
ಮಡಿಕೇರಿ ಏ.೧೭ : ಕೋವಿಡ್-೧೯ ವೈರಾಣು ಸೋಂಕಿನ ಎರಡನೇ ಅಲೆ ಕರ್ನಾಟಕದಲ್ಲಿಯೂ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಇದರ ನಿಯಂತ್ರಣ ಸಂಬAಧ ವಿವಿಧ ಇಲಾಖೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ರಾಜ್ಯದ ಸಂಬAಧಿತ ಸಚಿವರುಗಳು, ರಾಜ್ಯ ಸರಕಾರೀ ಪ್ರಮುಖರು ಇಂದು ಕೊಡಗಿನ ಅಧಿಕಾರಿಗಳು, ವೈದ್ಯರುಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.ಮಡಿಕೇರಿ ಏ.೧೭ : ಕೋವಿಡ್-೧೯ ವೈರಾಣು ಸೋಂಕಿನ ಎರಡನೇ ಅಲೆ ಕರ್ನಾಟಕದಲ್ಲಿಯೂ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಇದರ ನಿಯಂತ್ರಣ ಸಂಬAಧ ವಿವಿಧ ಇಲಾಖೆಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ರಾಜ್ಯದ ಸಂಬAಧಿತ ಸಚಿವರುಗಳು, ರಾಜ್ಯ ಸರಕಾರೀ ಪ್ರಮುಖರು ಇಂದು ಕೊಡಗಿನ ಅಧಿಕಾರಿಗಳು, ವೈದ್ಯರುಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.ಈ ನಡುವೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಲಸಿಕೆಯೊಂದಿಗೆ ದ್ವಿತೀಯ ಲಸಿಕೆಗೂ ಜನತೆ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡುಬAದಿತು. ಲಸಿಕೆ ಚುಚ್ಚು ಮದ್ದು ನೀಡಿಕೆ ಕಾರ್ಯ ಆಸ್ಪತ್ರೆ ಸಿಬ್ಬಂದಿಗಳ ಸಹಕಾರದಿಂದ ತ್ವರಿತವಾಗಿ ನಡೆಯುತ್ತಿದೆ. ಆದರೆ, ದೃಢೀಕರಣ ನೀಡಿಕೆ ಮಾತ್ರ ವಿಳಂಬವಾಗುತ್ತಿರುವುದನ್ನು ಸರಿಪಡಿಸುವಂತೆ ಇಂದು ಜನತೆಯ ಮನವಿ ಮೇರೆಗೆ ‘ ಶಕ್ತಿ’ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಚಾರುಲತ ಈ ನಡುವೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಲಸಿಕೆಯೊಂದಿಗೆ ದ್ವಿತೀಯ ಲಸಿಕೆಗೂ ಜನತೆ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡುಬAದಿತು. ಲಸಿಕೆ ಚುಚ್ಚು ಮದ್ದು ನೀಡಿಕೆ ಕಾರ್ಯ ಆಸ್ಪತ್ರೆ ಸಿಬ್ಬಂದಿಗಳ ಸಹಕಾರದಿಂದ ತ್ವರಿತವಾಗಿ ನಡೆಯುತ್ತಿದೆ. ಆದರೆ, ದೃಢೀಕರಣ ನೀಡಿಕೆ ಮಾತ್ರ ವಿಳಂಬವಾಗುತ್ತಿರುವುದನ್ನು ಸರಿಪಡಿಸುವಂತೆ ಇಂದು ಜನತೆಯ ಮನವಿ ಮೇರೆಗೆ ‘ ಶಕ್ತಿ’ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಚಾರುಲತ ಜನರು ಪಾಲ್ಗೊಂಡು ಸಾಮಾಜಿಕ ಅಂತರ, ಮುಖಗವಸು ಅಳವಡಿಕೆ, ಸ್ಯಾನಿಟೈಸಿಂಗ್ಗಳ ಕಡ್ಡಾಯ ಬಳಕೆಗೆ ಕ್ರಮ ಕೈಗೊಳ್ಳುವಂತೆ ಸಲಹೆಯಿತ್ತರು.ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಇದುವರೆಗೆ ಜಿಲ್ಲೆಯಲ್ಲಿ ಅನುಸರಿಸಿದ ಕ್ರಮಗಳ ಕುರಿತು ಸಚಿವರು ಮತ್ತು ಪ್ರಮುಖರಿಗೆ ಮಾಹಿತಿಯೊದಗಿಸಿದರು. ವೀಡಿಯೋ ಸಂವಾದ ಸಂದರ್ಭ ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ್ರಾ,
(ಮೊದಲ ಪುಟದಿಂದ) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಡಾ.ಮಹೇಶ್, ಡಾ.ಗೋಪಿನಾಥ್, ಡಾ.ಆನಂದ್ ಉಪಸ್ಥಿತರಿದ್ದು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.
