*ಗೋಣಿಕೊಪ್ಪಲು, ಏ. ೮: ಛತ್ತೀಸ್‌ಘಡದಲ್ಲಿ ನಡೆದ ಭೀಕರ ನಕ್ಸಲ್ ದಾಳಿಗೆ ಬಲಿಯಾಗಿ ವೀರಮರಣ ಹೊಂದಿದ ಭಾರತದ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವೀರಾಜಪೇಟೆ ಮಂಡಲ ಬಿ.ಜೆ.ಪಿ. ಯುವ ಮೋರ್ಚಾ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಹಾತೂರು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಭಾಂಗಣದಲ್ಲಿ ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ೧ ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.
ದೇಶದ ರಕ್ಷಣೆಗೆ ಸೈನಿಕರ ಕೊಡುಗೆ ಅಪಾರ. ನಾವು ಇಂದು ನಮ್ಮ ಸಂಸಾರದೊAದಿಗೆ ನೆಮ್ಮದಿಯ ಜೀವನ ನಡೆಸಲು ಸೈನಿಕರ ದೇಶ ರಕ್ಷಣೆಯ ಸೇವೆಯೇ ಕಾರಣ. ಸೈನಿಕರ ಬದುಕಿನ ಬಗ್ಗೆ ಯುವ ಸಮುದಾಯದಲ್ಲಿ ಪೋಷಕರು ಪ್ರೇರಣೆ ತುಂಬಬೇಕು ಎಂದು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಕರೆ ನೀಡಿದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ವಿವೇಕ್ ರಾಯ್ಕರ್, ಹಾತೂರು ಪಂಚಾಯಿತಿ ಸದಸ್ಯ ಮುತ್ತುರಾಜ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಚಂಗಪ್ಪ, ಉಪಾಧ್ಯಕ್ಷ ಗುಮ್ಮಟ್ಟಿರ ಚಂಗಪ್ಪ, ಜಿಲ್ಲಾ ಯುವ ಮೋರ್ಚಾ ಸದಸ್ಯರಾದ ಜಮ್ಮಡ ಗೌತಮ್, ಗೋಣಿಕೊಪ್ಪ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್, ಶಕ್ತಿ ಕೇಂದ್ರ ಪ್ರಮುಖರಾದ ಜಮ್ಮಡ ಲವ ಭೀಮಯ್ಯ, ಮುರುವಂಡ ಕುಟ್ಟಪ್ಪ, ಕೊಳತೋಡು-ಬೈಗೋಡು ಗ್ರಾಮದ ಬೂತ್ ಅಧ್ಯಕ್ಷ ಪುಲಿಯಂಡ ಸುರೇಶ್, ಹಾತೂರು ಬೂತ್ ಅಧ್ಯಕ್ಷ ಕೇಳಪಂಡ ಸುಜಾ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.