ಕೂಡಿಗೆ, ಏ. ೮: ತೊರೆನೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಬಸವೇಶ್ವರ ಸ್ವಾಮಿ ಶಿಲಾಮೂರ್ತಿ ಪ್ರತಿಷ್ಟಾಪನೆಯ ೪೯ನೇ ದಿನದ ಪೂಜಾ ಕಾರ್ಯಕ್ರಮ, ಯುಗಾದಿ ಹಬ್ಬದ ಹೊನ್ನಾರು ಉತ್ಸವ, ಬಸವಣ್ಣ ದೇವರ ವಾನ್ಯ ಕಾರ್ಯಕ್ರಮ ತಾ.೧೦ರಿಂದ ೧೪ರ ವರೆಗೆ ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ತಿಳಿಸಿದ್ದಾರೆ.
ತಾ.೧೦ ರಂದು ವಿದ್ವಾನ್ ವೇದಮೂರ್ತಿ ಶ್ರೀ ಬಸವಕುಮಾರ ಶಾಸ್ತಿç್ತ್ರ ವೇದ, ಮತ್ತು ಪ್ರಮೀಣ ವಿದ್ವತ್ ಇವರಿಂದ ರುದ್ರಾಭಿಷೇಕ, ರುದ್ರಹೋಮ, ಪೂರ್ಣಾಹುತಿ ಪೂಜೆ ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.