ಮಡಿಕೇರಿ, ಏ. ೧೧: ಕೊಡಗು ಜಿಲ್ಲೆ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಮಾನವ ಹಸ್ತಕ್ಷೇಪವೇ ಪ್ರಮುಖ ಕಾರಣವೆಂದು ಅಭಿಪ್ರಾಯಪಟ್ಟಿರುವ ತಜ್ಞರ ವರದಿ ಹಾಗೂ ನೀಡಿರುವ ಮಾರ್ಗೋಪಾಯಗಳನ್ನು ಸಾರಾ ಸಗಟಾಗಿ ಸರಕಾರ ತಿರಸ್ಕಾರ ಮಾಡಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಅಧ್ಯಕ್ಷರುಗಳು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಭೂಕುಸಿತ ತಡೆಗಟ್ಟಲು ಹಾಗೂ ನಿಯಂತ್ರಿಸಲು ಅರಣ್ಯ ಪರಿಸರ ಮತ್ತು ಜೀವಶಾಸ್ತç ಇಲಾಖೆ ಮೂಲಕ ಸರಕಾರವು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶಿಸರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಇ ಸಮಿತಿಯು ತಯಾರಿಸಿದ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. ವರದಿಯಲ್ಲಿ ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆ ಹಾಗೂ ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪವೇ ಮೂಲ ಕಾರಣ ಎಂದು ಹೇಳಲಾಗಿದೆ. ಇದರೊಂದಿಗೆ ಕೆಲವೊಂದು ಮಾರ್ಗೋ ಪಾಯಗಳನ್ನು ಕೂಡ ನೀಡಲಾಗಿದೆ. ಆದರೆ, ಈ ವರದಿ ಸಮರ್ಪಕವಾಗಿಲ್ಲ; ಇದನ್ನು ತಿರಸ್ಕರಿಸಬೇಕೆಂದು ಜಿಲ್ಲೆ ಜನಪ್ರತಿನಿಧಿಗಳು ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಒಪ್ಪಿಕೊಳ್ಳಲು ಸಾಧ್ಯವಿಲ್ಲ
ತಜ್ಞರು ಅರಣ್ಯ ನಾಶ ಆಗಿದೆ ಅಂತ ಹೇಳ್ತಾರಲ್ಲಾ ಹಾಗಿದ್ದರೆ ಅರಣ್ಯದಲ್ಲಿ ಯಾಕೆ ಭೂಕುಸಿತವಾಗಿದೆ..? ಅರಣ್ಯದಲ್ಲಿ ರಸ್ತೆ ಮಾಡಿಲ್ಲವಲ್ಲ..? ಇದೊಂದು ಪ್ರಾಕೃತಿಕ ಸ್ವಾಭಾವಿಕ ಕ್ರಿಯೆ, ೫೦೦- ೧೦೦೦ ವರ್ಷಗಳ ಹಿಂದೆಯೂ ಇದೇ ರೀತಿ ಆಗಿರಬಹುದು. ಹಾಗೆ ನೋಡಿದರೆ ಮಲೇಶಿಯಾ, ಹಿಮಾಲಯಗಳಲ್ಲೂ ಭೂಕುಸಿತವುಂಟಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮರ,ಗಿಡಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಳೆಗಾರರು ತೋಟದಲ್ಲಿ ಎಕರೆಗೆ ೪೦೦ರಷ್ಟು ಮರಗಳನ್ನು ಬೆಳೆಸುತ್ತಿದ್ದಾರೆ. ಬೆಳರಗಾರರು, ರೈತರು ಆಮ್ಲಜನಕ ಉತ್ಪಾದನೆ ಮಾಡುತ್ತಿದ್ದಾರೆ, ಸರಕಾರ ಅವರಿಗೆ ಪ್ರೋತ್ಸಾಹಧನ ನೀಡಬೇಕು. ಅದು ಬಿಟ್ಟು ಇಂತಹ ತಪ್ಪು ವರದಿ ಗಳನ್ನು ಸಲ್ಲಿಸುವದಲ್ಲ. ತಜ್ಞರು ನಮ್ಮೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಳ್ಳಲಿ. ಈ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಅಪ್ಪಚ್ಚು ರಂಜನ್, ಶಾಸಕರು
ಯಾವ ಆಧಾರದಲ್ಲಿ ಮಾಡಿದ್ದಾರೆ..?
