ಪಾಲಿಬೆಟ್ಟ, ಏ. ೧೬: ಆದಿವಾಸಿ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಳ್ಳುವುದರ ಮೂಲಕ ಸರಕಾರಗಳ ಸವಲತ್ತುಗಳನ್ನು ಪಡೆದುಕೊಂಡು ಶಿಕ್ಷಣದೊಂದಿಗೆ ಅಭಿವೃದ್ಧಿ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ತಿತಿಮತಿ ಶಾಲಾ ಮೈದಾನದಲ್ಲಿ ಅಮ್ಮಾಳೆ ಕ್ರೀಡಾಕೂಟ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಚಾರ-ವಿಚಾರ, ಸಂಸ್ಕೃತಿ, ಪರಂಪರೆಯೊAದಿಗೆ ಬದುಕು ಸಾಗಿಸುತ್ತಿರುವ ಆದಿವಾಸಿಗಳ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ತಂದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ದುಶ್ಚಟಗಳಿಂದ ದೂರವಿದ್ದು ಸಂಘಟನೆಯೊAದಿಗೆ ಸಕ್ರಿಯರಾಗಿ ಸಮಾಜ ಸೇವೆಯೊಂದಿಗೆ ಮುನ್ನಡೆಯ ಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಂದಲೇ ಅರಣ್ಯ ಉಳಿದಿದ್ದು ಆದಿವಾಸಿಗಳ ಕೊಡುಗೆ ಅಪಾರವಾಗಿದೆ. ಆದಿವಾಸಿ ಗಳಿಗೆ ಸರ್ಕಾರಗಳು ಹಲವಾರು ಯೋಜನೆಗಳನ್ನು ನೀಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆ ಅಡ್ಡಿ ಪಡಿಸುವುದು ಸರಿಯಾದ ಕ್ರಮವಲ್ಲ; ಎಲ್ಲರಂತೆ ಆದಿವಾಸಿಗಳು ಸಮಾಜದ ಮುಖ್ಯವಾಹಿನಿ ಬರಬೇಕೆಂದು ಹೇಳಿದ ಅವರು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕ್ರೀಡೆ ಅತ್ಯಗತ್ಯವಾಗಿದ್ದು ಅಭಿವೃದ್ಧಿ ಹಾಗೂ ಕ್ರೀಡೆಯ ಮೂಲಕ ಗುರುತಿಸಿ ಕೊಳ್ಳುವಂತಾಗಬೇಕೆAದು ಹೇಳಿದರು. ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅರಣ್ಯದಂಚಿನಲ್ಲಿ ನೆಲೆ ಊರಿದ್ದಾರೆ. ಅರಣ್ಯವನ್ನು ರಕ್ಷಣೆ ಮಾಡುವ ಮೂಲಕ ಆದಿವಾಸಿ ಸಂಸ್ಕೃತಿ, ಪರಂಪರೆ ಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಆದಿವಾಸಿಗಳಲ್ಲಿ ಹಲವು ಪ್ರತಿಭೆಗ ಳಿದ್ದರೂ ಸೂಕ್ತ ವೇದಿಕೆ ಸಿಗದೆ ವಂಚಿತ ರಾಗುತ್ತಿದ್ದರು. ಜೇನುಕುರುಬರ ಯುವಕ ಸಂಘ ಕಳೆದ ೩ ವರ್ಷಗಳಿಂದ ಕ್ರೀಡಾ ಕೂಟಗಳನ್ನು ಆಯೋಜನೆ ಮಾಡಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಅಪ್ರೋಸ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಗಿರಿಜನರ ಸಹಕಾರ ಸಂಘದ ಅಧ್ಯಕ್ಷ ಮಣಿ ಕುನ್ಹ, ಆದಿವಾಸಿ ಮುಖಂಡ ಚಂದ್ರು, ಪ್ರಮುಖರಾದ ರಾಣಿ, ಗೀತಾ, ಸವಿತಾ, ವಿದ್ಯಾ, ಸುಬ್ರಮಣಿ, ರಮೇಶ್, ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ, ಶಿಕ್ಷಕಿ ರಾಣಿ, ಜೇನು ಕುರುಬರ ಸಂಘದ ಅಧ್ಯಕ್ಷ ರಘು, ಉಪಾಧ್ಯಕ್ಷ ಮನು, ಕಾರ್ಯದರ್ಶಿ ಜೆ.ಕೆ. ಅಯ್ಯಪ್ಪ ಸೇರಿದಂತೆ ಮತ್ತಿತರರು ಇದ್ದರು. - ಪುತ್ತಂ ಪ್ರದೀಪ್