ಕುಶಾಲನಗರ, ಏ. ೮: ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬAದಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ ೨೮೫೯ ಅಡಿಗಳಾಗಿದ್ದು, ಇದೀಗ ೨೮೨೧ ಅಡಿಗೆ ಇಳಿದಿದೆ. ಜಲಾಶಯದಲ್ಲಿ ಪ್ರಸಕ್ತ ೨.೧೩ ಟಿ.ಎಂ.ಸಿ. ಪ್ರಮಾಣದ ನೀರಿನ ಸಂಗ್ರಹ ಕಾಣಬಹುದು. ಕಾಲುವೆ ಮೂಲಕ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಬೇಸಿಗೆ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಅಣೆಕಟ್ಟಿನಲ್ಲಿ ಕಳೆದ ಬಾರಿಗಿಂತ ೧೦ ಅಡಿಗಳಷ್ಟು ನೀರು ಕಡಿಮೆ ಇರುವುದಾಗಿ ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಬಾರಿ ಜಲಾಶಯದಲ್ಲಿ ಇದೇ ಅವಧಿಯಲ್ಲಿ ೨.೫೭ ಟಿಎಂಸಿ ಪ್ರಮಾಣದ. ನೀರಿನ ಸಂಗ್ರಹ ಇತ್ತು ಎಂದು ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಜಲಾಶಯಕ್ಕೆ ಒಟ್ಟು ೨೬.೭೧ ಟಿಎಂಸಿ ಪ್ರಮಾಣದ ನೀರು ಹರಿದುಬಂದಿದ್ದು, ೧೫.೪೫ ಟಿಎಂಸಿ ಪ್ರಮಾಣದ ನೀರು ನದಿಗೆ ಹರಿದಿದೆ. ಕಾಲುವೆ ಮೂಲಕ ೧೧.೦೬ ಟಿಎಂಸಿ ನೀರು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
- ಚಂದ್ರಮೋಹನ್