ಗೋಣಿಕೊಪ್ಪಲು, ಏ. ೧೨: ಹುಲಿ ಕಂಡರೆ ಬೆಚ್ಚಿಬೀಳುವವರೇ ಅಧಿಕ. ಅದರಲ್ಲೂ ಮಾನವನ ಮೇಲೆ ಹುಲಿ ದಾಳಿ ನಡೆಸಿತೆಂದರೆ ಬದುಕುಳಿ ಯುವುದೇ ಅಪರೂಪ. ಹೀಗಿರುವಾಗ ಹುಲಿಯ ಬಾಯಿಗೆ ಸಿಕ್ಕಿ ತಲೆ ಭಾಗಕ್ಕೆ ಮಾರಣಾಂತಿಕ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬ ಸಕಾಲದಲ್ಲಿ ಚಿಕಿತ್ಸೆಯಿಂದ ಬದುಕುಳಿದ ಘಟನೆ ವರದಿಯಾಗಿದೆ. ಆಸ್ಪತ್ರೆಯ ವೈದ್ಯರು ಇನ್ನಿಲ್ಲದ ಪ್ರಯತ್ನ ನಡೆಸಿ ಯಶಸ್ವಿ ಶಸ್ತç ಚಿಕಿತ್ಸೆ ನಡೆಸಿದ ತರುವಾಯ ಸಾವಿನ ದವಡೆಯಿಂದ ಪಾರಾಗಿ ಇದೀಗ ಆತ ಗುಣಮುಖನಾಗಿ ತನ್ನ ಮನೆ ಸೇರಿದ್ದಾನೆ.

ದ.ಕೊಡಗನ್ನು ಬೆಚ್ಚಿಬೀಳಿಸಿದ್ದ ಘಟನೆಯಲ್ಲಿ ಹುಲಿ ಬಾಯಿಗೆ ಸಿಲುಕಿದ್ದ ಕಾರ್ಮಿಕ ೩೫ ದಿನಗಳ ನಂತರ ಚೇತರಿಸಿಕೊಂಡಿದ್ದು ಸುದೀರ್ಘ ಚಿಕಿತ್ಸೆಯ ನಂತರ ಗಾಯಾಳು ಕೆಂಚಶೆಟ್ಟಿಗೆ ಆಸ್ಪತ್ರೆ ವೈದ್ಯರು,ಸಿಬ್ಬಂದಿಗಳು ಕೇಕ್ ಕತ್ತರಿಸಿ, ಶುಭ ಹಾರೈಸಿ ಸಂಸಾರದೊAದಿಗೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಗಾಯಾಳು ಕೆಂಚಶೆಟ್ಟಿಯ ಗೋಣಿಕೊಪ್ಪಲು, ಏ. ೧೨: ಹುಲಿ ಕಂಡರೆ ಬೆಚ್ಚಿಬೀಳುವವರೇ ಅಧಿಕ. ಅದರಲ್ಲೂ ಮಾನವನ ಮೇಲೆ ಹುಲಿ ದಾಳಿ ನಡೆಸಿತೆಂದರೆ ಬದುಕುಳಿ ಯುವುದೇ ಅಪರೂಪ. ಹೀಗಿರುವಾಗ ಹುಲಿಯ ಬಾಯಿಗೆ ಸಿಕ್ಕಿ ತಲೆ ಭಾಗಕ್ಕೆ ಮಾರಣಾಂತಿಕ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬ ಸಕಾಲದಲ್ಲಿ ಚಿಕಿತ್ಸೆಯಿಂದ ಬದುಕುಳಿದ ಘಟನೆ ವರದಿಯಾಗಿದೆ. ಆಸ್ಪತ್ರೆಯ ವೈದ್ಯರು ಇನ್ನಿಲ್ಲದ ಪ್ರಯತ್ನ ನಡೆಸಿ ಯಶಸ್ವಿ ಶಸ್ತç ಚಿಕಿತ್ಸೆ ನಡೆಸಿದ ತರುವಾಯ ಸಾವಿನ ದವಡೆಯಿಂದ ಪಾರಾಗಿ ಇದೀಗ ಆತ ಗುಣಮುಖನಾಗಿ ತನ್ನ ಮನೆ ಸೇರಿದ್ದಾನೆ.