ಸರಕಾರಕ್ಕೆ ಸಲ್ಲಿಸ ಲಾಗಿರುವ ವರದಿಯನ್ನು ಯಾವ ಆಧಾರದಲ್ಲಿ ಮಾಡಿದ್ದಾರೆ ಎಂಬದನ್ನು ಹೇಳಬೇಕಿದೆ. ನಮಗೆ ತಿಳಿದಿರುವ ಮಟ್ಟಿಗೆ ೧೦೦ವರ್ಷಕ್ಕೊಮ್ಮೆ ಪ್ರಕೃತಿಯಲ್ಲಿ ಬದಲಾವಣೆ ಗಳಾಗುತ್ತವೆ, ಇದೂ ಹಾಗೇ ಆಗಿರಬಹುದು. ವರದಿ ಪ್ರಕಾರ ನೋಡಿದರೆ ಜನತೆಗೆ ಅಭಿವೃದ್ಧಿ ಕಾರ್ಯಗಳೇ ಆಗುವದು ಬೇಡವೆಂಬAತಿದೆ. ಈ ವರದಿಯನ್ನು ತಿರಸ್ಕಾರ ಮಾಡಬೇಕಿದೆ.
ಸುನಿಲ್ ಸುಬ್ರಮಣಿ, ವಿಧಾನಪರಿಷತ್ತು ಸದಸ್ಯರು.
ಸಮೀಕ್ಷೆ ತಪ್ಪು
ತಜ್ಞರು ಮಾಡಿರುವ ವರದಿ ತಪ್ಪು. ಭೂಕುಸಿತಕ್ಕೆ ಕಾರಣ ದೂರದಿಂದ ಗೊತ್ತಾಗುವದಿಲ್ಲ. ಹೊರಗಿನಿಂದ ಬಂದವರಿಗೆ ಕೊಡಗಿನ ಬಗ್ಗೆ ಏನೂ ಗೊತ್ತಿರುವುದಿಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಮೀಕ್ಷೆ ಮಾಡಿದರೆ ಸರಿಯಾಗುವುದಿಲ್ಲ, ಸಮಿತಿ ಬಂದು ಹೋಗಿರುವುದು ನಮಗ್ಯಾರಿಗೂ ಗೊತ್ತಿಲ್ಲ. ಘಟನೆ ಸ್ಥಳಕ್ಕೆ ಬಂದು ತಿಳಿದವರನ್ನು ಸಂಪರ್ಕ ಮಾಡಿ ಚರ್ಚಿಸಿ ವರದಿ ಮಾಡಬೇಕು, ಕುಸಿತಕ್ಕೆ ಕಾರಣ ತಿಳಿದವರಿದ್ದಾರೆ, ಪ್ರಕೃತಿ ಪೂಜೆ ಮಾಡುವವರು ಯಾವತ್ತೂ ಪ್ರಕೃತಿಗೆ ವಿರುದ್ಧವಾಗಿ ಹೋಗುವದಿಲ್ಲ, ನಾವು ಪ್ರಕೃತಿಯನ್ನು ಉಳಿಸುವವರು. ಈ ವರದಿಯನ್ನು ವಿರೋಧಿಸು ತ್ತೇವೆ. ಸರಕಾರ ಇದನ್ನು ತಿರಸ್ಕರಿಸಬೇಕಿದೆ.
ವೀಣಾ ಅಚ್ಚಯ್ಯ, ವಿಧಾನಪರಿಷತ್ತು ಸದಸ್ಯರು.
(ಮೊದಲ ಪುಟದಿಂದ)
ವಿರೋಧವಿದೆ
ವರದಿಗೆ ವಿರೋಧವಿದೆ, ಸರಿಯಾದ ಕ್ರಮದಲ್ಲಿ ವರದಿ ತಯಾರಿಸಿಲ್ಲ. ಯಾರನ್ನೂ ಭೇಟಿ ಮಾಡಿ ಮಾಹಿತಿ ಪಡೆದಿಲ್ಲ, ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ಮಾಡಿಲ್ಲ. ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ಬಿ.ಎ. ಹರೀಶ್, ಅಧ್ಯಕ್ಷರು, ಜಿಲ್ಲಾ ಪಂಚಾಯತಿ.
ಮರುಪರಿಶೀಲನೆ ಮಾಡಬೇಕಿದೆ
ತಜ್ಞರು ವರದಿಯನ್ನು ನೇರವಾಗಿ ಸರಕಾರಕ್ಕೆ ನೀಡಿದ್ದಾರೆ. ಸರಕಾರ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ವರದಿ ಸರಿಯಾಗಿಲ್ಲವೆಂಬ ಕೂಗು ಕೇಳಿ ಬರುತ್ತಿದೆ, ಜನರ ವಿರುದ್ಧ ನಾವಿಲ್ಲ, ಜನರ ಪರವಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ವರದಿಯನ್ನು ಸರಕಾರ ಮರು ಪರಿಶೀಲನೆ ಮಾಡಬೇಕಿದೆ.
