ಮಡಿಕೇರಿ, ಏ. ೮: ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಸ್. ಅಶೋಕ್ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ ಘಟನೆ ನಡೆದಿದೆ.
ತಾ. ೭ರ ಸಂಜೆ ತನ್ನ ಕುಟುಂಬ ಸದಸ್ಯರೊಬ್ಬರ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಗ್ರಾಮಾಂತರ ಠಾಣೆಗೆ ತೆರಳಿದಾಗ ಅಲ್ಲಿಗೆ ಆಗಮಿಸಿದ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ದೇವರು ತನಗೆ ಅನಾವಶ್ಯಕ ಅವಾಚ್ಯ ಶಬ್ದ ಬಳಸಿ ತನ್ನ ಮೇಲೆ ತೀವ್ರ ರೀತಿಯ ಹಲ್ಲ್ಲೆ ನಡೆಸಿ, ಇದರಿಂದ ತಾನು ಅಸ್ವಸ್ಥಗೊಂಡು ಚಿಕಿತ್ಸೆಗೆ ಆಸ್ಪತ್ರೆ ಸೇರುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಲು ದೂರಿನಲ್ಲಿ ಅಶೋಕ್ ಮನವಿ ಮಾಡಿದ್ದಾರೆ.