ಮಡಿಕೇರಿ, ಏ. ೧೨: ಕೊಳೆತ ಸ್ಥಿತಿಯಲ್ಲಿ ಪುರುಷನ ಅಪರಿಚಿತ ಮೃತದೇಹವೊಂದು ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ಪತ್ತೆಯಾಗಿದೆ ಎಂದು ಕುಶಾಲನಗರ ನಗರ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ. ತಾ. ೮ ರಂದು ಕುಶಾಲ ನಗರದ ಮುತ್ತಪ್ಪ ದೇವಾಲಯದ ಪೂಜೆಗೆ ನೀರು ತರಲೆಂದು ವ್ಯಕ್ತಿಯೋರ್ವ ತೆರಳಿದ ಸಂದರ್ಭ ಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿ ನೋಡಿದಾಗ ಮೃತದೇಹ ಗೋಚರಿಸಿದೆ. ಮೃತವ್ಯಕ್ತಿ ಅಂದಾಜು ೩೫ ರಿಂದ ೪೦ ವರ್ಷ ಒಳಪಟ್ಟಿದ್ದು, ನೀಲಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿರುವುದಾಗಿ ತಿಳಿಸಿದ್ದಾರೆ. ಮೃತದೇಹದ ವಾರಿಸುದಾರರು ಇದ್ದಲ್ಲಿ ಕುಶಾಲನಗರ ಠಾಣೆ, ೦೮೨೭೬೨೭೪೩೩೩ಗೆ ಸಂಪರ್ಕಿಸುವAತೆ ಕೋರಿದ್ದಾರೆ.