ಮಡಿಕೇರಿ, ಏ. ೧೨: ಜಲ್ಲಿ, ಕಲ್ಲು ಸೇರಿದಂತೆ ಕಟ್ಟಡ ಸಾಮಾಗ್ರಿ ಸಾಗಾಟ ಮಾಡುವ ಲಾರಿ, ಟಿಪ್ಪರ್ ಮಾಲೀಕರ ಸಮಸ್ಯೆ ಪರಿಹಾರಕ್ಕೆ ಸಂಘಟನಾತ್ಮಕ ಹೋರಾಟ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ಕೊಡಗು ಜಿಲ್ಲಾ ಲಾರಿ ಚಾಲಕರ ಹಾಗೂ ಮಾಲೀಕರ ಒಕ್ಕೂಟದ ಸಭೆ ನಗರದ ಹೊಟೇಲ್ ಸಮುದ್ರ ಹಾಲ್‌ನಲ್ಲಿ ನಡೆಯಿತು.

ಒಕ್ಕೂಟದ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ, ಲಾರಿ, ಟಿಪ್ಪರ್‌ಗಳಲ್ಲಿ ಕಟ್ಟಡ ಸಾಮಾಗ್ರಿ ಸರಬರಾಜು ಮಾಡುವವರನ್ನು ಗುರಿ ಮಾಡಿ ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿದೆ. ಈ ಹಿನ್ನೆಲೆ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು, ವಿಪಕ್ಷ ನಾಯಕರು, ಕೊಡಗಿನ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸುವಂತೆ ಹೇಳಿದರು.

ಇದಕ್ಕೆ ಸಭೆಯಲ್ಲಿ ಒಪ್ಪಿಗೆ ಪಡೆದು ನಿರ್ಧಾರ ಕೈಗೊಳ್ಳಲಾಯಿತು. ಕ್ವಾರಿ, ಕ್ರಷರ್‌ಗಳಲ್ಲಿ ಬಿಗಿ ಕ್ರಮವಹಿಸಿರುವುದ ರಿಂದ ಲಾರಿ ಮಾಲೀಕರಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ.

(ಮೊದಲ ಪುಟದಿಂದ) ಲಾರಿಯನ್ನು ಪೊಲೀಸ್ ಇಲಾಖೆ ತಡೆದು ದಾಖಲಾತಿ ಇದ್ದರೂ ಪ್ರಕರಣ ದಾಖಲಿಸುವ ಘಟನೆ ನಡೆಯುತ್ತಿದ್ದು ಇದರ ವಿರುದ್ಧ ಸಂಘಟನಾತ್ಮಕ ಹೋರಾಟ ಮುಖ್ಯ ಎಂದರು.

ಲಾರಿ ಚಾಲಕರನ್ನು ಪೊಲೀಸ್ ಇಲಾಖೆ ಗುರಿ ಮಾಡಿ ತೊಂದರೆಗೆ ಸಿಲುಕಿಸುತ್ತಿವೆ. ಇದನ್ನು ಮೇಲಾಧಿಕಾರಿ ಗಮನಕ್ಕೆ ತರಬೇಕು ಎಂದರು.

ಕೇರಳದಿಂದ ಬರುವ ಲಾರಿಗಳು ಯಾವುದೇ ತಡೆ ಇಲ್ಲದೆ ಜಿಲ್ಲೆಗೆ ಬರುತ್ತಿದೆ. ಆದರೆ, ಕೊಡಗಿನ ಚಾಲಕರಿಗೆ ಮಾತ್ರ ತಡೆ ಮಾಡುತ್ತಿರು ವುದರ ಬಗ್ಗೆ ಖಂಡಿಸಿದರು.

ಅಭಿಪ್ರಾಯಪಟ್ಟರು.

ಸಭೆಯಲ್ಲಿ ಒಕ್ಕೂಟದ ವೀರಾಜಪೇಟೆ ಪ್ರಮುಖ ಸುಮನ್, ಗೋಣಿಕೊಪ್ಪದ ಅಮೃತರಾಜು, ಕುಶಾಲನಗರದ ಸಂತೋಷ್, ಮಡಿಕೇರಿಯ ಮನು, ಮಡಿಕೇರಿ ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷ ರಾಜು ಲೋಚನ, ಸೋಮವಾರಪೇಟೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಾರೆನ್ಸ್, ಗುತ್ತಿಗೆದಾರ ಚಿನ್ಮಯಿ ಚಂಗಪ್ಪ, ಮಡಿಕೇರಿ ನಗರಾಧ್ಯಕ್ಷ ರವಿಕುಮಾರ್ ಸೇರಿದಂತೆ ಇನ್ನಿತರರು ಇದ್ದರು. ಸಭೆಯಲ್ಲಿ ನೂರಕ್ಕೂ ಅಧಿಕ ಲಾರಿ ಮಾಲೀಕರು ಮತ್ತು ಚಾಲಕರು ಪಾಲ್ಗೊಂಡಿದ್ದರು.