ಏಳು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೈನಿಕರು
ಶ್ರೀನಗರ, ಏ. ೯: ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ದೊಡ್ಡ ಯಶಸ್ಸು ಸಾಧಿಸಿದ್ದು ಅನ್ಸಾರ್ ಘಜ್ವಾತ್-ಉಲ್ ಹಿಂದ್ (ಎಜಿಹೆಚ್) ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹೊಡೆದುರುಳಿಸಿದೆ. ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಭಾರತೀಯ ಸೇನೆ ಪ್ರತ್ಯೇಕ ಎನ್‌ಕೌಂಟರ್ ನಡೆಸಿದ್ದು ಶೋಪಿಯಾನ್‌ನಲ್ಲಿ ಐವರು ಹಾಗೂ ಪುಲ್ವಾಮಾದಲ್ಲಿ ಇಬ್ಬರನ್ನು ಹೊಡೆದುರುಳಿಸಿದೆ. ಎನ್‌ಕೌಂಟರ್‌ನಲ್ಲಿ ಎಜಿಹೆಚ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಶಾ ಸೇರಿದಂತೆ ಏಳು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಲ್ಭಾಗ್ ಸಿಂಗ್ ಹೇಳಿದ್ದಾರೆ. ಮೊದಲ ಎನ್‌ಕೌಂಟರ್‌ನಲ್ಲಿ ಐವರು ಭಯೋತ್ಪಾದಕರು ಮತ್ತು ಎರಡನೇ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ ೭ ಎಕೆ ಮತ್ತು ೨ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಎಲಿಜಬೆತ್ ಪತಿ ವಿಧಿವಶ
ಲಂಡನ್, ಏ. ೯: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಇಂದು ವಿಧಿವಶರಾಗಿದ್ದಾರೆ. ೯೯ ವರ್ಷದ ಪ್ರಿನ್ಸ್ ಫಿಲಿಪ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ದ ಡ್ಯೂಕ್ ಆಫ್ ಎಡಿನ್ ಬರ್ಗ್, ಪ್ರಿನ್ಸ್ ಫಿಲಿಪ್ ಅವರು ವಿಂಡರ್ಸ್ ಕ್ಯಾಸಲ್‌ನಲ್ಲಿ ವಿಧಿವಶರಾಗಿದ್ದಾರೆ ಎಂದು ಪ್ರಕಟಿಸಿದೆ. ೨೦೨೧ರ ಫೆಬ್ರವರಿ ೧೬ ರಂದು ಪ್ರಿನ್ಸ್ ಫಿಲಿಪ್ ಅವರು ಸೋಂಕು ಮತ್ತು ಹೃದಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಫಿಲಿಪ್ ಡಿಸ್‌ಚಾರ್ಜ್ ಆಗಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಿ ಎಲಿಜಬೆತ್ ಮತ್ತು ಫಿಲಿಪ್ ದಂಪತಿ ೭೩ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಅನುಮತಿ ಇಲ್ಲದೆ ಸಂಚಾರ ನಡೆಸಿದ ಅಮೇರಿಕಾ ನೌಕಾಪಡೆ
