ಮಡಿಕೇರಿ,ಕುಶಾಲನಗರ, ಏ. ೧೨: ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ ಹಿನ್ನೆಲೆ ಸ್ಥಗಿತಗೊಂಡಿದ್ದ ಸರಕಾರಿ ಸಾರಿಗೆ ಸೇವೆಗಳು ಇದೀಗ ಒಂದೊAದೆ ಆರಂಭಗೊಳ್ಳುತ್ತಿದ್ದು, ಕೊಡಗು ಜಿಲ್ಲೆ ಮೂಲಕ ಹತ್ತಾರು ಸರಕಾರಿ ಬಸ್‌ಗಳು ಸಂಚರಿಸುತ್ತಿವೆ. ಈ ನಡುವೆ ಕುಶಾಲನಗರ ಸನಿಹ ಮಾದಾಪಟ್ಟಣದಲ್ಲಿ ಕೆಲ ಕಾಲ ಮಡಿಕೇರಿ,ಕುಶಾಲನಗರ, ಏ. ೧೨: ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ ಹಿನ್ನೆಲೆ ಸ್ಥಗಿತಗೊಂಡಿದ್ದ ಸರಕಾರಿ ಸಾರಿಗೆ ಸೇವೆಗಳು ಇದೀಗ ಒಂದೊAದೆ ಆರಂಭಗೊಳ್ಳುತ್ತಿದ್ದು, ಕೊಡಗು ಜಿಲ್ಲೆ ಮೂಲಕ ಹತ್ತಾರು ಸರಕಾರಿ ಬಸ್‌ಗಳು ಸಂಚರಿಸುತ್ತಿವೆ. ಈ ನಡುವೆ ಕುಶಾಲನಗರ ಸನಿಹ ಮಾದಾಪಟ್ಟಣದಲ್ಲಿ ಕೆಲ ಕಾಲ ಡಿಪೋಗಳಿಂದ ಕೂಡ ಬಸ್‌ಗಳು ಕೊಡಗಿಗೆ ಬರುತ್ತಿವೆ. ಏತನ್ಮಧ್ಯೆ ಇಂದು ಕುಶಾಲನಗರ ಮಾದಾಪಟ್ಟಣ ಬಳಿ ಮುಷ್ಕರ ನಿರತ ಸಾರಿಗೆ ನೌಕರರು ಸರ್ಕಾರಿ ಬಸ್‌ಗಳನ್ನು ತಡೆದು ಕರ್ತವ್ಯ ನಿರತ ಚಾಲಕರಿಗೆ ಹಾರ ಹಾಕಿ ಹಂಗಿಸುವ ಮೂಲಕ ಪ್ರತಿಭಟನೆ ನಡೆಯಿತು. ಬಳಿಕ ಪೊಲೀಸ್ ರಕ್ಷಣೆಯಲ್ಲಿ ಮಡಿಕೇರಿ ಕಡೆಗೆ ಸರ್ಕಾರಿ ಬಸ್ ಸಂಚಾರ ಸುಗಮಗೊಂಡಿತು.

