ಗೋಣಿಕೊಪ್ಪ ವರದಿ, ಏ. ೧೭: ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಟ್ಟಂಗಡ ಕುಟುಂಬದ ವತಿಯಿಂದ ನಡೆಯುತ್ತಿರುವ ಕೊಡವ ಕೌಟುಂಬಿಕ ಆಹ್ವಾನಿತ ತಂಡಗಳ ಕೊಟ್ಟಂಗಡ ಕ್ರಿಕೆಟ್ ಕಪ್ನಲ್ಲಿ ಅಣ್ಣಳಮಾಡ (ಬಿರುನಾಣಿ) ಮತ್ತು ಮಂಡುವAಡ ತಂಡಗಳು ಫೈನಲ್ಗೆ ಪ್ರವೇಶ ಪಡೆದಿದೆ.
ತಾ. ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ಸೆಮಿ ಫೈನಲ್ನಲ್ಲಿ ಚೆಕ್ಕೇರ ಹಾಗೂ ತಂಬುಕುತ್ತೀರ ತಂಡಗಳು ಸೋಲನುಭವಿಸಿ ಟೂರ್ನಿಯಿಂದ ಹೊರ ನಡೆಯಿತು.
ತಾ. ೧೭ ರಂದು ನಡೆದ ಮೊದಲ ಸೆಮಿ ಫೈನಲ್ನಲ್ಲಿ ಅಣ್ಣಳಮಾಡ (ಬಿರುನಾಣಿ) ತಂಡವು ಚೆಕ್ಕೇರ ತಂಡವನ್ನು ೬ ವಿಕೆಟ್ಗಳಿಂದ ಮಣಿಸಿತು. ಚೆಕ್ಕೇರ ನಿಗದಿತ ೧೨ ಒವರ್ಗಳಿಗೆ ೭ ವಿಕೆಟ್ ಕಳೆದುಕೊಂಡು ೧೩೩ ರನ್ ಕಲೆ ಹಾಕಿತು. ಅಣ್ಣಳಮಾಡ ೪ ವಿಕೆಟ್ ಕಳೆದುಕೊಂಡು ೧೦.೫ ಒವರ್ಗಳಿಗೆ ಗುರಿ ಸಾಧಿಸಿತು. ಚೆಕ್ಕೇರ ಕಾರ್ಯಪ್ಪ ೭೬ ರನ್, ಆಕರ್ಶ್ ೪೭ ರನ್, ಅಣ್ಣಳಮಾಡ ಸೋಮಯ್ಯ ೫೩, ದರ್ಶನ್ ೪೬ ರನ್ ದಾಖಲಿಸಿದರು. ಅಣ್ಣಳಮಾಡ ದರ್ಶನ್ ೫ ವಿಕೆಟ್, ರಾಜಾ ೧ ವಿಕೆಟ್ ಪಡೆದರು. ಚೆಕ್ಕೇರ ಆಕರ್ಶ್, ಪೂವಯ್ಯ ತಲಾ ಒಂದೊAದು ವಿಕೆಟ್ ಪಡೆದರು.
ಮಂಡುವAಡ ತಂಡವು ತಂಬುಕುತ್ತೀರ ತಂಡವನ್ನು ೧೬ ರನ್ಗಳಿಂದ ಸೋಲಿಸಿತು. ಮಂಡುವAಡ ಮೊದಲು ಬ್ಯಾಟ್ ಮಾಡಿ ೯ ವಿಕೆಟ್ ಕಳೆದುಕೊಂಡು ೯೭ ರನ್ ದಾಖಲಿಸಿತು. ತಂಬುಕುತ್ತೀರ ೬ ವಿಕೆಟ್ ಕಳೆದುಕೊಂಡು ೮೧ ರನ್ ದಾಖಲಿಸಿ ಸೋಲೊಪ್ಪಿಕೊಂಡಿತು. ಮಂಡುವAಡ ತಂಡದ ಬಿಗಿ ಬೌಲಿಂಗ್ ದಾಳಿ ತಂಬುಕುತ್ತೀರ ಪ್ರಶಸ್ತಿ ಕನಸ್ಸನ್ನು ನುಚ್ಚು ನೂರು ಮಾಡಿತು. ಮಂಡುವAಡ ಆದರ್ಶ್ ೩೨, ಗಣೇಶ್ ೨೫ ರನ್, ತಂಬುಕುತ್ತೀರ ಶರಣ್ ೪ ವಿಕೆಟ್, ೧೬ ರನ್, ಅನಿಲ್ ೨೫ ರನ್, ಮಂಡುವAಡ ಹರ್ಷಿತ್, ದುಷ್ಯಂತ್ ತಲಾ ೨ ವಿಕೆಟ್ ಕಬಳಿಸಿದರು.
ಸೋಲಿನ ನಡುವೆ ಉತ್ತಮ ಪ್ರದರ್ಶನ ನೀಡಿದ ಚೆಕ್ಕೇರ ಕಾರ್ಯಪ್ಪ, ತಂಬುಕುತ್ತೀರ ಶರಣ್ ಪಂದ್ಯ ಶ್ರೇಷ್ಠ ಬಹುಮಾನ ಪಡೆದರು.