ಭಾಗಮಂಡಲ, ಏ. ೧೨: ಭಾಗಮಂಡಲ ಪಟ್ಟಣದಲ್ಲಿ ಎರಡು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದೆ. ಸಮೀಪದ ಭೂತನಕಾಡುವಿನ ೧೬ ಮತ್ತು ೧೭ ವರ್ಷ ವಯಸ್ಸಿನ ಇಬ್ಬರು ಮಕ್ಕಳಲ್ಲಿ ಕಳೆದ ಎರಡು ದಿನದ ಹಿಂದೆ ಡೆಂಗ್ಯೂ ಪತ್ತೆಯಾಗಿದೆ. ಕಾರ್ಯನಿಮಿತ್ತ ಕೇರಳಕ್ಕೆ ತೆರಳಿದ್ದ ಸಂದರ್ಭ ಮಕ್ಕಳಿಬ್ಬರಿಗೆ ಜ್ವರ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಸಂದರ್ಭ ಡೆಂಗ್ಯೂ ಜ್ವರ ಇರುವುದು ಖಾತ್ರಿಯಾಗಿದೆ.

೧೫ ದಿನಗಳ ಹಿಂದೆ ಒಂದು ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದ್ದು, ಒಟ್ಟಾರೆ ಭಾಗಮಂಡಲದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಭಾಗಮಂಡಲದಲ್ಲಿ ದ್ರವ್ಯ ತ್ಯಾಜ್ಯ ಘಟಕಕ್ಕೆ ಸುಮಾರು ೭೦ ಗುಂಡಿಗಳನ್ನು ಮಾಡಲಾಗಿದ್ದು, ಅದರಲ್ಲಿ ಕೆಲವು ಇಂಗುಗುAಡಿಗಳನ್ನು ಮುಚ್ಚದೇ ಇದ್ದು ಈ ಬಗ್ಗೆ ಸ್ಥಳೀಯರು ಕೂಡಲೇ ಇಂಗುಗುAಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.

ಅಲ್ಲದೇ ಭಾಗಮಂಡಲದಲ್ಲಿ ಮೇಲ್ಸೇತುವೆ ಕೆಲಸ ಕಾರ್ಯಗಳು ನಡೆಯುತ್ತಿದ್ದು ಅಲ್ಲಲ್ಲಿ ನೀರಿನ ಒಳಚರಂಡಿಗಳು ಮುಚ್ಚಿಹೋಗಿದ್ದು ಹೊಟೇಲ್ ಹಾಗೂ ಮಳೆನೀರು ಹೊರಹೋಗದೆ ಅಲ್ಲಲ್ಲಿ ಶೇಖರಣೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕೊಳಚೆ ನೀರು ನಿಲ್ಲದಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಒಂದು ಚರಂಡಿ ಇದ್ದು ಅದರ ನೀರು ಹೊರಹೋಗದೆ ಶೇಖರಣೆಯಾಗುತ್ತಿದೆ.

ಅಲ್ಲದೆ ಕೆಲವು ಅಂಗಡಿಮುAಗಟ್ಟುಗಳಲ್ಲಿ ಎಳನೀರು ಮಾರಾಟದ ಸಿಪ್ಪೆಗಳು ಕಂಡುಬAದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳದೇ ಹೋದಲ್ಲಿ ಆತಂಕಕಾರಿ ಖಾಯಿಲೆಗಳು ಹಬ್ಬುವ ಸಾಧ್ಯತೆಗಳಿವೆ. ಭಾಗಮಂಡಲ ವೈದ್ಯಾಧಿಕಾರಿಗಳನ್ನು ಈ ಬಗ್ಗೆ ‘ಶಕ್ತಿ’ ಸಂಪರ್ಕಿಸಿದ್ದು, ಅಂಗಡಿ ಮುಂಗಟ್ಟುಗಳಿಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಗ್ರಾಮ ಪಂಚಾಯಿತಿ ಕೂಡ ಇಂಗುಗುAಡಿಗಳನ್ನು ಮುಚ್ಚುವಂತೆ ತಿಳಿಸಲಾಗಿದೆ ಎಂದರು.