ಸೋಮವಾರಪೇಟೆ, ಏ. ೧೬: ಯುವ ಸಮುದಾಯ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆಯ ಹರಿಕಾರರಾಗಬೇಕೆಂದು ಉದ್ಯಮಿ ಹರಪಳ್ಳಿ ರವೀಂದ್ರ ಕರೆ ನೀಡಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗರ ಯುವ ವೇದಿಕೆಯ ವಾರ್ಷಿಕ ಮಹಾಸಭೆ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ಸೋಮವಾರಪೇಟೆ ತಾಲೂಕಿನ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಸುಧಾರಣೆಗೆ ಮುಂದಾಗ ಬೇಕು. ಯುವ ಸಮುದಾಯವೇದೇಶದ ಸಂಪತ್ತಾಗಿದ್ದು, ಇದನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಕಾರ್ಯ ಎಲ್ಲರಿಂದಲೂ ಆಗ ಬೇಕೆಂದು ಅಭಿಪ್ರಾಯಿಸಿದರು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕಾಳಪ್ಪ, ಗಿರೀಶ್ ಮಲ್ಲಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಗಳಲ್ಲಿ ಜಯಗಳಿಸಿದ ಯುವ ವೇದಿಕೆಯ ಸದಸ್ಯರುಗಳಾದ ಪ್ರಕಾಶ್ ಹಾನಗಲ್ಲು, ಸುದೀಪ್ ಹಾನಗಲ್ಲು, ಚೇತನ್ ಚೌಡ್ಲು, ಮೋಹಿತ್ ಚಿಕ್ಕತೋಳೂರು, ತ್ರಿಶೂಲ್ ಶಾಂತಳ್ಳಿ, ಮಹೇಶ್ ತಿಮ್ಮಯ್ಯ, ನತೀಶ್ ಮಂದಣ್ಣ ಚೌಡ್ಲು, ರಘು ಕಿರಗಂದೂರು ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷ ನತೀಶ್ ಮಂದಣ್ಣ, ನಿರ್ದೇಶಕರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಯುವ ವೇದಿಕೆಗೆ ನೂತನ ನಿರ್ದೇಶಕರುಗಳನ್ನು ನೇಮಕಗೊಳಿಸಲಾಯಿತು.