ವೀರಾಜಪೇಟೆ, ಏ. ೮: ಕೆದಮಳ್ಳೂರು ಗ್ರಾಮದ ಶ್ರೀ ಚಾಮುಂಡಿ ದೇವಿಯ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.
ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಚಾಮುಂಡಿ ದೇವಿಯ ವಾರ್ಷಿಕ ಮಹೋತ್ಸವ ತಾ. ೨ ರಿಂದ ಆರಂಭವಾಗಿ ತಾ. ೪ ರ ರಾತ್ರಿ ವೇಳೆಗೆ ಬನದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇವತಾ ಕಾರ್ಯಗಳು ಸಂಪನ್ನಗೊAಡಿತು. ಮೂರು ದಿನಗಳ ಕಾಲ ನಡೆದ ಉತ್ಸವದಲ್ಲಿ ಚೌಂಡಿ, ಅಜ್ಜಪ್ಪ ಮತ್ತು ವಿವಿಧ ತೆರೆಗಳು ಆಲಯದಲ್ಲಿ ದೈವದರ್ಶನ ನೀಡಲಾಯಿತು. ಮಾಳೇಟಿರ ಕುಟುಂಬದ ಮಣ್ಣಿನಲ್ಲಿ ನೆಲೆಕಂಡ ಚಾಮುಂಡಿ ದೇವಿಯು ದೈವಿಕ ಶಕ್ತಿಯಿಂದ ಬೇಡಿದ ವರವನ್ನು ಕರುಣಿಸುವ ದೇವಿಯಾಗಿ ಗ್ರಾಮಸ್ಥರ ಮನದಲ್ಲಿ ನೆಲೆಯೂರಿತು. ರುದ್ರನರ್ತನ ದೊಂದಿಗೆ ಅಗ್ನಿಕುಂಡದಲ್ಲಿ ಮೇಲೇರಿ ಬೀಳುವುದು ನೋಡಲೆಂದೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎಂದು ದೇವಾಲಯದ ದೇವ ತಕ್ಕಮುಖ್ಯಸ್ಥ ಮಾಳೇಟಿರ ಗಣೇಶ್ ಕಾರ್ಯಪ್ಪ ಅವರು ಪತ್ರಿಕೆಯೊಂದಿಗೆ ಉತ್ಸವದ ಬಗ್ಗೆ ವಿವರ ನೀಡಿದರು.
ಉತ್ಸವದಲ್ಲಿ ಗ್ರಾಮಸ್ಥರು ಅಲ್ಲದೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಆಗಮಿಸಿದ ಭಕ್ತರಿಗೆ ಆಡಳಿತ ಮಂಡಳಿಯ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. - ಕೆ.ಕೆ.ಎಸ್