ಕೊಡಗು ಮಾದರಿಯಾಗಲಿ
ಕೊಡಗಿನಲ್ಲಿ ಪ್ರಸ್ತುತ ಕೋವಿಡ್ ವಿದ್ಯಮಾನದ ಬಗ್ಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರನ್ನು ‘ಶಕ್ತಿ’ ಸಂಪರ್ಕಿಸಿ ಅಭಿಪ್ರಾಯ ಬಯಸಿದಾಗ ಕೋವಿಡ್ ನಿಯಂತ್ರಣದಲ್ಲಿ ಕೊಡಗು ಮಾದರಿ ಜಿಲ್ಲೆಯಾಗಲಿ ಎಂದು ಅವರು ಆಶಿಸಿದರು, ರಾಜ್ಯದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲೆ ಕೋವಿಡ್ ಪ್ರಕರಣಗಳ ಮಟ್ಟಿಗೆ ಅತಿರೇಕಕ್ಕೆ ಏರದೆ ನಿಯಂತ್ರಣ ಮಟ್ಟದಲ್ಲಿದೆ. ಇದಕ್ಕೆ ಕೊಡಗಿನ ಜನರ ಜಾಗೃತಿ ಭಾವನೆ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೂ ಕೆಲವು ಸಂದರ್ಭ ಹಾಗೂ ಜನ ಸೇರುವಂತಹ ಕಡೆ ಕೆಲವರ ನಿರ್ಲಕ್ಷö್ಯವಿದ್ದು ಹಾಗೆÀ ಮಾಡುವವರು ಅವರದೇ ಹಿತದೃಷ್ಟಿಯನ್ನೂ ಆಲೋಚಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದರು. ಕೊಡಗಿನ ಜನತೆ ಸಂಯಮದಿAದ ಸಹಕರಿಸುತ್ತಿರುವುದು ಆಶಾದಾಯಕ ವಾಗಿದೆ. ಮುಂದಿನ ದಿನಗಳಲ್ಲ್ಲಿ ಜಿಲ್ಲಾಡಳಿತ ಮತ್ತು ಅಲ್ಲಲ್ಲಿನ ಮಟ್ಟಗಳಲ್ಲಿ ಆಯಾ ಆಡಳಿತ ವ್ಯವಸ್ಥೆಯೊಂದಿಗೆ ಜನತೆ ಸಹಕರಿಸುತ್ತಿದ್ದರೆ ಇನ್ನೂ ಕೂಡ ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು, ಸಂಬAಧಿತ ಎಲ್ಲ ಇಲಾಖೆಗಳು ತಮ್ಮ ಸಹಕಾರವನ್ನು ಮುಂದುವರಿಸುವAತೆ ಸಲಹೆಯಿತ್ತರು. ಅಲ್ಲದೆ, ಮುಂದೆ ನಡೆಯಬಹುದಾದ ಎಲ್ಲ ಕಾರ್ಯಕ್ರಮ, ಚುನಾವಣೆ ಇತ್ಯಾದಿಗಳÀಲ್ಲಿ ನಿಯಂತ್ರಣ ಕಾಯ್ದುಕೊಳ್ಳುವಂತೆ ಸೂಚಿಸಿದರು.
