ಪೊನ್ನಂಪೇಟೆ, ಏ.೧೬: ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಕಿಗ್ಗಟ್ ನಾಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಉದ್ಘಾಟನೆಯನ್ನು ಕಿಗ್ಗಟ್ ನಾಡ್ ಹಿರಿಯ ನಾಗರಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಬ್ಯಾಟಿಂಗ್ ಮಾಡುವ ಮೂಲಕ ನೆರವೇರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಚುತನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಗ್ರಾ. ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್, ಪಿ ಡಿ ಓ ಪುಟ್ಟರಾಜು, ಅಂತರ‍್ರಾಷ್ಟಿçÃಯ ಓಟಗಾರ ಅಪ್ಪಯ್ಯ, ಗ್ರಾ. ಪಂ. ಸದಸ್ಯರಾದ ರಶೀದ್, ರವಿ, ಸಜನ್ ಮಾಜಿ ತಾ. ಪಂ. ಸದಸ್ಯ ಶಾಜಿ ಅಚ್ಚುತನ್ ಹಾಗೂ ಇನ್ನಿತರರು ಹಾಜರಿದ್ದರು.

ಫಲಿತಾಂಶ : ಫಾರೆಸ್ಟ್ ಹಿಲ್ ಕ್ರಿಕೆಟರ್ಸ್ ಕ್ಲಬ್ ಎಂ. ಕೆ. ಕ್ರಿಕೆಟರ್ಸ್ ವಿರುದ್ಧ ೭ ರನ್ ಗಳಿಂದ ಜಯ ಸಾಧಿಸಿದರೆ, ಬೋಜಿ ಕ್ರಿಕೆಟರ್ಸ್ ವಿರುದ್ಧ ಸೈಕ್ಲೋನ್ ಕ್ರಿಕೆಟರ್ಸ್ ೫ವಿಕೆಟ್ ಗಳ ಜಯ ಸಾಧಿಸಿತು. ಕಣ್ಣನ್ ಟೈಯರ್ಸ್ ಕ್ರಿಕೆಟರ್ಸ್ ವಿರುದ್ಧ ಫಾರೆಸ್ಟ್ ಹಿಲ್ ಕ್ರಿಕೆಟರ್ಸ್ ಕ್ಲಬ್ ೩ ರನ್‌ಗಳಿಂದ ಜಯಭೇರಿ ಬಾರಿಸಿತು.

ಬೋಜಿ ಕ್ರಿಕೆಟರ್ಸ್ ಅನ್ನು ಎಂ.ಕೆ. ಕ್ರಿಕೆಟರ್ಸ್ ೯ ವಿಕೆಟ್ ಗಳಿಂದ ಮಣಿಸಿತು. ಬೋಜಿ ಕ್ರಿಕೆಟರ್ಸ್ ವಿರುದ್ಧ ಕಣ್ಣನ್ ಟೈಯರ್ಸ್ ೮ ವಿಕೆಟ್ ಗಳ ಜಯಭೇರಿ ಬಾರಿಸಿತು. ಎಂ. ಕೆ. ಕ್ರಿಕೆಟರ್ಸ್, ಸೈಕ್ಲೋನ್ ಕ್ರಿಕೆಟರ್ಸ್ ತಂಡವನ್ನು ೭ ರನ್‌ಗಳಿಂದ ಮಣಿಸಿತು. ಫಾರೆಸ್ಟ್ ಹಿಲ್ ಕ್ರಿಕೆಟರ್ಸ್ ವಿರುದ್ಧ ಸೈಕ್ಲೋನ್ ಕ್ರಿಕೆಟರ್ಸ್ ೯ ವಿಕೆಟ್ ಗಳ ಗೆಲುವು ಸಾಧಿಸಿತು. ಕಣ್ಣನ್ ಟೈಯರ್ಸ್ ಕ್ರಿಕೆಟರ್ಸ್, ಸೈಕ್ಲೋನ್ ಕ್ರಿಕೆಟರ್ಸ್ ವಿರುದ್ಧ ೯ ರನ್ ಗಳ ಜಯಭೇರಿ ಬಾರಿಸಿತು.