ನವದೆಹಲಿ, ಏ. ೯: ಅಮೇರಿಕಾ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ(ಇಇಝೆಡ್)ದ ಒಳಗೆ ನ್ಯಾವಿಗೇಷನ್ ಆಪರೇಷನ್ (ಸ್ವತಂತ್ರ ಕಾರ್ಯಾಚರಣೆ) ನಡೆಸುವ ಮೂಲಕ ಜಾಗತಿಕ ಕಾನೂನು ಉಲ್ಲಂಘಿಸಿದೆ. ತಾ. ೭ ರಂದು ಯುಎಸ್‌ಎಸ್ ಜಾನ್ ಪಾಲ್ ಜೋನ್ಸ್ ನೌಕೆಯು ಅಂರ‍್ರಾಷ್ಟಿçÃಯ ಕಾನೂನಿನಂತೆ ಭಾರತದ ಪೂರ್ವ ಸಮ್ಮತಿಗೆ ಕೋರದೆಯೇ ಭಾರತದ ಇಇಝೆಡ್ ಒಳಗಿನ ಲಕ್ಷದ್ವೀಪದ ಪಶ್ಚಿಮದ ೧೩೦ ಮೈಲು ದೂರದಲ್ಲಿ ಸ್ವತಂತ್ರ ಕಾರ್ಯಾಚರಣೆ ನಡೆಸಿದೆ ಎಂದು ಅಮೆರಿಕದ ೭ ಫ್ಲೀಟ್ ಪಬ್ಲಿಕ್ ಅಫೇರ್ಸ್ ಅಧಿಕೃತವಾಗಿ ಒಪ್ಪಿಕೊಂಡಿದೆ. ಭಾರತ ಕಡಲ ಭದ್ರತಾ ನೀತಿಯನ್ನು ಅಮೇರಿಕಾದ ನೌಕಾಪಡೆಯ ೭ನೇ ಫ್ಲೀಟ್ ಉಲ್ಲಂಘಿಸಿದ್ದು, ಸ್ವತಂತ್ರ ಸಂಚಾರ ಕಾರ್ಯಾಚರಣೆಯ ಅನುಮತಿಯನ್ನೂ ಪಡೆಯದಿರುವುದು ವಿವಾದ ಸೃಷ್ಟಿಸಿದೆ. ತನ್ನ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಅಮೇರಿಕಾ ನೌಕಾಪಡೆ, ಅಂರ‍್ರಾಷ್ಟಿçÃಯ ಕಾನೂನಿಗೆ ಅನುಗುಣವಾಗಿಯೇ ಜಾನ್ ಪಾಲ್ ಜೋನ್ಸ್ ಲಕ್ಷದ್ವೀಪದಲ್ಲಿ ಸಂಚರಿಸಿದೆ. ಭಾರತದ ಜಲಗಡಿಯಲ್ಲಿ ಮಿಲಿಟರಿ ವ್ಯಾಯಾಮಗಳಿಗೆ ಮಾತ್ರ ಪೂರ್ವಾನುಮತಿಯ ಅವಶ್ಯಕತೆ ಇದೆ. ಸ್ವತಂತ್ರ ಸಂಚಾರ ಕಾರ್ಯಾಚರಣೆಗಳು ಅಂರ‍್ರಾಷ್ಟಿçÃಯ ಕಾನೂನಿನಡಿ ಬರುತ್ತವೆ ಎಂದು ಅಮೇರಿಕಾ ನೌಕಾಪಡೆ ಸ್ಪಷ್ಟಪಡಿಸಿದೆ.
ರೈಲ್ವೆ ಸೇವೆ ಸ್ಥಗಿತಗೊಳಿಸುವುದಿಲ್ಲ : ರೈಲ್ವೆ ಮಂಡಳಿ ಸ್ಪಷ್ಟನೆ
ನವದೆಹಲಿ, ಏ. ೯: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಮೊಟಕುಗೊಳಿಸುವ ಅಥವಾ ಸ್ಥಗಿತಗೊಳಿಸುವ ಯಾವುದೇ ಯೋಚನೆ ಇಲ್ಲ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. ಕೊರೊನಾ ಹೆಚ್ಚಳದಿಂದ ಆತಂಕಗೊAಡ ವಲಸೆ ಕಾರ್ಮಿಕರು ತಮ್ಮ ಊರಿಗೆ ಧಾವಿಸುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಬೇಡಿಕೆಯಂತೆ ರೈಲುಗಳನ್ನು ಒದಗಿಸಲಾಗುವುದು ಎಂದು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಭರವಸೆ ನೀಡಿದೆ. ಪ್ರಯಾಣಿಕರಿಗೆ ರೈಲುಗಳ ಯಾವುದೇ ಕೊರತೆ ಇಲ್ಲ ಎಂದು ಭರವಸೆ ನೀಡಿದ ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಅವರು, ಹೆಚ್ಚಿನ ರೈಲು ಓಡಿಸಲು ಸಣ್ಣ ಮನವಿ ಬಂದರೂ ರೈಲ್ವೆ ಅವರ ಸೇವೆಗೆ ಸಿದ್ಧವಾಗಿದೆ ಎಂದಿದ್ದಾರೆ.
