ಕಾಟಿರ ಲೋಹಿತ್ ಚಂಗಪ್ಪ, ಕಾನಡ್ಕ ಆನಂದ ಮುಂತಾದವರು ಪಾಲ್ಗೊಂಡಿದ್ದರು. ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾನಡ್ಕ ಭವಾನಿ ಚಂಗಪ್ಪ, ತಾರಾ ದಿನೇಶ್ ಪ್ರಾರ್ಥಿಸಿದರೆ, ಪ್ರಸಾದ್ ಹಾಗೂ ಪುನಿತ್ ಸ್ವಾಗತಿಸಿದರು. ಕಾನಡ್ಕ ಹನೀಶ್ ನಿರೂಪಿಸಿದರೆ, ವಿಜಯಕುಮಾರ್ ವಂದಿಸಿದರು.