ಸುಂಟಿಕೊಪ್ಪ, ಏ. ೧೭: ಉಲುಗುಲಿ ಗ್ರಾಮದ ಪನ್ಯದಲ್ಲಿ ನೆಲೆನಿಂತಿರುವ ಮಳ್ಳೂರು ಬೆಳ್ಳಾರಿಕಮ್ಮ ದೇವಾಲಯದ ವಾರ್ಷಿಕ ಪೂಜಾ ಮಹೋತ್ಸವವು ತಾ. ೧೯ ರಂದು (ನಾಳೆ) ನಡೆಯಲಿದೆ.
ಅಂದು ಬೆಳಿಗ್ಗೆ ೧೧.೩೦ಕ್ಕೆ ಭಂಡಾರ ತೆಗೆಯುವುದು, ೧೧.೩೫ಕ್ಕೆ ಭಂಡಾರ ಮೆರವಣಿಗೆ ಹೊರಡುವುದು. ಮಧ್ಯಾಹ್ನ ೧೨.೩೦ ರಿಂದ ೧.೩೦ ಗಂಟೆಯವರೆಗೆ ದೇವರ ಉತ್ಸವ, ೧.೩೦ ರಿಂದ ೨.೩೦ರವರೆಗೆ ದೇವರಿಗೆ ವಿಶೇಷ ಪೂಜೆಗಳು ನಡೆಯಲಿದೆ.
ನಂತರ ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದ್ದು, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.