ಮಡಿಕೇರಿ, ಏ.೧೬: ಜಿಲ್ಲೆಯಲ್ಲಿ ಶುಕ್ರವಾರ ೩೦ ಹೊಸ ಕೋವಿಡ್-೧೯ ಪ್ರಕರಣ ದೃಢಪಟ್ಟಿದೆ. ೫ ಆರ್‌ಟಿಪಿಸಿಆರ್ ಮತ್ತು ೨೫ ಪ್ರಕರಣ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೧೩ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ. ಈ ಪೈಕಿ ೩ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೧೦ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ೮ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ. ಈ ಪೈಕಿ ೨ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೬ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ವೀರಾಜಪೇಟೆ ತಾಲೂಕಿನಲ್ಲಿ ೯ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ. ಈ ಪೈಕಿ ೯ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.

ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೬೭೫೧ ಆಗಿದ್ದು, ೬೪೨೨ ಮಂದಿ ಗುಣಮುಖರಾಗಿದ್ದಾರೆ. ೨೪೬ ಸಕ್ರಿಯ ಪ್ರಕರಣಗಳಿದ್ದು, ೮೩ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೧೫೬ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.