ಹೆಚ್.ಜೆ. ರಾಕೇಶ್

ಮಡಿಕೇರಿ, ಏ. ೧೬: ಹಸಿರೂರಿಗೆ ಮಂಜಿನ ಸೀರೆ ಉಡಿಸಿದಂತೆ ಮೈನವಿರೇಳಿಸುವ ಹಿತವಾದ ವಾತಾವರಣ, ಹಸಿರ ಹೊದ್ದು ಕಂಗೊಳಿಸುವ ಪ್ರವಾಸಿ ತಾಣ... ಭೂ ಲೋಕದ ಸ್ವರ್ಗ, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇದೀಗ ನೆಲಕಚ್ಚಿದೆ. ಪ್ರವಾಸೋದ್ಯಮವನ್ನೇ ಜೀವಾಳವಾಗಿರಿಸಿಕೊಂಡಿರುವ ಮಂದಿ ಇದೀಗ ಅಕ್ಷರಶಃ ನಷ್ಟಕ್ಕೊಳಗಾಗಿದ್ದಾರೆ.

ಹೌದು.. ಏಪ್ರಿಲ್-ಮೇ ಬಂತೆAದರೆ ಪ್ರವಾಸಿಗರೇ ತುಂಬಿ ತುಳುಕಾಡುತ್ತಿದ್ದ ಪ್ರವಾಸಿ ತಾಣಗಳಲ್ಲಿ ಮೌನ ಆವರಿಸಿದೆ. ಕೊಡಗಿನ ಅಂದ ಸವಿಯಲು ದೇಶ-ವಿದೇಶಗಳಿಂದ ಕೊಡಗಿಗೆ ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಪ್ರವಾಸೋದ್ಯಮವನ್ನೇ ನಂಬಿಕೊAಡ ಸಾವಿರಾರೂ ಕುಟುಂಬಗಳು ಇದೀಗ ಅತಂತ್ರವಾಗಿವೆ.

ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಜಿಲ್ಲೆಯ ಪರಿಸ್ಥಿತಿಯನ್ನೇ ಬುಡಮೇಲು ಮಾಡಿತ್ತು. ಅಂದಿನಿAದ ಪ್ರವಾಸಿಗರ ಆಗಮನ ಇಳಿಮುಖವಾಯಿತು. ಇಲ್ಲಿನ ವಾತಾ ವರಣವನ್ನು ಸಂಭ್ರಮಿಸುತ್ತಿದ್ದವರು ಭಯಪಡುವಂತಾಯಿತು. ಇದೆಲ್ಲಾ ಮುಗಿಯಿತು ಈ ವರ್ಷವಾದರೂ ಕೊಡಗಿನ ಪರಿಸ್ಥಿತಿ ಸುಧಾರಿಸಿ ಸಹಜ ಸ್ಥಿತಿಗೆ ಮರಳುತ್ತದೆ. ಮೊದಲಿನಂತೆ ವ್ಯಾಪಾರೋದ್ಯಮ ನಳನಳಿಸುತ್ತದೆ ಎಂಬ ನಿರೀಕ್ಷೆಗಳು ಈ ವರ್ಷ ಕೂಡ ಹುಸಿಯಾಗಿವೆೆÉ. ಕೊರೊನಾ ಹೊಡೆತಕ್ಕೆ ಜಿಲ್ಲೆಯಲ್ಲಿ ಕಳೆದ ಒಂದು ವರ್ಷಗಳಿಂದ ವ್ಯಾಪಾರೋದ್ಯಮಗಳು ಪಾತಾಳಕ್ಕಿಳಿದಿವೆ. ವ್ಯಾಪಾರ ವಹಿವಾಟಿನಲ್ಲಿ ಎಂದೆAದೂ ಕಾಣದ ನಷ್ಟ ಅನುಭವಿಸಿದ್ದಾರೆ. ಇಂದಿಗೂ ಪ್ರವಾಸೋದ್ಯಮ ಚೇತರಿಕೆ ಕಾಣದೆ ನಷ್ಟದ ಹಾದಿ ತುಳಿದಿದೆ.

