ಮಡಿಕೇರಿ, ಏ. ೯: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೇತ್ರಿ ಸನಿಹ ತಾ. ೭ ರಂದು ಖಾಸಗಿ ಬಸ್ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಮತ್ತೊಬ್ಬರು ಇಂದು ದುರ್ಮರಣಗೊಂಡಿದ್ದಾರೆ.

ತಾ. ೭ ರಂದು ಬಿಳಿಗೇರಿಯ ಮುಕ್ಕಾಟಿ ಮೋಹನ್ ಅವರು ಚಾಲಿಸುತ್ತಿದ್ದ ಜೀಪ್ ಹಾಗೂ ಖಾಸಗಿ ಬಸ್ ನಡುವೆ ಅವಘಡ ಸಂಭವಿಸಿತ್ತು. ಈ ಸಂದರ್ಭ ಗಾಯಗೊಂಡಿದ್ದ ಮೋಹನ್ ಅವರ ತಾಯಿ ೭೦ ವರ್ಷ ಪ್ರಾಯದ ಲಕ್ಷಿö್ಮ ಅವರು ಮಡಿಕೇರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಗಂಭೀರ ಗಾಯಗೊಂಡಿದ್ದ ಮೋಹನ್ ಹಾಗೂ ಅವರ ಪತ್ನಿ ಧರಣಿ ಅವರುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರುಳಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಮೋಹನ್ ಅವರಿಗೆ ಶಸ್ತçಚಿಕಿತ್ಸೆಯನ್ನು ನಡೆಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.

(ಮೊದಲ ಪುಟದಿಂದ) ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾ. ೯ ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇವರ ಪತ್ನಿ ಧರಣಿ ಆಸ್ಪತ್ರೆಯಲ್ಲೇ ದಾಖಲಾಗಿದ್ದಾರೆ. ಮೊನ್ನೆ ಸಾವಿಗೀಡಾಗಿದ್ದ ಮೋಹನ್ ಅವರ ತಾಯಿ ಲಕ್ಷಿö್ಮ ಅವರ ಅಂತ್ಯಕ್ರಿಯೆ ನಿನ್ನೆಯಷ್ಟೆ ಬಿಳಿಗೇರಿಯಲ್ಲಿ ನಡೆದಿತ್ತು. ಇದೀಗ ಮರುದಿನವೇ ಪುತ್ರ ಮೋಹನ್ ಕೂಡ ದುರಂತವಾಗಿ ಸಾವಿಗೀಡಾಗಿದ್ದು, ಮೃತರ ಕುಟುಂಬವರ್ಗ, ಬಂಧುಮಿತ್ರರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.