ಮಡಿಕೇರಿ, ಏ. ೧೭: ಮಡಿಕೇರಿ ನಗರದ ಕಸ ತ್ಯಾಜ್ಯ ವಿಲೇವಾರಿಗೆ ಸಂಬAಧಿಸಿದAತೆ ಮಾಹಿತಿ ನೀಡುವ ಸಲುವಾಗಿ ಮಡಿಕೇರಿ ನಗರಸಭಾ ಆಯುಕ್ತರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಖುದ್ದಾಗಿ ಹಾಜರಾಗುವಂತೆ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.

ಮಡಿಕೇರಿ ನಗರದಲ್ಲಿ ಬಿಗಡಾಯಿಸಿರುವ ಕಸದ ಸಮಸ್ಯೆ ಹಾಗೂ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಸಂಬAಧ ಪ್ರಕರಣವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿದ್ದು, ಈ ಸಂಬAಧ ಸೂಕ್ತ ಮಾಹಿತಿ ನೀಡುವಂತೆ ನ್ಯಾಯಾಲಯವು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಡಿಕೇರಿ ನಗರಸಭೆಗೆ ಸೂಚನೆ ನೀಡಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸರಕಾರ ಕಳೆದ ಮಾ. ೨೬ ರಂದು ಮಾಹಿತಿಯನ್ನೊಳಗೊಂಡ ಅಫಿಡಾವಿಟ್ ಹಾಗೂ ಮೆಮೊ ಸಲ್ಲಿಸಿದೆ. ನಗರಸಭೆ ಪ್ರತ್ಯೇಕವಾಗಿ ಅಫಿಡಾವಿಟ್ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಯುಕ್ತರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಮಾಹಿತಿ ನೀಡುವಂತೆ ನಿರ್ದೇಶನವಿತ್ತಿದೆ.

ಕಸ ವಿಲೇವಾರಿಗೆ ಸರಕಾರ ಗುರುತಿಸಿರುವ ಜಾಗದಿಂದಾಗಿ ಜನವಸತಿ ಪ್ರದೇಶ ಹಾಗೂ ಜಲಮೂಲಗಳಿಗೆ ತೊಂದರೆಯಾಗಲಿದೆ ಎಂದು ಗಾಳಿಬೀಡು ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿರುವ ವ್ಯಾಜ್ಯದಲ್ಲಿ ಮಧ್ಯ ಪ್ರವೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ಮಾಡಿ ವರದಿಯೊಂದಿಗೆ ಅಫಿಡಾವಿಟ್ ಸಲ್ಲಿಸುವಂತೆ ನ್ಯಾಯಾಲಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆಗೆ ಸೂಚನೆ ನೀಡಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ಮಾಡಿ ವರದಿ ಸಲ್ಲಿಸಲಾಗಿತ್ತು. ಆದರೆ ನಗರಸಭೆ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು,

(ಮೊದಲ ಪುಟದಿಂದ) ಸರಕಾರದ ಅಧೀನ ಕಾರ್ಯದರ್ಶಿಗಳ ವರದಿಯಲ್ಲಿ ಉಲ್ಲೇಖವಾಗಿದೆ. ಕಳೆದ ತಾ. ೧೫ ರಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಒಕ ಹಾಗೂ ಸೂರಜ್ ಗೋವಿಂದರಾಜ್ ಅವರುಗಳನ್ನೊಳಗೊಂಡ ಪೀಠ ನಗರಸಭೆ ಪ್ರತ್ಯೇಕ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ತಾ. ೨೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಖುದ್ದಾಗಿ ವೀಡೀಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ನಿರ್ದೇಶನ ನೀಡಿದೆ.

ಈ ನಡುವೆ ಅರ್ಜಿದಾರ ಎಸ್‌ಆರ್‌ವಿಕೆ ಸಂಘದ ಪರ ವಕೀಲರಾದ ಅನುಚೆಂಗಪ್ಪ ಅವರು, ಪ್ರಸ್ತುತ ಗುರುತಿಸಲಾಗಿರುವ ಜಾಗದಿಂದ ದೂರದ ಪ್ರದೇಶದಲ್ಲಿರುವ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಆಕ್ಷೇಪ ವ್ಯಕ್ತಪಡಿಸಿರುವವರ ಬಗ್ಗೆ ನ್ಯಾಯಾಲಯಕ್ಕೆ ವಿವರ ಸಲ್ಲಿಸಿ ಮನವರಿಕೆ ಮಾಡಿಕೊಟ್ಟಿದ್ದಾರೆ.

-ಸಂತೋಷ್