ದೇಶದೆಲ್ಲೆಡೆ ಕೊರೊನಾ ಪ್ರಮಾಣ ಏರಿಕೆ ಕಾಣುತ್ತಿದ್ದು, ಪ್ರವಾಸಿಗರು ಜಿಲ್ಲೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೋಂಸ್ಟೇ, ರೆಸಾರ್ಟ್, ಲಾಡ್ಜ್, ಹೊಟೇಲ್, ರೆಸ್ಟೋರೆಂಟ್, ಸ್ಪೆöÊಸಸ್, ತರಕಾರಿ ಅಂಗಡಿ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾದ, ಟ್ಯಾಕ್ಸಿ, ಆಟೋ ಚಾಲಕರ ಸ್ಥಿತಿ ಬುಡಮೇಲಾಗಿದೆ. ಅದಲ್ಲದೆ ರಾಜ್ಯದ ೮ ನಗರಗಳಲ್ಲಿ ಕೊರೊನಾ ಕರ್ಫ್ಯೂ ವಿಧಿಸಿರುವುದು ಪ್ರವಾಸಿಗರ ಸಂಖ್ಯೆ ಕ್ಷೀಣಿಸಲು ಕಾರಣವೆನ್ನಬಹುದಾಗಿದೆ.

ಆತಿಥ್ಯ ಕೇಂದ್ರಗಳು ಖಾಲಿ :

ಪ್ರವಾಸಿಗರು ಕೊಡಗಿಗೆ ಆಗಮಿಸಿದರೆ ಇಲ್ಲಿನ ಹೋಂಸ್ಟೇಗಳಲ್ಲಿ ವಾಸ್ತವ್ಯ ಹೂಡಿ ಜಂಜಾಟ ಮರೆತು ವಿಶ್ರಾಂತಿ ಪಡೆಯುತ್ತಾರೆ. ಏಪ್ರಿಲ್-ಮೇ ತಿಂಗಳಿನಲ್ಲAತೂ ಭರ್ಜರಿಯಾಗಿ ನಡೆಯುತ್ತಿದ್ದ ಉದ್ಯಮ ಈ ಬಾರಿ ನಷ್ಟಕ್ಕೆ ಒಳಗಾಗಿದೆ. ಪ್ರವಾಸಿಗರಿಲ್ಲದೆ ಹೋಂಸ್ಟೇ, ರೆಸಾರ್ಟ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸಂಬಳ ನೀಡಲಾಗದೆ ಮಾಲೀಕರು ಪರದಾಡುತ್ತಿದ್ದಾರೆ. ಆತಿಥ್ಯ ಕೇಂದ್ರಗಳ ಮಾಲೀಕರು ಕಟ್ಟಡ ನಿರ್ವಹಣೆಗೆ ಹಣ ಸಿಕ್ಕರೆ ಸಾಕೆಂದು ಕಡಿಮೆ ದರಕ್ಕೆ ರೂಂಗಳನ್ನು ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ನೋಂದಾಯಿತ ಹಾಗೂ ನೋಂದಾವಣೆ ಗೊಳ್ಳದ ಒಟ್ಟು ೪ ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿದ್ದು, ಕೊರೊನಾ ಕರಿನೆರಳಿನಿಂದ ಆತಿಥ್ಯ ಕೇಂದ್ರಗಳ ಮಾಲೀಕರು ಪರಿತಪಿಸುತ್ತಿದ್ದಾರೆ. ಅದಲ್ಲದೆ ಐಷಾರಾಮಿ ರೆಸಾರ್ಟ್ಗಳ ಪರಿಸ್ಥಿತಿ ಇದೇ ರೀತಿ ಆಗಿದೆ. ಜಿಲ್ಲೆಯಲ್ಲಿರುವ ದೊಡ್ಡ ರೆಸಾರ್ಟ್ಗಳಿಗೂ ಕೊರೊನಾ ಭಾರಿ ಹೊಡೆತ ನೀಡಿದೆ. ದೇಶ-ವಿದೇಶಗಳಿಂದ ಬರುತ್ತಿದ್ದ ಪ್ರವಾಸಿಗರು ಇಲ್ಲದಂತಾಗಿದ್ದು, ಹೊಟೇಲ್ ಮತ್ತು ವಸತಿಗೃಹಗಳ ಮಾಲೀಕರು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿದ್ದಾರೆ.

ಕೊರೊನಾ ಅಲೆ - ಹೊಟೇಲ್ ಉದ್ಯಮ ಮುಳುಗಡೆ

ಕೊಡಗು ಜಿಲ್ಲೆಯ ವಿಭಿನ್ನ ಆಹಾರಗಳು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.