ವೀರಾಜಪೇಟೆ, ಏ. ೯: ಸಾಲ ಬಾದೆಯಿಂದ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದ ನಿವಾಸಿ ನಿಂಗಪ್ಪ ಅವರ ಪುತ್ರ ಕೆ.ಎನ್. ಸಂದೇಶ್ ಕುಮಾರ್ (೪೫) ನೇಣಿಗೆ ಶರಣಾದ ವ್ಯಕ್ತಿ.
ಮೂಲತಃ ಮೈಸೂರಿನ ಕುವೆಂಪುನಗರದ ನಿವಾಸಿಯಾಗಿರುವ ಸಂದೇಶ ಎರಡು ಟಿ.ಟಿ. ವಾಹನಗಳನ್ನು ಹೊಂದಿದ್ದರು. ವಾಹನವನ್ನು ಖಾಸಾಗಿ ಕಂಪೆನಿಗೆ ಗುತ್ತಿಗೆ ಆದಾರದ ಮೇಲೆ ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ. ಕೊರೊನಾದ ನಡುವೆ ವಾಹನಗಳಿಂದ ಬರುವ ಬಾಡಿಗೆ ಬಾರದ ಹಿನ್ನೆಲೆ ಬ್ಯಾಂಕ್‌ನಿAದ ಪಡೆದ ಸಾಲ ಪಾವತಿಸಲಾಗದೆ
(ಮೊದಲ ಪುಟದಿಂದ) ವಾಹನಗಳನ್ನು ಮಾರಿ ಸಾಲ ಮುಗಿಸಿದ್ದರು. ಬ್ಯಾಂಕ್‌ಗಳಿAದ ಪಡೆದಿದ್ದ ಸಾಲ ಮರುಪಾವತಿ ಮಾಡಿದ್ದರು ತನ್ನ ಸ್ನೇಹಿತರಿಂದ ಕೈಸಾಲಗಳನ್ನು ಪಡೆದಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ತಾ. ೮ರಂದು ಕಣ್ಣಂಗಾಲದ ದೊಡ್ಡಪ್ಪನ ಮನೆಗೆ ಹೋಗಿ ಬರುವೆ ಎಂದು ಪತ್ನಿ ಬಳಿ ತಿಳಿಸಿ ಕಣ್ಣಂಗಾಲ ಗ್ರಾಮಕ್ಕೆ ಆಗಮಿಸಿ ನೇಣಿಗೆ ಶರಣಾಗಿದ್ದಾರೆ. ಸಂಜೆಯ ವೇಳೆ ದೂರವಾಣಿಗೆ ಕರೆ ಮಾಡಿದರು ಸ್ವೀಕರಿಸದ ಹಿನ್ನೆಲೆ ಮೃತನ ದೊಡ್ಡಪ್ಪನ ಮಗ ರಘು ಮತ್ತು ಅಳಿಯ ಮಧನ್ ಸ್ಥಳಕ್ಕೆ ಬಂದು ನೋಡಿದಾಗ ಸಂದೇಶ್ ಕುಮಾರ್ ಮರÀಕ್ಕೆ ನೈಲನ್ ಹಗ್ಗ ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತರ ಪತ್ನಿ ಮೀನಾಕ್ಷಿ ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೆ.ಕೆ.ಎಸ್.