ದ.ಕೊಡಗನ್ನು ಬೆಚ್ಚಿಬೀಳಿಸಿದ್ದ ಘಟನೆಯಲ್ಲಿ ಹುಲಿ ಬಾಯಿಗೆ ಸಿಲುಕಿದ್ದ ಕಾರ್ಮಿಕ ೩೫ ದಿನಗಳ ನಂತರ ಚೇತರಿಸಿಕೊಂಡಿದ್ದು ಸುದೀರ್ಘ ಚಿಕಿತ್ಸೆಯ ನಂತರ ಗಾಯಾಳು ಕೆಂಚಶೆಟ್ಟಿಗೆ ಆಸ್ಪತ್ರೆ ವೈದ್ಯರು,ಸಿಬ್ಬಂದಿಗಳು ಕೇಕ್ ಕತ್ತರಿಸಿ, ಶುಭ ಹಾರೈಸಿ ಸಂಸಾರದೊAದಿಗೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಗಾಯಾಳು ಕೆಂಚಶೆಟ್ಟಿಯ ಬೆಳ್ಳೂರು ಗ್ರಾಮ ಚೆಕ್ಕೆರ ಸೋಮಯ್ಯ ಎಂಬವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕಳೆದೆರಡು ವರ್ಷಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸುಣ್ಣದ ಬೇಗೂರು ಗ್ರಾಮದ ಕೂಲಿ ಕಾರ್ಮಿಕರು ನೆಲೆಸಿದ್ದರು. ಕೆಲಸದಲ್ಲಿ ಅನುಭವವಿದ್ದ ಇವರು ಕಾಫಿ ತೋಟದ ಎಲ್ಲಾ ಕೆಲಸಗಳನ್ನು ನೋಡಿ ಕೊಳ್ಳುತ್ತಿದ್ದರು. ಮುಂಜಾನೆ ಪೈಪ್ ಲೈನ್ ಅನ್ನು ಬದಲಿಸಿ ಜೆಟ್ ಅಳವಡಿಸಲು ಕಾರ್ಮಿಕ ಕೆಂಚಶೆಟ್ಟಿ ಲೈನ್ ಮನೆಯ ಸಮೀಪದಲ್ಲಿ ಜೆಟ್‌ಅನ್ನು ಬದಲಾಯಿಸಲು ತೆರಳಿದ್ದ. ಈ ವೇಳೆ ಹುಲಿಯು ಪ್ರತ್ಯಕ್ಷಗೊಂಡು ನಂತರ ಕೆಂಚಶೆಟ್ಟಿಯ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿ ತೋಟದಲ್ಲಿ ಮರೆಯಾಗಿತ್ತು.

ನಂತರ ಆತನ ಪತ್ನಿ ಗೌರಮ್ಮ ತೋಟಕ್ಕೆ ತೆರಳಿ ತನ್ನ ಗಂಡ ಕೆಂಚಶೆಟ್ಟಿ ರಕ್ತದ ಮಡುವಿನಲ್ಲಿ ನರಳುತ್ತಿದ್ದುದ್ದನ್ನು ಗಮನಿಸಿ ಕೂಡಲೇ ಸಮೀಪದ ಕಾರ್ಮಿಕರ ಸಹಾಯದಿಂದ ಗೋಣಿಕೊಪ್ಪಲುವಿನ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಇಲ್ಲಿನ ವೈದ್ಯರಾದ ಡಾ. ಗ್ರೀಷ್ಮಬೋಜಮ್ಮ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ನ ಮೂಲಕ ಮೈಸೂರಿಗೆ ಕಳುಹಿಸಿದ್ದರು. ಕೆಂಚಶೆಟ್ಟಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

-ಹೆಚ್.ಕೆ. ಜಗದೀಶ್