ಗೋಣಿಕೊಪ್ಪಲು, ಏ. ೧೬: ಬಡ ಜನತೆ ಅದರಲ್ಲೂ ವಿಶೇಷವಾಗಿ ಅರಣ್ಯದಂಚಿನಲ್ಲಿರುವ ಆದಿವಾಸಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು, ಸರ್ಕಾರದ ಸವಲತ್ತುಗಳು ಅರ್ಹ ಕುಟುಂಬಗಳಿಗೆ ತಲುಪಬೇಕೆಂಬ ಕಲ್ಪನೆಯೊಂದಿಗೆ ಸರ್ಕಾರಗಳು ಇವರ ಬದುಕಿಗೆ ಅನುಕೂಲ ವಾಗಲು ಅನೇಕ ಯೋಜನೆಗಳನ್ನು ಕಾರ್ಯ ರೂಪಕ್ಕೆ ತಂದರೂ ಸಹ ಮೂಲಭೂತವಾಗಿ ಸಿಗಬೇಕಾದ ಸವಲತ್ತುಗಳು ಇನ್ನು ಕೂಡ ಸಿಗದೇ ವಂಚಿತರಾಗಿದ್ದಾರೆ.
ಮನುಷ್ಯನಿಗೆ ಬಹು ಮುಖ್ಯವಾಗಿ ಕುಡಿಯುವ ನೀರಿಗೆ ಸರ್ಕಾರಗಳು ಕೋಟ್ಯಾಂತರ ಹಣವನ್ನು ವಿನಿಯೋಗಿಸಿದ್ದರೂ ಈ ಯೋಜನೆಯ ಫಲ ಗ್ರಾಮೀಣ ಭಾಗದ ಅರಣ್ಯದಂಚಿನಲ್ಲಿರುವ ಆದಿವಾಸಿಗಳಿಗೆ ಇನ್ನೂ ಕೂಡ ತಲುಪಿಲ್ಲ. ಇಂದಿಗೂ ಕುಡಿಯಲು ಇಲ್ಲಿನ ನಿವಾಸಿಗಳು ಗುಂಡಿ ನೀರನ್ನೇ ಶುದ್ದೀಕರಿಸಿ, ನೀರನ್ನು ಅಮೃತವೆಂದು ಭಾವಿಸಿ ಗುಂಡಿಯ ನೀರನ್ನು ಇಲ್ಲಿಯ ತನಕ ಬಳಸುತ್ತಿದ್ದಾರೆ.ಪ್ರತಿ ದಿನ ಗುಂಡಿ ನೀರಿಗೆ ಬಿದ್ದಿರುವ ಕಸ,ಕಡ್ಡಿಗಳನ್ನು ಶುಚಿಗೊಳಿಸಿ ನಂತರ ನೀರನ್ನು ತಲೆಯ ಮೇಲೆ ಹೊತ್ತು ಮನೆಗೆ ಕೊಂಡೊಯ್ಯುತ್ತಿದ್ದಾರೆ.
ದ.ಕೊಡಗಿನ ನಾಗರಹೊಳೆ ವನ್ಯ ಜೀವಿ ಸರಹದ್ದಿನ ಗದ್ದೆ ಹಾಡಿಯಲ್ಲಿ ವಾಸವಿರುವ ೬೦ಕ್ಕೂ ಆದಿವಾಸಿ ಕುಟುಂಬಗಳು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತಗೊAಡು ಕುಡಿಯಲು ಗುಂಡಿಯ ನೀರನ್ನೆ ಬಳಸುತ್ತಿದ್ದಾರೆ.
