ಕುಶಾಲನಗರ, ಏ. ೧೨: ಚಿಕ್ಕಅಳುವಾರ ಗ್ರಾಮದಲ್ಲಿರುವ ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಒಳಪಟ್ಟ ಪಿ.ಜಿ. ಸೆಂಟರ್‌ನಲ್ಲಿ ಎಂ.ಕಾA ವ್ಯಾಸಂಗ ಮಾಡಿದ ಎಂ.ಸೋನಿಯಾಳಿಗೆ ಚಿನ್ನದ ಪದಕ ಲಭಿಸಿದೆ.

ತಾ.೧೦ರಂದು ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸೇರಿದ ಮಂಗಳ ಸಭಾಂಗಣದಲ್ಲಿ ನಡೆದ ೩೯ನೇ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಪ್ರೊಪೆಸರ್. ಪಿ.ಎಸ್. ಯಡಿಪಡಿತ್ತಾ ಯ ಉಪಸ್ಥಿತರಿದ್ದು ಚಿನ್ನದ ಪದಕವನ್ನು ಪ್ರದಾನ ಮಾಡಿದರು. ವೇದಿಕೆಯಲ್ಲಿ ಕುಲಸಚಿವರಾದ ಧರ್ಮ ಉಪಸ್ಥಿರಿದ್ದರು.

ಕು. ಎಂ. ಸೋನಿಯಾ ಕುಶಾಲ ನಗರ ಸಮೀಪದ ಚಿಕ್ಕಅಳುವಾರ ಗ್ರಾಮದಲ್ಲಿ ರುವ ಪಿ.ಜಿ. ಸೆಂಟರ್ ನಲ್ಲಿ ಎಂ.ಕಾA. ನಲ್ಲಿ ವಿಶೇಷತೆ ವಿಷಯದ ಮೇರೆ ಅಂತಿಮ ವರ್ಷದಲ್ಲಿ ಟ್ಯಾಕ್ಸ್ ವಿಷಯವನ್ನು ವ್ಯಾಸಂಗ ಮಾಡಿ ಚಿನ್ನದ ಪದಕ ಪಡೆದಿದ್ದು, ಹೆಬ್ಬಾಲೆ ಗ್ರಾಮದ ಹೆಚ್.ಜೆ. ಮಹೇಶ ಮತ್ತು ಮಣಿ ದಂಪತಿಯ ಪುತ್ರಿಯಾಗಿದ್ದಾರೆ.