ಗೋಣಿಕೊಪ್ಪಲು.ಏ.೧೦: ಅಮ್ಮ - ಮಗ ಆತ್ಮಹತ್ಯೆಗೆ ಯತ್ನಿಸಿ ಅಮ್ಮ ಸಾವನ್ನಪ್ಪಿರುವ ಪ್ರಕರಣ ಸಂಬAಧ ಮಗನ ಪತ್ನಿ ವಿರುದ್ಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಮೃತಪಟ್ಟ ಮಹಿಳೆ ಪ್ರಭಾವತಿ ಬರೆದಿಟ್ಟ ಡೆತ್ ನೋಟ್ ಆಧಾರದಡಿ ಪ್ರಕರಣ ದಾಖಲಾಗಿದೆ. ಮಗನ ಪತ್ನಿ ಬೆಂಗಳೂರಿನಲ್ಲಿ ವಾಸವಿರುವ ರೀನಾ ಹೆಬ್ಬಾರ್‌ಳಿಂದ ನನಗೆ ಅವಮಾನವಾಗುತ್ತಿದ್ದು, ಇದನ್ನು ಸಹಿಸಲಾರದೆ ಮಗ ಹಾಗೂ ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ತೆಗೆದುಕೊಂಡಿರುವುದಾಗಿ ಪತ್ರದಲ್ಲಿ ಪ್ರಭಾವತಿ ಬರೆದಿದ್ದಾರೆ. ಮಗ ಸುಭಾಷ್ ಚಂಗಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಗೋಣಿಕೊಪ್ಪಲು ಪೂಜಾರಿ ಆರ್ಕೇಡ್‌ನಲ್ಲಿರುವ ಲಾಡ್ಜ್ನಲ್ಲಿ ನಾಪೋಕ್ಲು ಸಮೀಪ ಪೇರೂರು ಗ್ರಾಮದ ಮಹಿಳೆ ಪ್ರಭಾವತಿ ಸಿ.ಎಸ್. ಹಾಗೂ ಅವರ ಮಗ ಸುಭಾಷ್ ಚಂಗಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದ ಪ್ರಭಾವತಿ ಮೃತಪಟ್ಟಿದ್ದರು. ಚಂಗಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. - ಹೆಚ್.ಕೆ. ಜಗದೀಶ್