ಪೊನ್ನಂಪೇಟೆ. ಏ. ೬: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಕೊಡಗು ಒಕ್ಕಲಿಗರ ಕ್ರೀಡಾಕೂಟ ಸಮಾರೋಪಗೊಂಡಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೋಟೆಕೊಪ್ಪ ಎ ತಂಡ ಕೋತೂರು ಡ್ರೀಮ್ ಇಲವೆನ್ ತಂಡದ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ವಿನ್ನರ್ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿತು.
ಗೆಲುವಿಗಾಗಿ ಉತ್ತಮ ಹೋರಾಟ ನೀಡಿದ ಕೋತೂರು ಡ್ರೀಮ್ ಇಲವೆನ್ ಕೊನೆಯ ಹಂತದಲ್ಲಿ ಎಡವಿದ ಪರಿಣಾಮ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿ.ವೈ.ಸಿ. ಕೈಕೇರಿ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಉತ್ತಮ ಆಟದ ಮೂಲಕ ಜನರ ಮೆಚ್ಚುಗೆ ಪಡೆದ ಬಾಳೆಲೆ ಕಾರ್ಮಾಡ್ ತಂಡ ಉತ್ತಮ ತಂಡ ಪ್ರಶಸ್ತಿ ಪಡೆದುಕೊಂಡಿತು. ಪಂದ್ಯ ಪುರುಷೋತ್ತಮನಾಗಿ ಭರತ್, ಸರಣಿ ಶ್ರೇಷ್ಠ ಜೀವನ್, ಉತ್ತಮ ಬ್ಯಾಟ್ಸ್ಮ್ಯಾನ್ ಆಗಿ ಸ್ವರೂಪ್, ಉತ್ತಮ ಬೌಲರ್ ಆಗಿ ಚೇತನ್, ಉತ್ತಮ ಕ್ಯಾಚರ್ ದಿಲನ್, ಉದ ಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಪೃಥ್ವಿ ಪಡೆದುಕೊಂಡರು.
ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಹಾತೂರು ತಂಡ ಪ್ರಥಮ, ಕಣ್ಣಂಗಾಲ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿತು. ಪುರುಷರ ಹಗ್ಗ ಜಗ್ಗಾಟದಲ್ಲಿ ಒಂಟಿಯAಗಡಿ ಲಯನ್ಸ್ ತಂಡ (ಪ್ರ), ಕೈಕೇರಿ ತಂಡ (ದ್ವಿ) ಸ್ಥಾನ ಪಡೆದುಕೊಂಡಿತು.
೪೦ ರಿಂದ ೫೪ ವರ್ಷದೊಳಗಿನ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ವಿ.ವಿ. ಪ್ರಕಾಶ್ (ಪ್ರ), ವಿ.ಎಸ್. ಪ್ರಕಾಶ್ (ದ್ವಿ), ೫೫ ವರ್ಷಕ್ಕೆ ಮೇಲ್ಪಟ್ಟವರ ವಿಭಾಗದಲ್ಲಿ ವಿ.ಎಂ. ಸುರೇಶ್ (ಪ್ರ), ರಮೇಶ್ (ದ್ವಿ) ಸ್ಥಾನ ಪಡೆದುಕೊಂಡರು.
ಮಹಿಳೆಯರಿಗಾಗಿ ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಶರಣ್ಯ ಧನು (ಪ್ರ), ಕೆ.ಎಸ್. ಸ್ಮಿತಾ (ದ್ವಿ), ಕಲ್ಪಿತ ಹಾಗೂ ನೀತಿ ಜಗದೀಶ್ (ತೃ) ಸ್ಥಾನ ಪಡೆದುಕೊಂಡರು.
ಸೂಪರ್ ಮಿನಿಟ್ ಸ್ಪರ್ಧೆ ೬ ರಿಂದ ೧೦ ವರ್ಷ ವಿಭಾಗದಲ್ಲಿ ಕೃತಿಕ (ಪ್ರ), ನೂತನ್ (ದ್ವಿ), ೧೧ ರಿಂದ ೧೬ ವರ್ಷ ವಿಭಾಗದಲ್ಲಿ ಸಮೀಕ್ಷಾ (ಪ್ರ), ವಿಸ್ಮಯ್ (ದ್ವಿ) ಸ್ಥಾನ ಸ್ಥಾನ ಪಡೆದುಕೊಂಡಿತು.
