ಶನಿವಾರಸಂತೆ, ಏ. ೧೬: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಒಂದು ಗಂಟೆ ಕಾಲ ಬೀಸುತ್ತಿದ್ದ ಗಾಳಿ ಹಾಗೂ ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ತುಂತುರಾಗಿ ಆರಂಭವಾದ ಮಳೆ ಜಿನುಗುತ್ತ ಸಾಧಾರಣವಾಗಿ ಸುರಿಯಿತು. ಪಟ್ಟಣದಲ್ಲಿ ೭ ಸೆಂಟ್, ಕಾಜೂರು, ದುಂಡಳ್ಳಿ ಮಾದ್ರೆ, ಬಿಳಾಹ, ಅಪ್ಪಶೆಟ್ಟಳ್ಳಿ ಗ್ರಾಮಗಳಲ್ಲಿ ೧೫-೨೦ ಸೆಂಟ್ ಮಳೆಯಾಗಿದೆ.