ಮಡಿಕೇರಿ, ಏ. ೧೭: ಜಿಲ್ಲೆಯಲ್ಲಿ ಶನಿವಾರ ೫೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೫೩ ಆರ್ಟಿಪಿಸಿಆರ್ ಮತ್ತು ೨ ಪ್ರಕರಣ ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಮಡಿಕೇರಿ ತಾಲೂಕಿನಲ್ಲಿ ೨೮, ಸೋಮವಾರಪೇಟೆ ತಾಲೂಕಿನಲ್ಲಿ ೫, ವೀರಾಜಪೇಟೆ ತಾಲೂಕಿನಲ್ಲಿ ೨೨ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೬೮೦೬ ಆಗಿದ್ದು, ೬೪೩೧ ಮಂದಿ ಗುಣಮುಖರಾಗಿದ್ದಾರೆ. ೨೯೨ ಸಕ್ರಿಯ ಪ್ರಕರಣಗಳಿದ್ದು, ೮೩ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ಮೆAಟ್ ವಲಯಗಳ ಸಂಖ್ಯೆ ೧೬೮ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.