ರಾಬಿನ್ ದೇವಯ್ಯ, ಅಧ್ಯಕ್ಷರು, ಜಿಲ್ಲಾ ಬಿಜೆಪಿ
ಮೂಗಿನ ನೇರಕ್ಕೆ ವರದಿ
ಕೊಡಗಿನಲ್ಲಿ ಮಾನವ ಹಸ್ತಕ್ಷೇಪದಿಂದ ಭೂಕುಸಿತವುಂಟಾಗಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಹೋಂಸ್ಟೇ, ರೆಸಾರ್ಟ್ಗಳಿಂದ ಕುಸಿತವುಂಟಾಗುವAತಿದ್ದರೆ ಮೆಡಿಕಲ್ ಕಾಲೇಜು ನಿರ್ಮಾಣವಾಗಿರುವ ಬೆಟ್ಟದಲ್ಲೂ ಆಗಬೇಕಿತ್ತು, ಅಂತದ್ದೇನೂ ಆಗಿಲ್ಲ. ತಜ್ಞರು ತಮ್ಮ ಮೂಗಿನ ನೇರಕ್ಕೆ ವರದಿ ತಯಾರಿಸಿದ್ದಾರೆ. ಅದೂ ಅಲ್ಲದೆ ೨೦೧೮ರ ಬಳಿಕ ಎಲ್ಲಿಯೂ ಒಂದೇ ಕಡೆಯಲ್ಲಿ ಕುಸಿತ ಉಂಟಾಗಿಲ್ಲ, ಬೇರೆ ಬೇರೆ ಕಡೆ ಆಗಿದೆ. ಇದು ಪ್ರಕೃತಿ ನಿಯಮ, ಕೊಡಗಿನಲ್ಲೂ ಬಹಳ ಹಿಂದೆ ಜ್ವಾಲಾಮುಖಿ ಉಂಟಾಗಿರಲೂಬಹುದು, ಸಾಕ್ಷಿಯೆಂಬAತೆ ದೊಡ್ಡ ಬೆಟ್ಟದ ಮೇಲೆ ಸುಟ್ಟ ರೀತಿಯ ಕಲ್ಲುಗಳು ಗೋಚರಿಸುತ್ತವೆ.
ಬೆಟ್ಟದ ಮೇಲೆ ಹೆಚ್ಚು ಮಳೆಯಾದಾಗ ನೀರು ಮರ ಗಿಡಗಳಿಲ್ಲದ ಕಡೆ ಹರಿದು ಕುಸಿಯುವ ಸಾಧ್ಯತೆಯಿರುತ್ತದೆ. ಹಿಂದೆ ತಾಂತ್ರಿಕತೆ ಇಲ್ಲದ್ದರಿಂದ ಗೊತ್ತಾಗುತ್ತಿರಲಿಲ್ಲ. ಕೊಡಗು ಮುಳುಗಡೆಯಾಗಲಿದೆ ಎಂಬುದು ಸುಳ್ಳು, ಕೊಡಗು ಉತ್ತಮ ಮಳೆ, ಬೆಳೆಯೊಂದಿಗೆ ಹೀಗೆ ಇರಲಿದೆ. ತಜ್ಞರ ವರದಿಯನ್ನು ತಿರಸ್ಕಾರ ಮಾಡಬೇಕಿದೆ.
ಕೆ.ಎಂ. ಗಣೇಶ್, ಅಧ್ಯಕ್ಷರು, ಜಿಲ್ಲಾ ಜೆಡಿಎಸ್
ದಿಕ್ಕು ತಪ್ಪಿಸುವ ವರದಿ
ಭೂಕುಸಿತವೆಂಬುದು ಪ್ರಾಕೃತಿಕವಾಗಿ ನಡೆಯುವಂತದ್ದು. ಅದಕ್ಕೆ ಮಾನವನ ಹಸ್ತಕ್ಷೇಪವೇ ಕಾರಣ ಎಂಬುದು ಸರಿಯಲ್ಲ. ಭೂವಿಜ್ಞಾನದ ಬಗ್ಗೆ ಅರಿವಿಲ್ಲದವರು ತಯಾರಿಸಿರುವಂತಹ ವರದಿ ಇದಾಗಿದ್ದು, ಭೂವಿಜ್ಞಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವವರು ಭೂಕುಸಿತ ಸಂಬAಧ ವರದಿ ತಯಾರಿಸುವಂತಾಗ ಬೇಕು. ಪ್ರಸ್ತುತ ಸಲ್ಲಿಕೆಯಾಗಿರುವ ವರದಿ ದಿಕ್ಕು ತಪ್ಪಿಸುವ ವರದಿಯಾಗಿದೆ.
ಕೆ.ಕೆ. ಮಂಜುನಾಥ್ಕುಮಾರ್,
ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್