ಮಡಿಕೇರಿ, ಏ. ೧೬: ನೆಹರು ಯುವ ಕೇಂದ್ರ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಸ್ನೇಹಿತರ ಯುವಕರ ಸಂಘ, ಅಡ್ಕದ ಬಾಣೆ ಗಾಳಿಬೀಡು, ಶ್ರೀ ಮಾದುರಪ್ಪ, ಶ್ರೀನಿಧಿ ಮತ್ತು ತ್ರಿವೇಣಿ ಯುವಕ ಸಂಘದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ೩೮ನೇ ವಾರ್ಷಿಕೋತ್ಸವ ಹಾಗೂ ನೂತನ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಎರಡು ದಿನಗಳ ಕ್ರೀಡಾಕೂಟಕ್ಕೆ ಗಾಳಿಬೀಡುವಿನ ಅಡ್ಕದಬಾಣೆಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ನೂತನ ವೇದಿಕೆಯನ್ನು ಗಾಳಿಬೀಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೊಂಬಾರನ ಮಡಿಕೇರಿ, ಏ. ೧೬: ನೆಹರು ಯುವ ಕೇಂದ್ರ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಸ್ನೇಹಿತರ ಯುವಕರ ಸಂಘ, ಅಡ್ಕದ ಬಾಣೆ ಗಾಳಿಬೀಡು, ಶ್ರೀ ಮಾದುರಪ್ಪ, ಶ್ರೀನಿಧಿ ಮತ್ತು ತ್ರಿವೇಣಿ ಯುವಕ ಸಂಘದ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ೩೮ನೇ ವಾರ್ಷಿಕೋತ್ಸವ ಹಾಗೂ ನೂತನ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಎರಡು ದಿನಗಳ ಕ್ರೀಡಾಕೂಟಕ್ಕೆ ಗಾಳಿಬೀಡುವಿನ ಅಡ್ಕದಬಾಣೆಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ನೂತನ ವೇದಿಕೆಯನ್ನು ಗಾಳಿಬೀಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೊಂಬಾರನ ಪಿ. ಗಣಪತಿ ಅವರು ಉದ್ಘಾಟಿಸಿ ದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವಕರು, ಸರ್ಕಾರದ ಯೋಜನೆಗಳನ್ನು ಸಂಘಟನೆ ಬಲದೊಂದಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘದ ಕಟ್ಟಡವನ್ನು ಸರಿಯಾದ ರೀತಿಯಲ್ಲಿ ಮಕ್ಕಳು, ಯುವಕರು ಮಹಿಳೆಯರು ಬಳಸಿಕೊಳ್ಳಬೇಕು ಆರೋಗ್ಯ ಶಿಬಿರ, ಕ್ರೀಡೆ, ಮಹಿಳಾ ಸಂಘಗಳ ಕಾರ್ಯ ಚಟುವಟಿಕೆ ಗಳನ್ನು ಹೆಚ್ಚಿಸಿ ಎಂದು ಸಲಹೆ ನೀಡಿದರು.
ಅರಣ್ಯ ಉಪವಲಯ ಅಧಿಕಾರಿ ಕೆ.ಎ. ರಮೇಶ್ ಅವರು ಮಾತನಾಡಿ, ಯುವಕರಿಗೆ ಉತ್ತಮ ವೇದಿಕೆ ನಿರ್ಮಿಸುವಲ್ಲಿ ಹಿರಿಯರು ಸಹಕಾರಿಯಾಗಿದ್ದಾರೆ. ಇದನ್ನು ಯುವಕರು ಹಾಗೂ ಮುಂದಿನ ಪೀಳಿಗೆಯವರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ವಕೀಲ ಕೋಳುಮುಡಿಯನ ಎ.ಮಿಲನ್ ಮಾತನಾಡಿದರು. ಅಡ್ಕದಬಾಣೆ ಸ್ನೇಹಿತರ ಯುವಕ ಸಂಘದ ಅಧ್ಯಕ್ಷ ಎ. ಮೋಹನ್, ಗಾಳಿಬೀಡು ದವಸ ಬಂಡಾರ ಉಪಾಧ್ಯಕ್ಷ ಕೋಳುಮುಡಿಯನ ಕೆ. ಧರ್ಮಾವತಿ, ಸಂಘದ ಮಾಜಿ ಅಧ್ಯಕ್ಷ ಕೊಂಬಾರನ ಜಿ. ಕಾವೇರಪ್ಪ, ಕೆ.ಎಂ. ಮೋಹನ್, ಕೊಚ್ಚೇರ ಟಿ. ಧರ್ಮಾವತಿ, ಬದಲೇರ ರಾಣಿ ಮುತ್ತಣ್ಣ ಹಾಜರಿದ್ದರು. ನಂತರ ನಡೆದ ಕ್ರಿಕೆಟ್ ಪಂದ್ಯಾಟಕ್ಕೆ ಬೆಂಗಳೂರಿನ ವಕೀಲ ಕೋಳುಮುಡಿಯನ ಎ. ಮಿಲನ್ ಚಾಲನೆ ನೀಡಿದರು.