ಮಡಿಕೇರಿ, ಏ. ೧೨: ಇ.ಸಿ.ಹೆಚ್.ಎಸ್. ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗುತ್ತಿರುವ ಕ|| ಪಿ.ಬಿ. ಅಯ್ಯಪ್ಪ ಅವರು, ಸಂಸ್ಥೆಗೆ ಕಂಪ್ಯೂಟರ್ವೊAದನ್ನು ಕೊಡುಗೆ ನೀಡಿದ್ದಾರೆ. ಕ|| ಅಯ್ಯಪ್ಪ ಅವರು ಇ.ಸಿ.ಹೆಚ್.ಎಸ್. ನಲ್ಲಿ ಆರು ವರ್ಷದಿಂದ ಸೇವೆ ಸಲ್ಲಿಸಿದ್ದರು. ತಾ. ೮ ರಂದು ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ, ಅವರ ಸೇವೆಯನ್ನು ಸ್ಮರಿಸಲಾಯಿತು. ಗ್ರೂಪ್ ಕ್ಯಾಪ್ಟನ್ ಕಾರ್ಯಪ್ಪ ಡಾ|| ಹರ್ಷ ಮತ್ತು ಸಿಬ್ಬಂದಿ ಹಾಜರಿದ್ದರು.