ಸೋಮವಾರಪೇಟೆ, ಏ. ೧೬: ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಕ್ಷÄಲ್ಲಕ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜನ್ನು ಪುಡಿಗೈದು ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪಟ್ಟಣ ಸಮೀಪದ ಆಂಜನೇಯ ದೇವಾಲಯ ಬಳಿಯ ನಿವಾಸಿ ಸಂಪತ್‌ಕುಮಾರ್ ಎಂಬವರು ತಮ್ಮ ಕಾರಿನಲ್ಲಿ ಹಾನಗಲ್ಲು ಗಣಪತಿ ದೇವಾಲಯ ಸಮೀಪ ತೆರಳುತ್ತಿದ್ದ ಸಂದರ್ಭ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ವಿ. ಮಿಥುನ್, ಪಟ್ಟಣದ ನಿವಾಸಿ ಕಿರಣ್ ಸೇರಿದಂತೆ ಇತರರು ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜನ್ನು ಪುಡಿಗೈದು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ನಿನ್ನೆ ೧೧ ಗಂಟೆ ಸುಮಾರಿಗೆ ಹಾನಗಲ್ಲು ಗ್ರಾಮದ ಕಿರಣ್ ಎಂಬವರ ಸೋಮವಾರಪೇಟೆ, ಏ. ೧೬: ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಕ್ಷÄಲ್ಲಕ ಕಾರಣಕ್ಕೆ ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜನ್ನು ಪುಡಿಗೈದು ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆಯತ್ನ ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪಟ್ಟಣ ಸಮೀಪದ ಆಂಜನೇಯ ದೇವಾಲಯ ಬಳಿಯ ನಿವಾಸಿ ಸಂಪತ್‌ಕುಮಾರ್ ಎಂಬವರು ತಮ್ಮ ಕಾರಿನಲ್ಲಿ ಹಾನಗಲ್ಲು ಗಣಪತಿ ದೇವಾಲಯ ಸಮೀಪ ತೆರಳುತ್ತಿದ್ದ ಸಂದರ್ಭ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ವಿ. ಮಿಥುನ್, ಪಟ್ಟಣದ ನಿವಾಸಿ ಕಿರಣ್ ಸೇರಿದಂತೆ ಇತರರು ಕಾರನ್ನು ಅಡ್ಡಗಟ್ಟಿ, ಕಾರಿನ ಗಾಜನ್ನು ಪುಡಿಗೈದು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ನಿನ್ನೆ ೧೧ ಗಂಟೆ ಸುಮಾರಿಗೆ ಹಾನಗಲ್ಲು ಗ್ರಾಮದ ಕಿರಣ್ ಎಂಬವರ ಮನೆಗೆ ತೆರಳಿ ಅಲ್ಲಿಂದ ಹಿಂತಿರುಗುತ್ತಿದ್ದ ಸಂದರ್ಭ ರಸ್ತೆಯನ್ನು ತಡೆದು ಮಿಥುನ್, ಕಿರಣ್ ಸೇರಿದಂತೆ ಇತರರು, ಕಾರಿನ ಕಿಟಕಿ ಒಡೆದು ಬಲವಂತವಾಗಿ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಮಿಥುನ್ ತನ್ನ ಕೈಲಿದ್ದ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಲು ಮುಂದಾದ ಸಂದರ್ಭ ತಡೆದ ಹಿನ್ನೆಲೆ ಬಲಗೈಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ ತನ್ನ ಎಕ್ಸ್ಯುವಿ ಕಾರಿನಲ್ಲಿ ಸಂಪತ್ ಅವರನ್ನು ತನ್ನ ಮನೆಗೆ ಕರೆದೊಯ್ದು ಮಿಥುನ್ ಸೇರಿದಂತೆ ಇತರರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರು ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಸಂಪತ್ ಅವರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆರೋಪಿ ಮಿಥುನ್, ಕಿರಣ್ ಸೇರಿದಂತೆ ಇತರರ ವಿರುದ್ಧ ಕಲಂ ೩೪೧, ೩೨೩, ೩೨೪, ೫೦೬, ೩೦೭, ೪೨೭ ರೆ/ವಿ ೩೪ ಅನ್ವಯ ಮೊಕದ್ದಮೆ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಅವರು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.