ವೀರಾಜಪೇಟೆ, ಏ. ೧೦: ಮರಳು ಸಂಗ್ರಹದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ವೀರಾಜಪೇಟೆ ಚಿಟ್ಟಡೆ ಗ್ರಾಮದಲ್ಲಿ ನಡೆದಿದೆ. ಚಿಟ್ಟಡೆ ಗ್ರಾಮದ ನಿವಾಸಿ ಸಾದಲಿ ಕೆ.ಹೆಚ್. ಬಂಧಿತ ಆರೋಪಿ.ಚಿಟ್ಟಡೆ ಗ್ರಾಮದ ಕಿರು ತೋಡುವಿನ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವುದಾಗಿ ನಗರ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಅನ್ವಯ ಪೊಲೀಸರು ವೀರಾಜಪೇಟೆ, ಏ. ೧೦: ಮರಳು ಸಂಗ್ರಹದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ವೀರಾಜಪೇಟೆ ಚಿಟ್ಟಡೆ ಗ್ರಾಮದಲ್ಲಿ ನಡೆದಿದೆ. ಚಿಟ್ಟಡೆ ಗ್ರಾಮದ ನಿವಾಸಿ ಸಾದಲಿ ಕೆ.ಹೆಚ್. ಬಂಧಿತ ಆರೋಪಿ.

ಚಿಟ್ಟಡೆ ಗ್ರಾಮದ ಕಿರು ತೋಡುವಿನ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವುದಾಗಿ ನಗರ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿ ಅನ್ವಯ ಪೊಲೀಸರು ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪವಿಭಾಗ ಡಿ.ವೈ.ಎಸ್ಪಿ. ಸಿ.ಟಿ. ಜಯಕುಮಾರ್ ನಿರ್ದೇಶನದಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಸಿಬ್ಬಂದಿಗಳಾದ ಗಿರೀಶ್, ಮುನೀರ್, ಮಧು ಮತ್ತು ಚಾಲಕ ಪೂವಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕೆ.ಕೆ.ಎಸ್.