ಗದ್ದೆಹಾಡಿಯಲ್ಲಿ ನೂರಾರು ಏಕರೆ ಜಾಗವಿದ್ದರೂ ಇಲ್ಲಿರುವ ಕುಟುಂಬಗಳು ಇಂದಿಗೂ ಕೂಡ ಅರಣ್ಯ ಹಕ್ಕು ಕಾಯ್ದೆಯಿಂದ ವಂಚಿತಗೊAಡು ಕೇವಲ ಗುಡಿಸಲುಗಳನ್ನು ನಿರ್ಮಿಸಿಕೊಂಡು ತಮ್ಮ ದೈನಂದಿನ ಬದುಕನ್ನು ಕಟ್ಟಿಕೊಂಡಿದ್ದಾರೆ. ಮಳೆ, ಚಳಿಗಾಲದಲ್ಲಿ ಇಲಾಖೆಯು ನೀಡುವ ಪ್ಲಾಸ್ಟಿಕ್ ಹೊದಿಕೆಗಳೇ ಈ ಗುಡಿಸಲುಗಳಿಗೆ ಆಶ್ರಯವಾಗಿದೆ. ಶತಮಾನಗಳಿಂದ ಪ್ರಕೃತಿಯನ್ನು ದೇವರೆಂದು ನಂಬಿರುವ ಇಲ್ಲಿಯ ಜನತೆ ಮೂಲಭೂತ ಸೌಕರ್ಯಕ್ಕೆ ಹೋರಾಟಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರೂ ಇಲಾಖೆಯ ಕೆಲವು ಅಧಿಕಾರಿಗಳು ಇನ್ನೂ ಕೂಡ ಇವರ ಸಂಕಷ್ಟದಲ್ಲಿ ಭಾಗಿಯಾಗುತ್ತಿಲ್ಲ.
ಗುಡಿಸಲುಗಳನ್ನು ನಿರ್ಮಿಸಿಕೊಂಡು ತಮ್ಮ ದೈನಂದಿನ ಬದುಕನ್ನು ಕಟ್ಟಿಕೊಂಡಿದ್ದಾರೆ. ಮಳೆ, ಚಳಿಗಾಲದಲ್ಲಿ ಇಲಾಖೆಯು ನೀಡುವ ಪ್ಲಾಸ್ಟಿಕ್ ಹೊದಿಕೆಗಳೇ ಈ ಗುಡಿಸಲುಗಳಿಗೆ ಆಶ್ರಯವಾಗಿದೆ. ಶತಮಾನಗಳಿಂದ ಪ್ರಕೃತಿಯನ್ನು ದೇವರೆಂದು ನಂಬಿರುವ ಇಲ್ಲಿಯ ಜನತೆ ಮೂಲಭೂತ ಸೌಕರ್ಯಕ್ಕೆ ಹೋರಾಟಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರೂ ಇಲಾಖೆಯ ಕೆಲವು ಅಧಿಕಾರಿಗಳು ಇನ್ನೂ ಕೂಡ ಇವರ ಸಂಕಷ್ಟದಲ್ಲಿ ಭಾಗಿಯಾಗುತ್ತಿಲ್ಲ.
ಮುಂಜಾನೆ ವೇಳೆ ಮನೆಗೆ ಅವಶ್ಯವಿರುವ ಕುಡಿಯುವ ನೀರನ್ನು ದೂರದ ಗುಂಡಿಯಿAದ ಹೊತ್ತು ತರುವುದು ಇಲ್ಲಿ ಸಾಮಾನ್ಯವಾಗಿದೆ.
೧೯೫೨ರಲ್ಲಿ ಜೇನುಕುರುಬ ಸಮುದಾಯವನ್ನು ಪ್ರಾಚೀನ ಬುಡಕಟ್ಟು ಎಂದು ಘೋಷಣೆ ಮಾಡಿರುವ ಸರ್ಕಾರವು ಅರಣ್ಯ ಹಕ್ಕು ಕಾಯ್ದೆ ಮೂಲಕ ಸಂಪೂರ್ಣ ಸೌಕರ್ಯಗಳನ್ನು ಒದಗಿಸಲು ಅವಕಾಶವಿದ್ದರೂ ಕೇವಲ ಕಾನೂನನ್ನೇ ಮುಂದಿಟ್ಟುಕೊAಡು ಇಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ.ವನ್ಯಜೀವಿ ಕಾಯ್ದೆ, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಅಭಯಾರಣ್ಯವನ್ನು ಮೀರಿದ ಕಾಯ್ದೆ ಇದಾಗಿದ್ದರೂ ಕೆಲವು ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಕಾನೂನಿನ ನಿಯಮಗಳನ್ನು ಹೇಳುತ್ತಲೇ ಇವರ ಬದುಕಿಗೆ ಸಂಚಕಾರ ತಂದಿದ್ದಾರೆ.