ಕುಶಾಲನಗರ, ಏ. ೧೬ : ನೂತನ ಕುಶಾಲನಗರ ತಾಲೂಕಿಗೆ ರಾಜ್ಯ ಸರಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿ ಆದೇಶ ಹೊರಡಿಸುವುದಾಗಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಈ ಬಗ್ಗೆ ಸರಕಾರದ ಕಂದಾರ ಇಲಾಖಾ (ಭೂಮಾಪನ) ಅಧೀನ ಕಾರ್ಯದರ್ಶಿ ಎಸ್. ಗುರುಮೂರ್ತಿ ಆದೇಶ ಹೊರಡಿಸಿದ್ದಾರೆ. ಹುದ್ದೆಗಳು ಈ ಕೆಳಗಿನಂತಿವೆ.
ತಹಶೀಲ್ದಾರ್, ಶಿರಸ್ತೇದಾರ್, ಇಬ್ಬರು ಪ್ರಥಮ ದರ್ಜೆ ಸಹಾಯಕರು, ಆಹಾರ ನಿರೀಕ್ಷಕ, ಮೂವರು ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರ, ಡಾಟಾ ಎಂಟ್ರಿ ಆಪರೇಟರ್, ಇಬ್ಬರು ಗ್ರೂಪ್ ಡಿ ನೌಕರರು ಹಾಗೂ ವಾಹನ ಚಾಲಕ ಹೀಗೆ ಒಟ್ಟು ೧೨ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.