ಮಡಿಕೇರಿ, ಏ. ೧೬: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕೊಡವ ಕೇರಿಯ ೧೪ನೇ ವಾರ್ಷಿಕ ಮಹಾಸಭೆ, ಸನ್ಮಾನ ಸಮಾರಂಭ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಸಂಭ್ರಮದಿAದ ನಡೆಯಿತು.
ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು, ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕೊಡವಕೇರಿಗಳು ನೆರವಾಗಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀ.ಮಾ.ಕೆ.ಎಂ. ಕಾರ್ಯಪ್ಪ ಕೊಡವ ಕೇರಿಯ ಅಧ್ಯಕ್ಷ ಬೋಡಂಡ ಮುತ್ತಪ್ಪ, ಕೇರಿ ಬೆಳೆದು ಬಂದ ಹಾದಿಯ ಕುರಿತು ವಿವರಿಸಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ತಡಿಯಂಗಡ ತಿಮ್ಮಯ್ಯ ಮಾತನಾಡಿದರು. ನೀಟ್ ಪರೀಕ್ಷೆಯಲ್ಲಿ ೧೫೦ನೇ ರ್ಯಾಂಕ್ ಗಳಿಸಿದ ದ್ರಾವಿಡ್ ದೇವಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕೊಡವ ಕೇರಿಯ ಉಪಾಧ್ಯಕ್ಷ ಪಳಂಗAಡ ರೇಖಾ ತಿಮ್ಮಯ್ಯ ಸ್ವಾಗತಿಸಿ, ಚೊಟ್ಟಂಡ ದೇಚಮ್ಮ ಪ್ರದೀಪ್, ಬೊಳ್ಳಜಿರ ದೇಚಮ್ಮ ಅಯ್ಯಪ್ಪ, ಓಡಿಯಂಡ ನಿಹಾರಿಕಾ ಕಾರ್ಯಪ್ಪ ಪ್ರಾರ್ಥಿಸಿದರು. ಬೊಳ್ಳಜಿರ ಯಮುನಾ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿ, ಚೋಳಪಂಡ ವಿಜಯ ವರದಿ ಮಂಡಿಸಿದರು. ಬೊಟ್ಟಂಡ ದೇಚಮ್ಮ ಪ್ರದೀಪ್ ವಂದಿಸಿದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ವಾಲಗತಾಟ್ ಸ್ಪರ್ಧೆ ಗಮನ ಸೆಳೆಯಿತು. ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.