ಪೊನ್ನಂಪೇಟೆ, ಏ. ೯: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಕ್ಯೂ.ಎಸ್.ಕ್ಯೂ.ಎ.ಎ.ಸಿ. ಬೆಂಗಳೂರು, ಕೊಡಗು ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಇವರುಗಳಿಗೆ ಒಂದು ದಿನದ ಶಾಲಾ ಸಿದ್ಧಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಗಿಡಕ್ಕೆ ನೀರು ಹಾಕುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಬೀಳಗಿ ಅವರು ಉದ್ಘಾಟಿಸಿದರು. ನಂತರ ಶಾಲಾ ಸಿದ್ಧಿ ಉದ್ದೇಶಗಳ ಬಗ್ಗೆ ತಿಳಿಸುತ್ತಾ, ಶಾಲಾ-ಕಾಲೇಜುಗಳ ಸಾಮರ್ಥ್ಯಗಳು ಮತ್ತು ಅಭಿವೃದ್ಧಿ ಯಾಗಬೇಕಾದ ಕ್ಷೇತ್ರಗಳನ್ನು ಗುರುತಿ ಸುವುದು, ಯೋಜಿತ ಮಾರ್ಗ ದರ್ಶನದ ಮೂಲಕ ಶಾಲೆ, ಕಾಲೇಜನ್ನು ಸಬಲೀಕರಣ ಗೊಳಿಸುವುದು, ಶಾಲೆ, ಕಾಲೇಜಿನ ಸುಧಾರಣೆಗಾಗಿ ವೃತ್ತಿಪರ ತೀರ್ಮಾನ ಗಳನ್ನು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಎಲ್ಲಾ ಭಾಗೀದಾರರು ಸಕ್ರಿಯವಾಗಿ ಪಾಲ್ಗೊಳ್ಳಲು ಸಹಭಾಗಿತ್ವ ಸಂಸ್ಕೃತಿಯನ್ನು ಸೃಷ್ಟಿಸುವುದು, ಶಾಲೆ, ಕಾಲೇಜು ತನ್ನ ಸುಧಾರಣೆಯ ಹಂತವನ್ನು ನಿರ್ದಿಷ್ಟಪಡಿಸಿಕೊಂಡು ಹಂತ ಹಂತವಾಗಿ ಪ್ರಗತಿಯನ್ನು ಸಾಧಿಸಲು ಮಾರ್ಗದರ್ಶನವನ್ನು ನೀಡುವುದು ಎಂಬ ವಿಷಯವನ್ನು ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿರವರು ಶಾಲಾ ಸಿದ್ಧಿ ಕಾರ್ಯಕ್ರಮದಡಿಯಲ್ಲಿ ಶಾಲೆ, ಕಾಲೇಜನ್ನು ಈ ಕೆಳಕಂಡ ೭ ಪ್ರಮುಖ ಕಾರ್ಯ ಕ್ಷೇತ್ರಗಳಲ್ಲಿ ಸ್ವ ಮತ್ತು ಬಾಹ್ಯ ಮೌಲ್ಯ ಮಾಪನಗಳಾದ ಶಾಲೆ, ಕಾಲೇಜು ಸಂಪನ್ಮೂಲಗಳನ್ನು ಅನುವುಗೊಳಿಸುವುದು, ಲಭ್ಯತೆ, ಸೂಕ್ಷö್ಮತೆ ಮತ್ತು ಉಪಯೋಗಾರ್ಹತೆ, ಬೋಧನೆ-ಕಲಿಕೆ ಮತ್ತು ಮೌಲ್ಯ ಮಾಪನ, ವಿದ್ಯಾರ್ಥಿಗಳ ಪ್ರಗತಿ ಸಾಧನೆ ಮತ್ತು ಬೆಳವಣಿಗೆ, ಶಿಕ್ಷಕರು, ಉಪನ್ಯಾಸಕರ ಕಾರ್ಯನಿರ್ವಹಣೆ ಮತ್ತು ವೃತ್ತಿಪರ ಬೆಳವಣಿಗೆಯ ನಿರ್ವಹಣೆ, ಶಾಲಾ ಕಾಲೇಜು ನಾಯಕತ್ವ ಮತ್ತು ನಿರ್ವಹಣೆ, ಒಳಗೊಳ್ಳುವಿಕೆ, ಆರೋಗ್ಯ ಮತ್ತು ಸಂರಕ್ಷಣೆ, ಕೊನೆಯದಾಗಿ ಸಮುದಾಯದ ಉತ್ಪಾದಕ ಸಹಭಾಗಿತ್ವದ ಕಾರ್ಯಕ್ಷೇತ್ರದ ಬಗ್ಗೆ ತಿಳಿಸಿದರು.

ಶಾಲಾ ಸಿದ್ಧಿಯ ವ್ಯಾಪ್ತಿ, ಸ್ವ-ಪ್ರಮುಖ ಕಾರ್ಯ ಕ್ಷೇತ್ರಗಳಲ್ಲಿ ಸ್ವ ಮತ್ತು ಬಾಹ್ಯ ಮೌಲ್ಯ ಮಾಪನಗಳಾದ ಶಾಲೆ, ಕಾಲೇಜು ಸಂಪನ್ಮೂಲಗಳನ್ನು ಅನುವುಗೊಳಿಸುವುದು, ಲಭ್ಯತೆ, ಸೂಕ್ಷö್ಮತೆ ಮತ್ತು ಉಪಯೋಗಾರ್ಹತೆ, ಬೋಧನೆ-ಕಲಿಕೆ ಮತ್ತು ಮೌಲ್ಯ ಮಾಪನ, ವಿದ್ಯಾರ್ಥಿಗಳ ಪ್ರಗತಿ ಸಾಧನೆ ಮತ್ತು ಬೆಳವಣಿಗೆ, ಶಿಕ್ಷಕರು, ಉಪನ್ಯಾಸಕರ ಕಾರ್ಯನಿರ್ವಹಣೆ ಮತ್ತು ವೃತ್ತಿಪರ ಬೆಳವಣಿಗೆಯ ನಿರ್ವಹಣೆ, ಶಾಲಾ ಕಾಲೇಜು ನಾಯಕತ್ವ ಮತ್ತು ನಿರ್ವಹಣೆ, ಒಳಗೊಳ್ಳುವಿಕೆ, ಆರೋಗ್ಯ ಮತ್ತು ಸಂರಕ್ಷಣೆ, ಕೊನೆಯದಾಗಿ ಸಮುದಾಯದ ಉತ್ಪಾದಕ ಸಹಭಾಗಿತ್ವದ ಕಾರ್ಯಕ್ಷೇತ್ರದ ಬಗ್ಗೆ ತಿಳಿಸಿದರು.

ಶಾಲಾ ಸಿದ್ಧಿಯ ವ್ಯಾಪ್ತಿ, ಸ್ವ-