ಶ್ರೀಮಂಗಲ, ಏ. ೧೨: ಕೂರ್ಗ್ ರೆಜಿಮೆಂಟ್‌ಗೆ ಸೇನೆಯಲ್ಲಿ ಪ್ರತ್ಯೇಕ ಸ್ಥಾನಮಾನವಿದೆ. ಕೊಡವ ಮೂಲ ನಿವಾಸಿ ಯುವಕರನ್ನು ಬೇರೆ ರೆಜಿಮೆಂಟ್‌ಗೆ ಸೇರುವ ಬದಲು ಕೂರ್ಗ್ ರೆಜಿಮೆಂಟ್‌ಗೆ ಸೇರಿ ಎಂದು ಕಾನೂನು ಸಲಹೆಗಾರರು ಹಾಗೂ ವಿಕೇರ್ ಎಕ್ಸ್ ಸರ್ವೀಸ್ ಮ್ಯಾನ್ ಟ್ರಸ್ಟ್ನ ಅಧ್ಯಕ್ಷ ಮಂಡೇಟಿರ ಸುಬ್ರಮಣಿ ಹೇಳಿದರು.

ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಂಡೇಟಿರ ಸುಬ್ರಮಣಿ, ಕೂರ್ಗ್ ರೆಜಿಮೆಂಟ್‌ನಲ್ಲಿ ಪುತ್ತರಿ, ಕೈಲ್‌ಪೊವ್ದ್ನಂತಹ ಕೊಡಗಿನ ಹಬ್ಬಗಳ ಆಚರಣೆಗಳು ಕೂಡ ನಡೆಯುತ್ತದೆ. ಆದರೆ, ರೆಜಿಮೆಂಟ್‌ನಲ್ಲಿ ಕೊಡಗಿನವರು ಶೇ, ೫ ರಷ್ಟು ಇಲ್ಲದಿರುವುದು ದುರಂತ. ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಕೂರ್ಗ್ ರೆಜಿಮೆಂಟ್ ಇಲ್ಲದಾಂತಾಗುವ ಸಾಧ್ಯತೆ ಇದೆ. ಅದರ ರಕ್ಷಣೆಗೆ ಟಿ.ಶೆಟ್ಟಿಗೇರಿ ಸಂಘದ ಮುಖಾಂತರ ಪ್ರಯತ್ನ ನಡೆಯಲಿ ಎಂದ ಅವರು, ಕಾನೂನು ಅರಿತುಕೊಂಡು ಹೋರಾಟ ಮಾಡಿ ಸೌಕರ್ಯ ಪಡೆಯಿರಿ ಎಂದು ತಿಳಿಸಿದರು. ಈ ಸಂದರ್ಭ ಮಾಜಿ ಸೈನಿಕರ ಸಂಘಕ್ಕೆ ೧೦ ಸಾವಿರ ರೂ.ಗಳ ದೇಣಿಗೆ ನೀಡಿದರು.

ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಾದರಿ ಸಂಘವಾಗಿ ಬೆಳೆದು ನಿಂತಿದೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭ ನಿರಾಶ್ರಿತರಿಗೆ ವಿವಿಧ ರೀತಿ ಸಹಕಾರ ನೀಡಿರುವುದು, ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ವಿವಿಧ ಸಲಕರಣೆ ನೀಡಿರುವುದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿರುವುದು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಸೌಕರ್ಯ ಪಡೆಯಿರಿ ಎಂದು ತಿಳಿಸಿದರು. ಈ ಸಂದರ್ಭ ಮಾಜಿ ಸೈನಿಕರ ಸಂಘಕ್ಕೆ ೧೦ ಸಾವಿರ ರೂ.ಗಳ ದೇಣಿಗೆ ನೀಡಿದರು.

ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಾದರಿ ಸಂಘವಾಗಿ ಬೆಳೆದು ನಿಂತಿದೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭ ನಿರಾಶ್ರಿತರಿಗೆ ವಿವಿಧ ರೀತಿ ಸಹಕಾರ ನೀಡಿರುವುದು, ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ವಿವಿಧ ಸಲಕರಣೆ ನೀಡಿರುವುದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕರಿಸಿರುವುದು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಬೋಪಯ್ಯ ದನ ಸಹಾಯ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಸ್ತುತವಿರುವ ಆಡಳಿತ ಮಂಡಳಿಯನ್ನೇ ಮುಂದಿನ ಮೂರು ವರ್ಷಗಳ ಅವಧಿಗೆ ಸಂಘದ ಸದಸ್ಯರು ಸರ್ವಾನುಮತದಿಂದ ಆಯ್ಕೆಗೊಳಿಸಿದರು. ವೇದಿಕೆಯಲ್ಲಿ ಸಂಘದ ಗೌರಾವಾಧ್ಯಕ್ಷ ಚೆಟ್ಟಂಡ ಕಾರ್ಯಪ್ಪ, ಉಪಾಧ್ಯಕ್ಷ ಮನ್ನೇರ ರಮೇಶ್, ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಸತೀಶ್, ನಿರ್ದೇಶಕರಾದ ಚೊಟ್ಟೆಯಾಂಡಮಾಡ ಅರಸು ಗೋಕುಲ, ಮಚ್ಚಮಾಡ ಮನು ಕುಶಾಲಪ್ಪ, ಐಪುಮಾಡ ನಂಜಪ್ಪ, ಮಿದೇರಿರ ಸುರೇಶ್, ಕೈಬುಲ್ಲೀರ ಪಾರ್ವತಿ ಬೋಪಯ್ಯ, ಚೆಟ್ಟಂಗಡ ಪುಣ್ಯವತಿ, ಮಂದಮಾಡ ಗಣೇಶ್, ಉಪಸ್ಥಿತರಿದ್ದರು.