ಮಡಿಕೇರಿ, ಏ. ೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಗೌಡ ಕ್ರಿಕೆಟ್ ಕಪ್ ಕುಟುಂಬ-೨೦೨೧ ಪಂದ್ಯಾವಳಿಗೆ ಟೈಸ್ ಹಾಕುವ ಮೂಲಕ ಚಾಲನೆ ದೊರೆತಿದೆ.

ಗೌಡ ಸಮಾಜದಲ್ಲಿರುವ ವೇದಿಕೆಯ ಕಚೇರಿ ಸಭಾಂಗಣದಲ್ಲಿ ಟೈಸ್ ಪ್ರಕ್ರಿಯೆ ನಡೆಯಿತು. ಪಂದ್ಯಾವಳಿಯಲ್ಲಿ ೯೬ ಕುಟುಂಬ ತಂಡಗಳು ಭಾಗವಹಿಸುತ್ತಿದ್ದು, ತಂಡಗಳ ನಾಯಕರುಗಳು, ವ್ಯವಸ್ಥಾಪರುಗಳ ಸಮಕ್ಷಮ ಟೈಸ್ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಹಿರಿಯ ಸಲಹೆಗಾರ ಯಾಲದಾಳು ಹರೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷö್ಮಣ, ನಿರ್ದೇಶಕರುಗಳು ಹಾಜರಿದ್ದರು.