ಮೈಸೂರು- ಪುತ್ತೂರು ನಡುವೆ ಇಂದು ಐರಾವತ ಬಸ್‌ಗಳು ಸಂಚರಿಸಿದವು. ಇಂದು ಪುತ್ತೂರು ಡಿಪೋದ ಕೆಲವು ಚಾಲಕರನ್ನು ಅಲ್ಲಿನ ಪೊಲೀಸರು ಸಂಪರ್ಕಿಸಿ ಅನೇಕರಿಗೆ ವೇತನ ನೀಡಿಕೆಯ ವ್ಯವಸ್ಥೆ ಮಾಡಿ ಪುತ್ತೂರು, ಮೈಸೂರು- ಬೆಂಗಳೂರು ನಡುವೆ ಸುಮಾರು ೧೦ ಬಸ್‌ಗಳು ಸಂಚರಿಸುವAತೆ ಕ್ರಮ ಕೈಗೊಂಡಿದ್ದಾರೆ. ಇಂದು ಮ್ಯಸೂರಿನಿಂದ ಬರುತ್ತಿದ್ದ ಕೆಲವು ಸರಕಾರಿ ಬಸ್‌ಗಳನ್ನು ಕೂಡಿಗೆ, ಕುಶಾಲನಗರದ ಸುಮಾರು ೨೫ ಮಂದಿ ಸಾರಿಗೆ ಇಲಾಖಾ ನೌಕರರು ತಡೆದು ಬೆದರಿಕೆಯೊಡ್ಡಿದರು. ಆಲ್ವಿನ್ ಎಂಬ ಪುತ್ತೂರಿನ ಚಾಲಕನನ್ನು ಮಾದಾಪಟ್ಟಣದ ಬಳಿ ನಿಲ್ಲಿಸಿ ಆತನನ್ನು ಹಂಗಿಸಲು ಆತನಿಗೆ ಹಾರಾರ್ಪಣೆ ಮಾಡಿ ಬಳಿಕ ಬೈಗುಳದ ಮಳೆ ಹರಿಸಿದ್ದಾರೆ. ಈ ಘಟನೆಯಿಂದ ನೊಂದ ಚಾಲಕ ಬಸ್‌ನಿಂದ ಇಳಿದು ಸ್ಥಳದಿಂದ ಹೊರ ತೆರಳಿದ್ದಾರೆ. ಇದರಿಂದಾಗಿ ಆ ಬಸ್‌ನಲ್ಲಿದ್ದ ಸುಮಾರು ೧೫ ಮಂದಿ ಪ್ರಯಾಣಿಕರು ಆತಂಕಗೊAಡಿದ್ದಾರೆ. ಆ ಸಂದರ್ಭ ಕುಶಾಲನಗರದಿಂದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಸ್ಥಳದಲ್ಲಿದ್ದ ಪ್ರತಿಭಟನಾ ನಿರತ ಸಾರಿಗೆ ನೌಕರರು ಕೂಡ ಜಾಗ ಖಾಲಿ ಮಾಡಿದ್ದಾರೆ. ಬಳಿಕ ಚಾಲಕ ಆಲ್ವಿನ್ ಬಸ್ ಅನ್ನು ನಿರಾತಂಕವಾಗಿ ಪುತ್ತೂರು ಕಡೆ ಚಲಾಯಿಸಿದ್ದಾರೆ. ಈ ನಡುವೆ ಇಂದು ಬೆ. ಸುಮಾರು ೭ ರ ವೇಳೆ ಕುಶಾಲನಗರ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಬಸ್ ನಿಲ್ದಾಣದಲ್ಲಿ ಜಮಾಯಿಸತೊಡಗಿದವು. ಮೈಸೂರಿಗೆ, ಬೆಂಗಳೂರಿಗೆ ಎಂದು ಮೈಕ್‌ನಲ್ಲಿ ಘೋಷಣೆ ಪ್ರಾರಂಭವಾದಾಗ ಕೆಲವು ಮಂದಿ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಕುಳಿತಿದ್ದವರು ಇಳಿದು ಬಂದು ಸರಕಾರಿ ಬಸ್ ಏರಿದರು.

(ಮೊದಲ ಪುಟದಿಂದ) ಇದರಿಂದ ಸಿಟ್ಟುಗೊಂಡ ಖಾಸಗಿ ಬಸ್‌ನವರು “ನೀವು ನಮ್ಮ ಹಿಂದೆ ಕ್ಯೂನಲ್ಲಿ ಬನ್ನಿ ಮೊನ್ನೆಯಿಂದ ಸರ್ಕಾರದ ಆದೇಶದ ಮೇರೆÀಗೆ ನಾವೇ ಪ್ರಯಾಣಿಕರನ್ನು ಒಯ್ಯುತ್ತಿದ್ದೇವೆ” ಎಂದು ಜಗಳಕ್ಕಿಳಿದಾಗ ಪರಸ್ಪರ ಘರ್ಷಣೆೆ ಪ್ರಾರಂಭವಾಯಿತು. ಬಳಿಕ ಪೊಲೀಸ್ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ಶಾಂತವಾಯಿತು. ಅಂತೂ ಕೆಲವು ಸರಕಾರಿ ಬಸ್‌ಗಳ ಮರು ಸಂಚಾರದಿAದ ಖಾಸಗಿ ಬಸ್ ಚಾಲಕರಿಗೆ ತೀವ್ರ ನಿರಾಸೆಯುಂಟಾಯಿತು.

ಮುಷ್ಕರದ ಹಿನ್ನೆಲೆ ಮಡಿಕೇರಿ ಡಿಪೋದಲ್ಲಿ ನಿಂತಿದ್ದ ಬಸ್‌ಗಳ ಪೈಕಿ ೧೦ ಬಸ್‌ಗಳ ಸೇವೆ ಆರಂಭವಾಗಿದೆ. ಇದರಲ್ಲಿ ಮೈಸೂರು ಹಾಗೂ ಮಂಗಳೂರಿಗೆ ೪, ಕೊಣನೂರಿಗೆ ೧, ಕುಶಾಲನಗರಕ್ಕೆ ೫ ಬಸ್‌ಗಳು ಸಂಚರಿಸುತ್ತಿವೆ. ಉಳಿದಂತೆ ಮ್ಯಾಕ್ಸಿಕ್ಯಾಬ್, ಮಿನಿಬಸ್‌ಗಳು ಕೂಡ ಸೇವೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ ಸೇವೆ ಆರಂಭಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂವರು ವಶಕ್ಕೆ : ಕರ್ತವ್ಯ ನಿರತ ಸಾರಿಗೆ ಬಸ್‌ಗೆ ತಡೆಯೊಡ್ಡಿದ ಪ್ರಕರಣಕ್ಕೆ ಸಂಬAಧಿಸಿದAತೆ ತಡ ರಾತ್ರಿ ಕುಶಾಲನಗರ ಪೊಲೀಸರು ಮೂವರು ಮುಷ್ಕರ ನಿರತ ನೌಕರರನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. -ರಾಕೇಶ್, ಚÀಂದ್ರಮೋಹನ್