(ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಏ.೧೨: ತಮ್ಮ ಕೆಲಸದ ಒತ್ತಡದ ನಡುವೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಲುವಾಗಿ ವಿರಾಜಪೇಟೆ ತಾಲೂಕಿನ ತಹಶೀಲ್ದಾರ್ ಯೋಗಾನಂದ್‌ರವರು ಕಿರುಚಿತ್ರದಲ್ಲಿ ಪಾತ್ರ ನಿರ್ವಹಿಸಲು ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ‘ಸಂಪರ್ಕಿಸಿ’ ಎಂಬ ಕಿರುಚಿತ್ರದಲ್ಲಿ ಸಬ್‌ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಅಭಿನಯಿಸಿದ ಕಿರುಚಿತ್ರಕ್ಕೆ ತುಮಕೂರು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ೨೦೨೧ನೇ ಸಾಲಿನ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆಗಿ ನೇಮಕಗೊಂಡಿರುವ ಯೋಗಾನಂದರವರು ಜನಸ್ನೇಹಿ ಅಧಿಕಾರಿಯಾಗಿ ಕ್ಷೇತ್ರದಲ್ಲಿ ಬಡ ಜನತೆಗೆ ತಕ್ಷಣ ಸ್ಪಂದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯೋಗಾನಂದ್ ಸಮಾಜದಲ್ಲಿ ಸಂಕುಚಿತ ಮನೋಭಾವದ ಪುರುಷರ ಮನಪರಿವರ್ತನೆಗೆ ಉತ್ತಮ ಸಂದೇಶ ಸಾರುವ ೧೩.೯ ನಿಮಿಷದ ಕಿರುಚಿತ್ರ ಇದಾಗಿದ್ದು, ಯುವ ಸಮಾಜವೂ ಮಾಡುವ ತಪ್ಪಿನಿಂದ ಹೆಣ್ಣು ಹೇಗೆ ಅನಿವಾರ್ಯವಾಗಿ ಎದುರಾಗುವ ಸಂಕಷ್ಟಗಳನ್ನು ಸಹಿಸುತ್ತಾಳೆ ಅನ್ನುವುದನ್ನು ಉದ್ದೇಶವಾಗಿಟ್ಟುಕೊಂಡು ಚಿತ್ರ ಮಾಡಲಾಗಿದೆ. ಹೆಣ್ಣಿನ ಮನಸ್ಸನ್ನು ಘಾಸಿಗೊಳಿಸುವ ಯುವ ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಈ ಚಿತ್ರ ಮೂಡಿ ಬಂದಿದೆ. ‘ಸಂಪರ್ಕಿಸಿ’ ಚಿತ್ರ ಯೂಟ್ಯೂಬ್‌ನಲ್ಲಿಯೂ ಸಾರ್ವಜನಿಕ ಶೌಚಾಲಯ, ಬಸ್ಸು ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ವಿವಿಧ ಗೋಡೆಗಳ ಮೇಲೆ ಹೆಣ್ಣು ಮಕ್ಕಳ ಮೇಲಿನ ದ್ವೇಷವನ್ನು ಸಾಧಿಸಲು ಅವರ ಮೊಬೈಲ್ ಸಂಖ್ಯೆಗಳನ್ನು ಬರೆದಿಟ್ಟು ಕಿರುಕುಳ ನೀಡುತ್ತಾರೆ. ಇಂತಹ ಮನಸ್ಥಿತಿಯನ್ನು ತೊಡೆದು ಹಾಕುವ ಉದ್ದೇಶದಿಂದ ಹಲವು ಆತ್ಮೀಯ ಸ್ನೇಹಿತರು ಒಟ್ಟಾಗಿ ಕಿರುಚಿತ್ರವನ್ನು ತಯಾರು ಮಾಡಿದ್ದೇವೆ. ಇದೀಗ ರಾಜ್ಯಮಟ್ಟದ ಅತ್ಯುತ್ತಮ ಕಿರುಚಿತ್ರ ಎಂದು ಪ್ರಥಮ ಬಹುಮಾನ ಲಭಿಸಿದೆ. ನಿರ್ಮಿಸಿದ ಕಿರುಚಿತ್ರ ಉದ್ದೇಶ ಫಲ ನೀಡಿದೆ.

-ಯೋಗಾನಂದ, ತಹಶೀಲ್ದಾರ್, ವೀರಾಜಪೇಟೆ ತಾಲೂಕು ವೈರಲ್ ಆಗಿದ್ದು, ಲಕ್ಷಕ್ಕೂ ಅಧಿಕ ಮಂದಿ ಈ ಚಿತ್ರವನ್ನು ವೀಕ್ಷಿಸಿ ಲೈಕ್ ಮಾಡಿದ್ದಾರೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.

ಮಂಡ್ಯದ ಡಿಪಿ ಕ್ರಿಯೇಶನ್ ತಯಾರಿಸಿದ ಈ ಕಿರುಚಿತ್ರ ೨೨ನೇ ಶತಮಾನದಲ್ಲಿಯೂ, ಹೆಣ್ಣು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ, ಶೌಚಾಲಯಗಳಲ್ಲಿ ಯುವತಿಯ ಮೊಬೈಲ್ ಸಂಖ್ಯೆಗಳನ್ನು ಬರೆದಿಟ್ಟು ವಿಕೃತಿ ಮೆರೆಯುತ್ತಿದ್ದಾರೆ. ಇಂತಹ ಕೆಟ್ಟ ಮನಸ್ಸುಗಳನ್ನು ಪರಿವರ್ತಿಸುವ ಉದ್ದೇಶದಿಂದ ಈ ಕಿರುಚಿತ್ರವನ್ನು ತೆರೆಗೆ ತರಲಾಗಿದೆ.