ಕೋವಿಡ್ ಲಸಿಕೆ ಬದಲು ರೇಬೀಸ್ ಲಸಿಕೆ ನೀಡಿದ ಆರೋಪ- ತನಿಖೆಗೆ ಆಗ್ರಹ
ಮುಜಫರ್‌ನಗರ, ಏ. ೯: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರಿಗೆ ಕೋವಿಡ್-೧೯ ಲಸಿಕೆ ಬದಲಿಗೆ ಆಂಟಿ ರೇಬೀಸ್ ಲಸಿಕೆ ನೀಡಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿದೆ. ಕೊರೊನಾ ವೈರಸ್ ಲಸಿಕೆ ಪಡೆಯಲು ಸರೋಜ್ (೭೦), ಅನಾರ್ಕಲಿ (೭೨) ಮತ್ತು ಸತ್ಯವತಿ (೬೦) ಎಂಬ ಮಹಿಳೆಯರು ಗುರುವಾರ ಕಾಂಧ್ಲಾದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಡೋಸೇಜ್ ನೀಡಿದ ನಂತರ, ಮಹಿಳೆಯರಿಗೆ ರೇಬೀಸ್ ವಿರೋಧಿ ಲಸಿಕೆ ಸ್ಲಿಪ್‌ಗಳನ್ನು ನೀಡಲಾಗಿದೆ. ಇದನ್ನು ಗಮನಿಸಿದ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಇನ್ನು ತಪ್ಪೇಸಗಿದ ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಆರೋಗ್ಯ ಕೇಂದ್ರದ ಉಸ್ತುವಾರಿ ಬಿಜೇಂದ್ರ ಸಿಂಗ್ ಅವರು ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿAದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕ್ ಸರಕಾರದಿಂದ ಅನುದಾನ
ಪೇಶಾವರ, ಏ. ೯: ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲವು ಸ್ಥಳೀಯ ಮೌಲ್ವಿಗಳು ಮತ್ತು ಇಸ್ಲಾಮಿಸ್ಟ್ ಪಕ್ಷದ ಜಮಿಯತ್ ಉಲೆಮಾ-ಇ-ಇಸ್ಲಾಂ ಸದಸ್ಯರ ನೇತೃತ್ವದ ಗುಂಪಿನಿAದ ಹಾನಿಗೊಳಗಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕಿಸ್ತಾನದ ಖೈಬರ್ ಪಕ್ತುನ್ಖಾ÷್ವ ಪ್ರಾಂತೀಯ ಸರ್ಕಾರ ರೂ. ೩.೪೮ ಕೋಟಿ ಬಿಡುಗಡೆ ಮಾಡಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಕಳೆದ ವರ್ಷ ಡಿಸೆಂಬರ್ ೩೦ ರಂದು ನಾಶಮಾಡಲಾಗಿದ್ದ ಶ್ರೀ ಪರಮಹನ್ಸ್ ಜೀ ಮಹಾರಾಜ್ ಅವರ ಸಮಾಧಿಯ ಪುನರ್ ನಿರ್ಮಾಣಕ್ಕಾಗಿ ಪ್ರಾಂತೀಯ ಸರ್ಕಾರವು ಅಕಾಫ್ ಇಲಾಖೆಗೆ ರೂ. ೩,೪೮,೨೯,೦೦೦ ಬಿಡುಗಡೆ ಮಾಡಿದೆ. ಒಂದು ಶತಮಾನದಷ್ಟು ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ ಸಮಾಧಿ ಮೇಲೆ ನಡೆದ ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ದೇವಾಲಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ನೌಕರರು ಯಾರ ಮಾತಿಗೂ ಕಿವಿಗೊಡದೆ ಸರ್ಕಾರದ ಕ್ರಮಗಳನ್ನು ಗಮನಿಸಬೇಕು
ಬೆಂಗಳೂರು, ಏ. ೯: ಸಾರಿಗೆ ನೌಕರರು ಯಾರ ಮಾತಿಗೂ ಕಿವಿಗೊಡದೆ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಗಮನಿಸಬೇಕು. ಸರ್ಕಾರವು ನೌಕರರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಕೂಡ ಗಮನಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರ ಸಾರಿಗೆ ನೌಕರರ ೯ ಬೇಡಿಕೆಗಳಲ್ಲಿ ೮ ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದೆ. ಇನ್ನೂ ಒಂದು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರ ಈ ರೀತಿ ನೌಕರರಿಗೆ ಸ್ಪಂದಿಸಿರುವುದನ್ನು ಗಮನಿಸಿ ಮುಷ್ಕರ ಕೈ ಬಿಡಬೇಕು ಎಂದು ಮನವಿ ಮಾಡಿದರು. ಸಾರಿಗೆ ಸಂಸ್ಥೆಯ ನೌಕರರು ಶ್ರಮಜೀವಿಗಳಾಗಿದ್ದು, ಸಾರ್ವಜನಿಕ ಸೇವೆಗಾಗಿ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲಕಾಲಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟವಾದಾಗಲೂ ನೌಕರರ ಬದುಕು, ಅವರ ಕುಟುಂಬದ ಹಿತಕ್ಕಾಗಿ ಒಟ್ಟು ರೂ. ೧,೯೫೩.೪೫ ಕೋಟಿ ವೇತನವನ್ನು ಪಾವತಿಸಲಾಗಿದೆ. ವೇತನ ಬಾಕಿ ಇಟ್ಟುಕೊಂಡು ನೌಕರರು ಸಂಕಷ್ಟಕ್ಕೆ ಸಿಲುಕಿ ಸುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಸರ್ಕಾರದ ಈ ನೌಕರ ಹಿತ ಕ್ರಮವನ್ನು ಪರಿಗಣಿಸಿ ನೌಕರರು ಮುಷ್ಕರ ಬಿಟ್ಟು, ನಾಗರಿಕ ಸ್ನೇಹಿ ಆಡಳಿತಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.