ಮಡಿಕೇರಿ, ಏ. ೧೨: ಮಡಿಕೇರಿ ನಗರಸಭೆಯ ೨೩ ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆ ಸಂಬAಧ ಇಂದು ೧೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ್ದು, ಜಾತ್ಯಾತೀತ ಜನತಾದಳದಿಂದ ಐದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ಎಸ್ಡಿಪಿಐನಿಂದ ಮಡಿಕೇರಿ, ಏ. ೧೨: ಮಡಿಕೇರಿ ನಗರಸಭೆಯ ೨೩ ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆ ಸಂಬAಧ ಇಂದು ೧೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ್ದು, ಜಾತ್ಯಾತೀತ ಜನತಾದಳದಿಂದ ಐದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ಎಸ್ಡಿಪಿಐನಿಂದ ರವಿಕುಮಾರ್, ವಾರ್ಡ್ ನಂಬರ್ ೧೨ ರಿಂದ ನಿಸಾರ್ ಅಹಮದ್, ವಾರ್ಡ್ ನಂಬರ್ ೧೮ ರಿಂದ ಎನ್.ಸಿ. ಸುನಿಲ್ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ೨ನೇ ವಾರ್ಡ್ನಿಂದ ಮೂರು ಮಂದಿ, ೧೦ನೇ ವಾರ್ಡ್ನಿಂದ ಇಬ್ಬರು, ೧೧, ೧೩, ೧೭ ಹಾಗೂ ೨೦ನೇ ವಾರ್ಡ್ಗಳಿಂದ ಒಬ್ಬೊಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. (ಮೊದಲ ಪುಟದಿಂದ) ಕಾಂಗ್ರೆಸ್ ಪಕ್ಷದಿಂದ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮವಾಗಿಲ್ಲ. ತಾ. ೧೩ ರಂದು (ಇಂದು) ಎಲ್ಲಾ ಅಭ್ಯರ್ಥಿ ಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ. ಎಸ್ಡಿಪಿಐನಿಂದ ೧೨ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಇಂದು ೪ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಉಳಿದವರು ತಾ. ೧೫ ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಮನ್ಸೂರ್ ತಿಳಿಸಿದ್ದಾರೆ. ಜೆಡಿಎಸ್ನಿಂದ ಐದು ಮಂದಿ ಇಂದು ನಾಮಪತ್ರ ಸಲ್ಲಿಸಿದ್ದು, ಉಳಿದ ೧೮ ಮಂದಿ ತಾ. ೧೫ ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದ್ದಾರೆ.
ಬಿಜೆಪಿಯಿಂದ ೨೧ ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದ್ದು, ವಾರ್ಡ್ ೧ ರಿಂದ ಚಿತ್ರಾವತಿ, ೨ನೇ ವಾರ್ಡ್ನಿಂದ ಮಹೇಶ್ ಜೈನಿ, ೩ನೇ ವಾರ್ಡ್ನಿಂದ ಕವಿತಾ, ೪ನೇ ವಾರ್ಡ್ನಿಂದ ದೀಪು, ೫ನೇ ವಾರ್ಡ್ನಿಂದ ಎಸ್.ಸಿ. ಸತೀಶ್, ೬ನೇ ವಾರ್ಡ್ನಿಂದ ಕೆ.ಎಸ್. ರಮೇಶ್, ೮ನೇ ವಾರ್ಡ್ನಿಂದ ಸವಿತಾ ರಾಕೇಶ್, ೯ನೇ ವಾರ್ಡ್ನಿಂದ ಕಲಾವತಿ, ೧೦ನೇ ವಾರ್ಡ್ನಿಂದ ಬಿ.ಕೆ. ಜಗದೀಶ್, ೧೧ನೇ ವಾರ್ಡ್ನಿಂದ ಶಿವಕುಮಾರಿ, ೧೨ನೇ ವಾರ್ಡ್ನಿಂದ ಬಿ.ಎಂ. ರಾಜೇಶ್, ೧೩ನೇ ವಾರ್ಡ್ನಿಂದ ಮಂಜುಳಾ, ೧೪ನೇ ವಾರ್ಡ್ನಿಂದ ಉಷಾ ಕುಮಾರಿ, ೧೫ನೇ ವಾರ್ಡ್ನಿಂದ ಚಂದ್ರು, ೧೬ನೇ ವಾರ್ಡ್ನಿಂದ ಕವನ್, ೧೮ನೇ ವಾರ್ಡ್ನಿಂದ ಉಮೇಶ್ ಸುಬ್ರಮಣಿ, ೧೯ನೇ ವಾರ್ಡ್ನಿಂದ ಕೆ.ಎಂ. ಅಪ್ಪಣ್ಣ, ೨೦ನೇ ವಾರ್ಡ್ನಿಂದ ಅನಿತಾ ಪೂವಯ್ಯ, ೨೧ನೇ ವಾರ್ಡ್ನಿಂದ ಶ್ವೇತಾ ಪ್ರಶಾಂತ್, ೨೨ನೇ ವಾರ್ಡ್ ನಿಂದ ಸಬಿತಾ, ೨೩ನೇ ವಾರ್ಡ್ನಿಂದ ಶಾರದ ನಾಗರಾಜ್ ಕಣಕ್ಕಿಳಿಯ ಲಿದ್ದಾರೆ. ವಾರ್ಡ್ ನಂ ೧೭ ಹಾಗೂ ೭ರಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊAಡಿಲ್ಲ ಎಂದು ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ತಿಳಿಸಿದ್ದಾರೆ.
ಮಡಿಕೇರಿ ನಗರಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಪಕ್ಷದ ಕೊಡಗು ಜಿಲ್ಲಾ ವೀಕ್ಷಕರಾದ ಎಸ್.ಬಿ.ಉದಯಕುಮಾರ್ ಹಾಗೂ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ಬಿಡುಗಡೆ ಮಾಡಿದ್ದು, ೧೧ ನೇ ವಾರ್ಡ್ನಿಂದ ಫಾತಿಮ ಸಿ.ಎ, ೧೭ ನೇ ವಾರ್ಡ್ ಎಂ.ಕೆ.ಅಪ್ಪಯ್ಯ, ೧೯ ನೇ ವಾರ್ಡ್ ಪೃಥ್ವಿ ಹೆಚ್.ಬಿ ಹಾಗೂ ಕಲಂದರ್ ಬಾಷ ಅವರು ೧೦ ಮತ್ತು ೧೨ನೇ ವಾರ್ಡ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಎರಡನೇ ಪಟ್ಟಿಯನ್ನು ಸಧ್ಯದಲ್ಲಿಯೇ ಬಿಡುಗಡೆ ಮಾಡುವುದಾಗಿ ಅವರುಗಳು ತಿಳಿಸಿದ್ದಾರೆ.