ಸರಳ ಆಚರಣೆಗೆ ನಿರ್ಧಾರ

ಮಡಿಕೇರಿ, ಏ. ೯: ಮದೆ ಗ್ರಾಮದ ದೇವರಕೊಲ್ಲಿಯ ಚಾಮುಂಡೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಅಷ್ಟಬಂದ ಬ್ರಹ್ಮಕಲಶೋತ್ಸವ ತಾ. ೨೨ ರಿಂದ ತಾ. ೨೫ ರವರೆಗೆ ನಡೆಯಲಿದೆ. ಕೋವಿಡ್-೧೯ ಹಿನ್ನೆಲೆ ವಿಜೃಂಭಣೆಯಿAದ ನಡೆಸಲು ತೀರ್ಮಾನಿಸಲಾಗಿದ್ದ ಕಾರ್ಯಕ್ರಮವನ್ನು, ಸರಳವಾಗಿ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಭಾ ಕಾರ್ಯಕ್ರಮಗಳನ್ನು ಹೊರತು ಪಡಿಸಿ, ಭಜನೆ, ಅನ್ನಸಂತರ್ಪಣೆ ಹಾಗೂ ವೈದಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ. ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿ ವಿನಂತಿಸಲಾಗಿದೆ.