೪೦ ರಿಂದ ೫೪ ವರ್ಷದೊಳಗಿನ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ವಿ.ವಿ. ಪ್ರಕಾಶ್ (ಪ್ರ), ವಿ.ಎಸ್. ಪ್ರಕಾಶ್ (ದ್ವಿ), ೫೫ ವರ್ಷಕ್ಕೆ ಮೇಲ್ಪಟ್ಟವರ ವಿಭಾಗದಲ್ಲಿ ವಿ.ಎಂ. ಸುರೇಶ್ (ಪ್ರ), ರಮೇಶ್ (ದ್ವಿ) ಸ್ಥಾನ ಪಡೆದುಕೊಂಡರು.
ಮಹಿಳೆಯರಿಗಾಗಿ ನಡೆದ ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಶರಣ್ಯ ಧನು (ಪ್ರ), ಕೆ.ಎಸ್. ಸ್ಮಿತಾ (ದ್ವಿ), ಕಲ್ಪಿತ ಹಾಗೂ ನೀತಿ ಜಗದೀಶ್ (ತೃ) ಸ್ಥಾನ ಪಡೆದುಕೊಂಡರು.
ಸೂಪರ್ ಮಿನಿಟ್ ಸ್ಪರ್ಧೆ ೬ ರಿಂದ ೧೦ ವರ್ಷ ವಿಭಾಗದಲ್ಲಿ ಕೃತಿಕ (ಪ್ರ), ನೂತನ್ (ದ್ವಿ), ೧೧ ರಿಂದ ೧೬ ವರ್ಷ ವಿಭಾಗದಲ್ಲಿ ಸಮೀಕ್ಷಾ (ಪ್ರ), ವಿಸ್ಮಯ್ (ದ್ವಿ) ಸ್ಥಾನ ವಿ.ಆರ್. ಪ್ರಭಾವತಿ, ಚನ್ನಂಗಿ ವಿಎಸ್‌ಎಸ್‌ಎನ್ ಸೊಸೈಟಿ ನಿರ್ದೇಶಕ ವಿ.ವಿ. ಡಾಲು, ದೇವಣಗೇರಿ ವಿಎಸ್‌ಎಸ್‌ಎನ್ ಸೊಸೈಟಿ ನಿರ್ದೇಶಕ ವಿ.ಎಲ್. ಸುರೇಶ್, ಹಾತೂರು ವಿಎಸ್‌ಎಸ್‌ಎನ್ ಸೊಸೈಟಿ ನಿರ್ದೇಶಕ ಎಚ್.ಡಿ. ಶ್ರೀನಿವಾಸ್, ತಿತಿಮತಿ ವಿಎಸ್‌ಎಸ್‌ಎನ್ ಸೊಸೈಟಿ ಸಿಇಓ ವಿ.ಎಸ್. ಸುಬ್ರಮಣಿ, ನಿರ್ದೇಶಕಿ ಜಯಮ್ಮ, ಸೈನಿಕರಾದ ವಿ.ಎಂ. ಕೃಷ್ಣಕುಮಾರ್, ಕ್ರೀಡಾಪಟು ಪ್ರಾಣೇಶ್, ಬಾಣಸಿಗ ನವೀನ್ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದ ರಚನಾ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಹೆಚ್.ಎಸ್. ಜೀವನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಲೋಹಿತ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಾದ ಕೆ. ಆರ್. ಸತೀಶ್, ವಿ.ಎನ್. ಮಿಥನ್, ವಿ.ವಿ. ಭರತ್, ವಿ.ವಿ ಡಾಲು, ವಿ.ಎನ್. ದಿನೇಶ್, ವಿ.ಟಿ. ಶ್ರೇಯಸ್, ವಿ.ಪಿ. ಜೀವನ್, ವಿ.ಈ . ರಘು, ವಿ.ಡಿ. ಸಂಪತ್, ವಿ.ಬಿ. ವಿಠಲ, ರಾಜು ಶಿವರಾಜೇಗೌಡ, ವಿ.ಎಸ್. ಚಂದ್ರು, ವಿ.ಡಿ. ರಾಜು, ವಿ.ಎಸ್. ರಜತ್, ವಿ.ಎನ್. ಮಹೇಶ್, ಉಪಾಧ್ಯಕ್ಷರಾದ ವಿ.ಪಿ. ಡಾಲು, ಕಾರ್ಯದರ್ಶಿ ಎನ್. ಮಂಜುನಾಥ್, ಖಜಾಂಚಿ ಕೆ.ಬಿ. ಪವನ್ ಕುಮಾರ್ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚನ್ನನಾಯಕ ವೀಕ್ಷಕ ವಿವರಣೆ, ವಿನೋದ್, ಚೇತನ್, ಗಿರೀಶ್ ಹಾಗೂ ಮಹದೇವ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.