ಮಡಿಕೇರಿ, ಏ. ೧೬: ಪೌತಿ ಖಾತೆ ವರ್ಗಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಕಾರುಗುಂದ ಗ್ರಾಮ ಲೆಕ್ಕಿಗ ದೇವಯ್ಯನನ್ನು ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬೀಳಿಸಿದೆ.
ಎಂ.ಎನ್ ಯೋಗೇಶ್ ಎಂಬವರ ಕಾರುಗುಂದ ಗ್ರಾಮದ ಸರ್ವೆ ನಂಬರ್ ೨೨೬/೧೧ ರಲ್ಲಿ ೦.೭೦ ಎಕರೆ, ೨೨೪/೧೬ರಲ್ಲಿ ೨.೨೦ ಎಕರೆ ಜಮೀನಿನ ಆರ್.ಟಿ.ಸಿಯಲ್ಲಿ ಮೃತರ ಹೆಸರನ್ನು ತೆಗೆದು ತನ್ನ ಹೆಸರನ್ನು ಆರ್.ಟಿ.ಸಿಗೆ ಸೇರಿಸುವ ಸಲುವಾಗಿ ಮಾರ್ಚ್ ತಿಂಗಳಿನಲ್ಲಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಕಡತ ಗ್ರಾಮ ಲೆಕ್ಕಿಗ ದೇವಯ್ಯ ಅವರ ಬಳಿ ಇರುವುದರಿಂದ ಅರ್ಜಿದಾರ ಯೋಗೇಶ್ ಅಧಿಕಾರಿಯನ್ನು ಭೇಟಿ ಮಾಡಿದಾಗ, ತನ್ನ ಬಳಿ ಬರುವಾಗ ಬರಿಗೈಯಲ್ಲಿ ಬರಬೇಡ ಎಂದು ಬೈದು ಲಂಚಕ್ಕೆ ಬೇಡಿಕೆ ಇಟ್ಟು ಕಳುಹಿಸಿದ್ದಾರೆ. ಯೋಗೇಶ್ ಅವರ ಆರೋಗ್ಯ ಸ್ಥಿತಿ ಸರಿ ಇಲ್ಲದ ಕಾರಣ ಅವರ ಸ್ನೇಹಿತ ಬೊಳ್ಳದಂಡ ಇ. ನಾಚಪ್ಪ ಅವರ ಸಹಾಯ ಕೋರಿದ್ದಾರೆ. ಇವರು ಕೂಡ ತಾ. ೮ ರಂದು ಕಚೇರಿಗೆ ತೆರಳಿ ಗ್ರಾಮ ಲೆಕ್ಕಿಗನನ್ನು ಭೇಟಿ ಮಾಡಿ ವಿಚಾರಿಸಿದಾಗ ರೂ ೨೫೦೦ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ದೇವಯ್ಯ ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಎ.ಸಿ.ಬಿ.ಗೆ ನಾಚಪ್ಪ ಅವರು ದೂರು ಸಲ್ಲಿಸಿದ್ದಾರೆ. ಕಲಂ ೭ (ಎ) ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡ ಎ.ಸಿ.ಬಿ ಪೊಲೀಸರು ಕಾರುಗುಂದದ ಕಚೇರಿಯಲ್ಲಿ ಗ್ರಾಮ ಲೆಕ್ಕಿಗ ದೇವಯ್ಯ ಲಂಚ ಪಡೆಯುವಾಗ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತನಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ತನಿಖೆ ಮುಂದುವರೆದಿದೆ.
ಎಸಿಬಿ ದಕ್ಷಿಣ ವಲಯ, ಮೈಸೂರಿನ ಪೊಲೀಸ್ ಅಧೀಕ್ಷಕ ಅರುಣಾಂಗ್ಶ್ಶು ಗಿರಿ ಮಾರ್ಗದರ್ಶನದಲ್ಲಿ ನಡೆದ ಟ್ರಾö್ಯಪ್ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿU್ರÀಹದಳ ಪೊಲೀಸ್ ಠಾಣೆಯ ¥್ರÀಬಾರ ಪೊಲೀಸ್ ಉಪಾಧೀಕ್ಷ ಸದಾನಂದ.ಎ.ತಿಪ್ಪಣ್ಣವರ, ಪೊಲೀಸ್ ನಿರೀಕ್ಷಕ ಹರೀಶ್.ಎನ್.ಪಿ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.