ಉತ್ತಮ ವ್ಯವಸ್ಥೆ :ಮತ್ತೊಂದೆಡೆ ವಿಳಂಬ
ಈ ನಡುವೆ ಇಂದು ‘ಶಕ್ತಿ’ ಪ್ರತಿನಿಧಿ ಜಿಲ್ಲಾಸ್ಪತ್ರೆಗೆ ತೆರಳಿದಾಗ ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆ ಹಾಕುವಿಕೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿರುವದು ಗಮನಕ್ಕೆÀ ಬಂದಿತು. ಆಸ್ಪತ್ರೆಯ ಸಂಬAಧಿತ ಸಿಬ್ಬಂದಿಗಳು ಜನತೆಯ ಆಧಾರ್ ಕಾರ್ಡ್ಗಳ ಪರಿಶೀಲನೆ, ಪ್ರಥಮ ಮತ್ತು ಎರಡನೇ ಲಸಿಕೆಗಳ ಕುರಿತು ವಿದ್ಯುನ್ಮಾನ ಯಂತ್ರಗಳಲ್ಲಿ ಪರಿಶೀಲನೆ, ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಚುಚ್ಚುವಿಕೆಗೆ ಸಮರ್ಪಕ ವ್ಯವಸ್ಥೆ ಮೂಲಕ ಸೇವೆ ಸಲ್ಲಿಸುತ್ತಿದ್ದುದು ಗೋಚರವಾಯಿತು. ಅಲ್ಲದೆ, ಲಸಿಕೆ ಬಳಿಕ ಜನತೆಯನ್ನು ಕೆಲಕಾಲ ಕುಳ್ಳಿರಿಸುವ ಜವಾಬ್ದಾರಿಕೆ, ಮಾರ್ಗದರ್ಶನದೊಂದಿಗೆ ಆಕ್ಸೋಮೀಟರ್ ಮೂಲಕ ಪರಿಶೀಲನೆ ಹಾಗೂ ಮುಂದಿನ ದಿನಗಳಲ್ಲಿ ಎರಡನೇ ಲಸಿಕೆ ಪಡೆಯಲು ಮಾರ್ಗದರ್ಶನ, ಎರಡನೇ ಲಸಿಕೆ ಪಡೆದವರಿಗೂ ಮಾರ್ಗದರ್ಶನ ನೀಡುತ್ತಿದ್ದುದು ಪ್ರಶಂಸನೀಯವೆÀನಿಸಿತ್ತು.
ಇಷ್ಟೆಲ್ಲ ಉತ್ತಮ ವ್ಯವಸ್ಥೆ ನಡುವೆ ದೃಢೀಕರಣ ಪತ್ರ ಕೊಡಲು ಮಾತ್ರ ತಾಸುಗಟ್ಟಲೆ ವಿಳಂಬವಾಗುತ್ತಿರುವ ಕುರಿತು ‘ಶಕ್ತಿ’ ಯ ಗಮನಕ್ಕೆ ಬಂದಿತು. ಇಂದು ಪ್ರಥಮ ಹಾಗೂ ಇನ್ನು ಅನೇಕರು ದ್ವಿತೀಯ ಲಸಿಕೆ ಪಡೆಯಲು ಅಧಿಕ ಸಂಖ್ಯೆಯಲ್ಲಿ ಬಂದವರಿಗೆ ಈ ವಿಳಂಬದಿAದ ಸÀಹಜವಾಗಿಯೇ ಕಿರಿಕಿರಿಯುಂಟಾಯಿತು. ಈ ಬಗ್ಗೆ ‘ಶಕ್ತಿ’ ಗಮನಿಸಿದಾಗ ಕೇವಲ ಒಬ್ಬರು ಡಾಟಾ ಆಪರೇಟರ್ ಮಹಿಳಾ ಸಿಬ್ಬಂದಿಯನ್ನು ಮಾತ್ರ ಈ ಕೆಲಸಕ್ಕೆ ನಿಯೋಜಿಸಲಾಗಿತ್ತು. ಜೊತೆಗೆ ಯಾಂತ್ರಿಕ ದೋಷವೂ ಉಂಟಾಗಿ ಇನ್ನೂ ತೊಂದರೆಯುAಟಾಯಿತು. ಈ ಕುರಿತು ‘ಶಕ್ತಿ’ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರ ಗಮನಕ್ಕೆ ತಂದಾಗ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಇದನ್ನು ಸರಿಪÀಡಿಸುವ ಭರವಸೆ ದೊರಕಿತು. ಈ ಬಗ್ಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ ಅವರ ಗಮನಕ್ಕೂ ತಂದಾಗ ಅವರು ಕೂಡ ಮುಂದೆ ಸರಿಪಡಿಸುವ ಆಶ್ವ್ವಾಸನೆಯಿತ್ತರು. ಅಲ್ಲದೆ, ಶಾಸಕ ಅಪ್ಪಚ್ಚು ರಂಜನ್ ಅವರು ಕೂಡ ಗಮನಹರಿಸುವದಾಗಿ ತಿಳಿಸಿದರು. - ‘ಚಕ್ರವರ್ತಿ’
