ವೀರಾಜಪೇಟೆ, ಏ. ೧೬: ಶ್ರೀ ಪನ್ನಂಗಾಲತ್ತಮ್ಮೆ ಉತ್ಸವವು ಧಾರ್ಮಿಕ ಕೈಂಕರ್ಯಗಳೊAದಿಗೆ ಸಂಪನ್ನಗೊAಡಿತು.

ವೀರಾಜಪೇಟೆ ತಾಲೂಕಿನ ನಾಳ್ ಬೆಪ್ಪುನಾಡ್ ಅರಮೇರಿ ಗ್ರಾಮದಲ್ಲಿ ನೆಲೆನಿಂತ ಶ್ರೀ ಪನ್ನಂಗಾಲತಮ್ಮೆ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಸುಮಾರು ೬೦೦ ವರ್ಷಗಳ ಇತಿಹಾಸವಿರುವ ದೇವಾಲಯದಲ್ಲಿ ನೆಲೆಸಿರುವ ದೇವಿಯು ಮಕ್ಕಳಿಲ್ಲದ ಕೊರತೆಯನ್ನು ನೀಗಿಸುತ್ತಾಳೆ ಎಂಬ ಪ್ರತೀತಿ ಇದೆ. ಹರಕೆಯ ರೂಪದಲ್ಲಿ ಬೆಳ್ಳಿಯಿಂದ ನಿರ್ಮಿತವಾದ ಕಿರಿದಾದ ತೊಟ್ಟಿಲನ್ನು ಮಕ್ಕಳಿಲ್ಲದ ದಂಪತಿ ಹರಕೆಯ ರೂಪದಲ್ಲಿ ಒಪ್ಪಿಸುವುದು ವಾಡಿಕೆಯಾಗಿದೆ.

ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯ ಪ್ರತಿ ವರ್ಷದಂತೆ ನೆರವೇರಿತು. ದೇವರ ಅವಭ್ರತ ಸ್ನಾನ, ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.