ಸಿದ್ದಾಪುರ, ಏ. ೯: ಓ.ಡಿ.ಪಿ. ಸಂಸ್ಥೆ ಹಾಗೂ ಅಂದೇರಿ ಹಿಲ್ಪೆ ಜರ್ಮನಿ ಇವರ ಜಂಟಿ ಆಶ್ರಯದಲ್ಲಿ ರೈತ ಉತ್ಪನ್ನ ಕೂಟದ ಸದಸ್ಯರಿಗೆ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಮಾಲ್ದಾರೆಯಲ್ಲಿ ನಡೆಯಿತು.

ಮಾಲ್ದಾರೆ ಕ್ಲಸ್ಟರ್‌ನ ವತಿಯಿಂದ ಜಾಲಬಂಧ ಕಾರ್ಯಕ್ರಮ ಯೋಜನೆಯಡಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲ್ದಾರೆಯ ರೈತ ಉತ್ಪನ್ನ ಕೂಟದ ಅಧ್ಯಕ್ಷ ವಿಷ್ಣು ಬೆಳ್ಯಪ್ಪ ವಹಿಸಿದ್ದರು. ಪೊನ್ನಂಪೇಟೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ, ರೈತರಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ದರ್ಶನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಉಪ ಕಸುಬು ಆಗಿರುವ ಮೀನು ಸಾಕಾಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನು ಸಾಕಾಣಿಕೆಯಿಂದಾಗಿ ಅಧಿಕ ಲಾಭ ಲಭಿಸುತ್ತದೆ ಎಂದರು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಬಣ್ಣದ ಮೀನುಗಳನ್ನು ಪೆಟ್ಟಿಗೆಯಲ್ಲಿ ಇಟ್ಟು ಸಾಕುತ್ತಿದ್ದು ಬಣ್ಣದ ಮೀನುಗಳ ಮಾರಾಟ ಅಧಿಕವಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರು ಸ್ವಯಂ ಉದ್ಯೋಗ ಮಾಡುವ ಮೂಲಕ ಸ್ವಾವಲಂಭಿ ಬದುಕು ಕಂಡುಕೊಳ್ಳಬೇಕೆAದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ತಾಲೂಕು ಉಪ ನಿರ್ದೇಶಕ ಸಚಿನ್, ಓ.ಡಿ.ಪಿ. ಜಿಲ್ಲಾ ಸಂಯೋಜಕಿ ಜಾಯ್ಸ್ ಮಿನಜೆಸ್, ಓ.ಡಿ.ಪಿ. ಸಂಸ್ಥೆಯ ಕಾರ್ಯಕರ್ತರಾದ ಧನು ಕುಮಾರ್, ವಿಜಯ ನಾರಾಯಣ, ಸಿ.ಎಸ್. ಅಕ್ಷಯ್ ಇನ್ನಿತರರು ಹಾಜರಿದ್ದರು. ೫೦ಕ್ಕೂ ಅಧಿಕ ನೋಂದಾಯಿತ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.